ನಿಮ್ಮ ಆಲ್ಟೊ ಈಗ ಹೆಚ್ಚು ಸುರಕ್ಷಿತ

Written By:

ದೇಶದ ನೆಚ್ಚಿನ ಕಾರು ಆಲ್ಟೊ ಈಗ ಹೆಚ್ಚು ಸುರಕ್ಷಿತವೆನಿಸಿದೆ. ಹೌದು, ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಆಲ್ಟೊ ಮಾದರಿಯ ಎಲ್ಲ ವೆರಿಯಂಟ್ ಗಳಿಗೂ ಚಾಲಕ ಬದಿಯ ಏರ್ ಬ್ಯಾಗ್ ನೀಡಲು ನಿರ್ಧರಿಸಿದೆ.

ಮಾರುತಿ ಆಲ್ಟೊ 800 ಹಾಗೂ ಆಲ್ಟೊ ಕೆ10 ವೆರಿಯಂಟ್ ಗಳಲ್ಲೂ ಐಚ್ಚಿಕ ಚಾಲಕ ಬದಿಯ ಏರ್ ಬ್ಯಾಗ್ ಲಭ್ಯವಾಗಲಿದೆ. ಇದರೊಂದಿಗೆ ಮಾರುತಿ ಆಲ್ಟೊ ಹೆಚ್ಚು ಸುರಕ್ಷಿತವೆನಿಸಿಕೊಳ್ಳಲಿದೆ.

ನಿಮ್ಮ ಆಲ್ಟೊ ಈಗ ಹೆಚ್ಚು ಸುರಕ್ಷಿತ

ಸತತವಾಗಿ 10ನೇ ವರ್ಷವೂ ದೇಶದ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರೆಂಬ ಗೌರವಕ್ಕೆ ಪಾತ್ರವಾಗಿರುವ ಮಾರುತಿ ಆಲ್ಟೊ ಮುಂದಿನ ದಿನಗಳಲ್ಲೂ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ನಿಮ್ಮ ಆಲ್ಟೊ ಈಗ ಹೆಚ್ಚು ಸುರಕ್ಷಿತ

ಇತ್ತೀಚೆಗಿನ ಕೆಲವು ತಿಂಗಳುಗಳಿಂದ ಕಾರುಗಳ ಭದ್ರತೆಗೂ ಹೆಚ್ಚಿ ಮಹತ್ವವನ್ನು ಕೊಡುತ್ತಿರುವ ಮಾರುತಿ ತನ್ನ ಎಸ್ ಕ್ರಾಸ್ ಹಾಗೂ ಬಲೆನೊ ಮಾದರಿಗಳಲ್ಲೂ ಏರ್ ಬ್ಯಾಗ್ ಜೊತೆ ಎಬಿಎಸ್ ಮತ್ತು ಇಬಿಡಿ ಸ್ಟ್ಯಾಂಡರ್ಡ್ ಆಗಿ ನೀಡಿದ್ದವು.

ನಿಮ್ಮ ಆಲ್ಟೊ ಈಗ ಹೆಚ್ಚು ಸುರಕ್ಷಿತ

ತದಾ ಬಳಿಕ ಸಿಯಾಝ್, ಎರ್ಟಿಗಾ, ಡಿಜೈರ್, ವ್ಯಾಗನಾರ್ ಮತ್ತು ಸೆಲೆರಿಯೊ ಮಾದರಿಗಳಲ್ಲಿ ಐಚ್ಚಿಕ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಆಯ್ಕೆಯನ್ನು ನೀಡಿತ್ತು.

ನಿಮ್ಮ ಆಲ್ಟೊ ಈಗ ಹೆಚ್ಚು ಸುರಕ್ಷಿತ

ಚಾಲಕ ಬದಿಯ ಏರ್ ಬ್ಯಾಗ್ ಜೊತೆಗೆ ಎಡಬದಿಯಲ್ಲಿ ಹೊರಗಡೆ ರಿಯರ್ ವ್ಯೂ ಮಿರರ್ ಸೌಲಭ್ಯವೂ ಲಭ್ಯವಾಗಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ನಿಮ್ಮ ಆಲ್ಟೊ ಈಗ ಹೆಚ್ಚು ಸುರಕ್ಷಿತ

2014-15 ಆರ್ಥಿಕ ಸಾಲಿನಲ್ಲಿ ಪ್ರತಿ ತಿಂಗಳಲ್ಲಿ ಸರಾಸರಿ 22,000 ಯುನಿಟ್ ಗಳ ಮಾರಾಟವನ್ನು ಕಾಯ್ದುಕೊಂಡಿರುವ ಮಾರುತಿ ಆಲ್ಟೊ ದೇಶದೆಲ್ಲೆಡೆ ಒಟ್ಟಾರೆ 29 ಲಕ್ಷಕ್ಕೂ ಹೆಚ್ಚು ಮಾರಾಟವನ್ನು ಕಂಡಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಆಲ್ಟೊ 800

  • ಸ್ಟ್ಯಾಂಡರ್ಡ್ (ಒ): 2,62,313 ರು.
  • ಎಲ್‌ಎಕ್ಸ್(ಒ): 2,98,844 ರು.
  • ಎಲ್‌ಎಕ್ಸ್‌ಐ(ಒ): 3,21,365 ರು.
  • ಎಲ್‌ಎಕ್ಸ್‌ಐ ಸಿಎನ್‌ಜಿ(ಒ): 3,78,420 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಆಲ್ಟೊ ಕೆ10

  • ಎಲ್‌ಎಕ್ಸ್(ಒ): 3,45,844 ರು.
  • ವಿಎಕ್ಸ್‌ಐ ಎಜಿಎಸ್(ಒ): 4,11,609 ರು.
  • ಎಲ್‌ಎಕ್ಸ್‌ಐ ಸಿಎನ್‌ಜಿ(ಒ): 4,08,162 ರು.

English summary
Alto now comes with driver airbag
Story first published: Saturday, January 16, 2016, 16:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark