ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

Written By:

ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ಆಗಮನವಾಗುತ್ತಿರುವ ಸುದ್ದಿಯು ಈಗಾಗಲೇ ವಾಹನ ವಲಯದಲ್ಲಿ ಭಾರಿ ಸಂಚಲನವನ್ನುಂಟು ಮಾಡಿದೆ. ಈ ನಡುವೆ ಹೊಸ ಸ್ವಿಫ್ಟ್ ಕಾರಿನ ಮಾಹಿತಿ ಕೈಪಿಡಿ ಲೀಕ್ ಆಗಿರುವುದು ಈ ಬಹುನಿರೀಕ್ಷಿತ ಕಾರಿನಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಬಹುದು ಎಂಬುದಕ್ಕೆ ಮತ್ತಷ್ಟು ಆಸಕ್ತಿ ತುಂಬಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

2017 ಮಾರುತಿ ಸ್ವಿಫ್ಟ್ ಮಾಹಿತಿ ಪುಸ್ತಕವೂ ತವರೂರಾದ ಜಪಾನ್ ನಲ್ಲಿ ಬಯಲಾಗಿದೆ. ಇದರೊಂದಿಗೆ ಭಾರತದ ಈ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರಿನ ಮಾಹಿತಿಗಳು ಬಹಿರಂಗವಾಗಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಹಿಂದಿನ ಮಾದರಿಗಿಂತಲೂ ಹೆಚ್ಚು ಪ್ರಭಾವಶಾಲಿ ವಿನ್ಯಾಸ ನೀತಿಯನ್ನು ಹೊಸ ಸ್ವಿಫ್ಟ್ ಕಾರಿನಲ್ಲಿ ಅನುಸರಿಸಲಾಗಿದೆ. ಆದರೆ ಬದಿಯಲ್ಲಿ ಬಹುತೇಕ ಈಗಿನ ವಿನ್ಯಾಸಕ್ಕೆ ಸಾಮತ್ಯೆಯನ್ನು ಕಾಪಾಡಿಕೊಂಡಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಮಾರುತಿ ಬಲೆನೊ ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಸ್ವಿಫ್ಟ್, ಜಿನೆವಾ ಮೋಟಾರು ಶೋದಲ್ಲಿ ಜಾಗತಿಕ ಅನಾವರಣ ಕಾಣಲಿದೆ. ಎಲ್ ಇಡಿ ಟೈಲ್ ಲೈಟ್ ಜೊತೆ ಹಿಂದುಗಡೆ ಸ್ಪಾಯ್ಲರ್ ಸೇವೆಯನ್ನು ಕೊಡಲಾಗಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಕಾರಿನೊಳಗೆ ನೂತನ ಡ್ಯಾಶ್ ಬೋರ್ಡ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಟ್ವಿನ್ ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಅಲ್ಯೂಮಿನಿಯಂ ಫಿನಿಶ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ವಿಶಿಷ್ಟತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಬ್ಲೂಟೂತ್, ಆಕ್ಸ್, ಯುಎಸ್ ಬಿ ಕನೆಕ್ಟಿವಿಟಿ, ಆಟೋ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿ ಸೌಲಭ್ಯಗಳಿರಲಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಮಾಹಿತಿ ಪುಸಕ್ತದಲ್ಲಿರುವಂತೆಯೇ ಜಪಾನ್ ಆವೃತ್ತಿಯ ಮಾರುತಿ ಸ್ವಿಫ್ಟ್ ಆರ್ ವೆರಿಯಂಟ್ ಗಳಲ್ಲಿ ದೊರಕಲಿದೆ. ಅವುಗಳೆಂದರೆ ಹೈಬ್ರಿಡ್ ಆರ್ ಎಸ್, ಆರ್ ಎಸ್ ಟಿ, ಆರ್ ಎಸ್, ಹೈಬ್ರಿಡ್ ಎಂಎಲ್, ಎಕ್ಸ್ ಎಲ್ ಮತ್ತು ಎಕ್ಸ್ ಜಿ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಇದಕ್ಕೆ ಸೇರ್ಪಡೆಯೆಂಬಂತೆ ಜಾಗತಿಕವಾಗಿ ಹೆಚ್ಚು ಶಕ್ತಿಶಾಲಿ ಸ್ವಿಫ್ಟ್ ಸ್ಪೋರ್ಟ್ ವೆರಿಯಂಟ್ ಸಹ ಲಭ್ಯವಾಗಲಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಭಾರತದಲ್ಲಿ ಮುಂದಿನ ತಲೆಮಾರಿನ ಸ್ವಿಫ್ಟ್ ಕಾರು 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಹೊಸತಾದ 1.0 ಲೀಟರ್ ಬೂಸ್ಟರ್ ಜೆಟ್ ಸಹ ಇರಲಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಭಾರತ ಮಾದರಿಯು 5 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ. ಅತ್ತ ವಿದೇಶಗಳಲ್ಲಿ ಆರು ಸ್ಪೀಡ್ ಆಟೋಬಾಕ್ಸ್ ಹಾಗೂ ಸಿವಿಟಿ ಆಯ್ಕೆಯೂ ಇರುತ್ತದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಜಪಾನ್ ನಲ್ಲಿ ಭಾರತೀಯ ರುಪಾಯಿ ಪ್ರಕಾರ ಸ್ವಿಫ್ಟ್ ಬೆಲೆಯು ಬೇಸ್ ಟು ವೀಲ್ ಮಾದರಿಯು 7.75 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಹೈಬ್ರಿಡ್ ಫೋರ್ ವೀಲ್ ಡ್ರೈವ್ ವೆರಿಯಂಟ್ 11.21 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಮುಂಬರುವ ಕೆಲವೇ ದಿನಗಳಲ್ಲಿ 2017 ಮಾರುತಿ ಸ್ವಿಫ್ಟ್ ಕಾರಿನ ಕುರಿತಂತೆ ಸಮಗ್ರ ವಿವರಗಳು ಬಹಿರಂಗವಾಗಲಿದೆ. ಇದರ ಹಗುರ ಭಾರದ ಚಾಸೀ ಸೇರಿದಂತೆ ದೇಹ ಸಂರಚನೆಯು ಹೆಚ್ಚಿನ ನಿರ್ವಹಣೆ ಹಾಗೂ ಎಂಜಿನ್ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

1.2 ಲೀಟರ್ ಪೆಟ್ರೋಲ್ ಮಾದರಿಯು 91 ಅಶ್ವಶಕ್ತಿಯನ್ನು ನೀಡುವುದಲ್ಲದೆ ಮೈಲ್ಡ್ ಹೈಬ್ರಿಡ್ ತಂತ್ರಗಾರಿಕೆಯೊಂದಿಗೆ ಪ್ರತಿ ಲೀಟರ್ ಗೆ 27.4 ಕೀ.ಮೀ. ಮೈಲೇಜ್ ನೀಡಲಿದೆ. ಅತ್ತ 101 ಅಶ್ವಶಕ್ತಿ ನೀಡಬಲ್ಲ 1.0 ಲೀಟರ್ ತ್ರಿಸಿಲಿಂಡರ್ ಎಂಜಿನ್ ಪ್ರತಿ ಲೀಟರ್ ಗೆ 20 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

ಹೊಸ ಸ್ವಿಫ್ಟ್ ಮಾಹಿತಿ ಕೈಪಿಡಿ ಲೀಕ್; ಮೈಲೇಜ್ 27.4 ಕೀ.ಮೀ.!

ಅಂತರಾಷ್ಟ್ರೀಯ ಮಾರುಕಟ್ಟೆಗೆ ಸ್ವಿಫ್ಟ್ ಮೊದಲು ಎಂಟ್ರಿ ಕೊಟ್ಟಲ್ಲಿ ಭಾರತದಲ್ಲಿ ಇದೇ ತಳಹದಿಯಲ್ಲಿ ನಿರ್ಮಾಣವಾಗಲಿರುವ ಸ್ವಿಫ್ಟ್ ಡಿಜೈರ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.

English summary
2017 Maruti Suzuki Swift Brochure Leaked — Here Is What India Can Expect!
Story first published: Monday, December 19, 2016, 13:48 [IST]
Please Wait while comments are loading...

Latest Photos