ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

2017 ಮಾರುತಿ ಸುಜುಕಿ ಸ್ವಿಫ್ಟ್ ತವರೂರಾದ ಜಪಾನ್ ನಲ್ಲಿ ಭರ್ಜರಿ ಅನಾವರಣಗೊಂಡಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತವನ್ನು ತಲುಪಲಿದೆ.

By Nagaraja

ತವರೂರಾದ ಜಪಾನ್ ನಲ್ಲಿ ಬಹುನಿರೀಕ್ಷಿತ ಮುಂದಿನ ತಲೆಮಾರಿನ 2017 ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರನ್ನು ಸುಜುಕಿ ಮೋಟಾರು ಕಾರ್ಪೋರೇಷನ್ ಸಂಸ್ಥೆಯು ಭರ್ಜರಿಯಾಗಿ ಅನಾವರಣಗೊಳಿಸಿದೆ. ಈ ಜನಪ್ರಿಯ ಕಾರು ಭಾರತ ಮಾರುಕಟ್ಟೆಯನ್ನು 2017 ಮಧ್ಯಂತರ ವೇಳೆಯಲ್ಲಿ ತಲುಪಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಆಂತರಿಕವಾಗಿ 'ವೈಎಸ್ ಡಿ' ಎಂಬ ಕೋಡ್ ಪಡೆದಿರುವ ಮೂರನೇ ತಲೆಮಾರಿನ ಸ್ವಿಫ್ಟ್ ಕಾರು ಈಗಿನ ಮಾದರಿಗಿಂತಲೂ ಸಂಪೂರ್ಣವಾಗಿ ವಿಭಿನ್ನವಾದ ಮುಖಛಾಯೆಯನ್ನು ಗಿಟ್ಟಿಸಿಕೊಂಡಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಕಾರಿನ ಮುಂಭಾಗದ ವಿನ್ಯಾಸದಿಂದ ಹಿಡಿದು, ಕಾರಿನ ಒಳಮೈ ಹಾಗೂ ವೈಶಿಷ್ಟ್ಯಗಳಲ್ಲಿ ಗಮನಾರ್ಹ ಬದಲಾವಣೆ ತರಲಾಗಿದ್ದು, ಆಧುನಿಕತೆಯನ್ನು ಕಾಪಾಡಿಕೊಂಡಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಕಾರಿನಲ್ಲಿ ಹೊಸತಾದ ಷಡ್ಭುಜೀಯ ಗ್ರಿಲ್ ಆಳವಡಿಸಲಾಗಿದೆ. ಇದನ್ನು ಕ್ರೋಮ್ ಸುತ್ತುವರಿಯಲಿದೆ. ಕಾರಿನ 'ಸಿ' ಸಿಲ್ಲರ್ ಕಪ್ಪು ವರ್ಣಮಯ ಹಾಗೂ ಬಾಗಿದ ಮೇಲ್ಚಾವಣಿ ಲಗತ್ತಿಸಲಾಗಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಬಲೆನೊ ತಳಹದಿಯಲ್ಲಿ ಅಭಿವೃದ್ಧಿಗೊಂಡಿರುವ ನೂತನ ಕಾರಿನಲ್ಲಿ ಇದೇ ಮೊದಲ ಬಾರಿಗೆ ಸುಜುಕಿ 'ಎಸ್' ಲಾಂಛನವು ಕಾರಿನ ಮುಂಭಾಗದಲ್ಲಿರುವ ಗ್ರಿಲ್ ಮೇಲ್ಗಡೆಯಲ್ಲಿ ರಚಿಸಲಾಗಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಹೆಚ್ಚು ಪ್ರಯೋಗಿಕವೆನಿಸಿರುವ ಡ್ಯುಯಲ್ ಜೆಟ್ ಫೋರ್ ಸಿಲಿಂಡರ್ ಟ್ವಿನ್ ಇಂಜೆಕ್ಟರ್ 1.2 ಕೆ ಸಿರೀಸ್ ಮೋಟಾರು ಮತ್ತು 111 ಅಶ್ವಶಕ್ತಿ ಉತ್ಪಾದಿಸಬಲ್ಲ ತ್ರಿ ಸಿಲಿಂಡರ್ ಬೂಸ್ಟರ್ ಜೆಟ್ ಎಂಜಿನ್ ಜೋಡಣೆಯಾಗಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಭಾರತ ಆವೃತ್ತಿಯಲ್ಲಿ ಈಗಿರುವ 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಮುಂದುವರಿಯಲಿದೆ. ಇದರ ಜೊತೆಗೆ 75 ಅಶ್ವಶಕ್ತಿ ಉತ್ಪಾದಿಸಬಲ್ಲ 1.3 ಲೀಟರ್ ಡೀಸೆಲ್ ಎಂಜಿನ್ ಕೂಡಾ ಇರಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಆಟೋಮ್ಯಾಟಿಕ್ ಜೊತೆಗೆ ಪೆಡಲ್ ಶಿಫ್ಟರ್ ತಂತ್ರಗಾರಿಕೆಯನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ನಿರೀಕ್ಷೆ ಮಾಡಬಹುದಾಗಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಏತನ್ಮಧ್ಯೆ ಸಿಯಾಝ್ ಹಾಗೂ ಎರ್ಟಿಗಾದಲ್ಲಿರುವುದಕ್ಕೆ ಸಮಾನವಾದ ಸುಜುಕಿ ಆಂತರಿಕವಾಗಿ ನಿರ್ಮಿಸಿರುವ 1.5 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಂ ತಂತ್ರಜ್ಞಾನವು ಬಳಕೆಯಾಗುವ ಸಾಧ್ಯತೆಯಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಕಾರಿನ ಆಯಾಮದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ಇದು ಬಲೆನೊಗಿಂತಲೂ (890 ಕೆ.ಜಿ) ಶೇಕಡಾ 15ರಷ್ಟು ಹಗುರ ಭಾರವಾಗಿರಲಿದೆ. ಇದು ರಸ್ತೆಯಲ್ಲಿ ಹೆಚ್ಚಿನ ಸ್ಥಿರತೆ ಕಾಪಾಡುವುದರೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ನೀಡಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಕಾರಿನೊಳಗೆ ಕ್ರೀಡಾತ್ಮಕ ಒಳಮೈ ಪ್ರಮುಖ ವೈಶಿಷ್ಟ್ಯವಾಗಿರಲಿದೆ. ನೂತನ ಡ್ಯಾಶ್ ಬೋರ್ಡ್, ಹೊಸ ಸ್ಟೀರಿಂಗ್ ವೀಲ್ ಹಾಗೂ ಕ್ರೀಡಾತ್ಮಕ ಟ್ವಿನ್ ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದರಲ್ಲಿರಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಭಾರತೀಯ ಸ್ವಿಫ್ಟ್ ಮಾದರಿಯು ಮುಂದಿನ ತಲೆಮಾರಿನ ಸ್ವಿಫ್ಟ್ ಡಿಜೈರ್ ಜೊತೆಗೆ ಒಳಮೈಯನ್ನು ಹಂಚಿಕೊಳ್ಳಲಿದೆ. ಇನ್ನು ಟಾಪ್ ಎಂಡ್ ಮಾದರಿಯು ಬಲೆನೊ ಹಾಗೂ ವಿಟಾರಾ ಬ್ರಿಝಾ ಕಾರಿಗೆ ಸಮಾನವಾಗಿ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪರ್ ಕಾರ್ ಪ್ಲೇ ಹಾಗೂ ಮಿರರ್ ಲಿಂಕ್ ಸಂಯೋಜನೆಗಳನ್ನು ಪಡೆಯಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಇನ್ನುಳಿದಂತೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಬಟನ್ ಮತ್ತು ಹೀಟಡ್ ಫ್ರಂಟ್ ಸೀಟು ಸೇವೆಗಳಿರಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಎಲ್ ಇಡಿ ಹೆಡ್ ಲ್ಯಾಂಪ್, 16 ಇಂಚುಗಳ ಅಲಾಯ್ ಚಕ್ರ, ಹ್ಯಾಲಗನ್ ಫಾಗ್ ಲ್ಯಾಂಪ್, ಹೊರಗಿನ ರಿಯರ್ ವ್ಯೂ ಮಿರರ್ ಜೊತೆ ಟರ್ನ್ ಇಂಡಿಕೇಟರ್, ಕೀಲೆಸ್ ಎಂಟ್ರಿ, ರಿಯರ್ ಫಾಗ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಸುರಕ್ಷತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಏಳು ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ರಿಯರ್ಸ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಕೆಂಟ್ರೋಲ್ ವ್ಯವಸ್ಥೆಯಿರಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಅದೇ ಹೊತ್ತಿಗೆ ಹೆಚ್ಚು ಶಕ್ತಿಶಾಲಿ ಸ್ವಿಫ್ಟ್ ಆರ್ ಎಸ್ ಆವೃತ್ತಿಯು ಕೂಡಾ ನಿಕಟ ಭವಿಷ್ಯದಲ್ಲೇ ಹಿಂಬಾಲಿಸಲಿದೆ. ಇದು ಕೂಡಾ 2017ನೇ ಸಾಲಿನಲ್ಲೇ ಬಿಡುಗಡೆಯಾಗಲಿದೆ. ಇದರಲ್ಲಿ ಹೆಚ್ಚು ಶಕ್ತಿಶಾಲಿ 1.4 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದ್ದು, 140 ಅಶ್ವಶಕ್ತಿ ಉತ್ಪಾದಿಸಲಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಕಳೆದ ಎಪ್ರಿಲ್ ತಿಂಗಳಿನಲ್ಲಷ್ಟೇ ಸ್ವಿಫ್ಟ್ ಜಾಗತಿಕವಾಗಿ ಐದು ದಶಲಕ್ಷ ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪಿತ್ತು. ಈ ಪೈಕಿ ಶೇಕಡಾ 54ರಷ್ಟು ಮಾರಾಟವನ್ನು ವಶಪಡಿಸಿಕೊಂಡಿರುವ ಭಾರತೀಯ ಸ್ವಿಫ್ಟ್ ಹಾಗೂ ಸ್ವಿಫ್ಟ್ ಡಿಜೈರ್ ಮಾದರಿಗಳು ಇದುವರೆಗೆ 2.7 ಮೀಲಿಯನ್ ಮಾರಾಟವನ್ನು ದಾಖಲಿಸಿದೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ತವರೂರಾದ ಜಪಾನ್ ಸೇರಿದಂತೆ ಭಾರತ, ಹಂಗೇರಿ, ಚೀನಾ, ಪಾಕಿಸ್ತಾನ, ಥಾಯ್ಲೆಂಡ್ ದೇಶಗಳಲ್ಲಿ ಸ್ವಿಫ್ಟ್ ಕಾರನ್ನು ಉತ್ಪಾದಿಸಲಾಗುತ್ತಿದೆ. ಒಟ್ಟಿನಲ್ಲಿ ಹೊಸ ಕಾರಿನ ಆಗಮನವನ್ನು ವಾಹನ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.

ಮುಸುಕು ಬಿಚ್ಚಿದ ಮಾಯಾಂಗನೆ; 2017 ಮಾರುತಿ ಸ್ವಿಫ್ಟ್ ಭರ್ಜರಿ ಅನಾವರಣ

ಅಂತಿಮವಾಗಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ನೂತನ 2017 ಮಾರುತಿ ಸ್ವಿಫ್ಟ್ ಬಿಡುಗಡೆಯಾಗಲಿದೆ. ಇದು ದೇಶದಲ್ಲಿ ಎಕ್ಸ್ ಶೋ ರೂಂ 5 ಲಕ್ಷ ರು.ಗಳಿಂದ 8 ಲಕ್ಷ ರು.ಗಳಷ್ಟು ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
India-Bound 2017 Suzuki Swift Breaks Cover In Japan
Story first published: Tuesday, December 27, 2016, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X