ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

Written By:

ಹಬ್ಬದ ಸಂಭ್ರಮದ ವಾತಾವರಣದಲ್ಲಿ ಗರಿಷ್ಠ ಮಾರಾಟವನ್ನು ಗುರಿ ಮಾಡಿರುವ ದೇಶದ ಮುಂಚೂಣಿಯ ಸಂಸ್ಥೆಗಳು ತಾಜಾ ಹಾಗೂ ಪರಿಷ್ಕೃತ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿದೆ. ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿ ಸಹ ಇದರಿಂದ ಹೊರತಾಗಿಲ್ಲ. ಪ್ರಸ್ತುತ ಹಬ್ಬದ ಆವೃತ್ತಿಯ ವೇಳೆಯಲ್ಲಿ ಆಡಿ ಅತಿ ನೂತನ ಕ್ಯೂ ಡೈನಾಮಿಕ್ ಎಡಿಷನ್ ಕಾರನ್ನು ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ನೂತನ ಆಡಿ ಡೈನಾಮಿಕ್ ಎಡಿಷನ್ ವಿಶೇಷ ಆವೃತ್ತಿಯ ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 39.78 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ನೂತನ ಕಾರಿನ ಅಂದತೆಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ತನ್ಮೂಲಕ ಸ್ಟಾಂಡರ್ಡ್ ವೆರಿಯಂಟ್ ಗಿಂತಲೂ ವಿಭಿನ್ನತೆಯನ್ನು ಕಾಪಾಡಿಕೊಂಡಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಕಾರು ಸೀಮಿತ 100 ಸಂಖ್ಯೆಯಲ್ಲಿ ಮಾತ್ರ ನಿರ್ಮಾಣವಾಗಲಿದೆ. ಈ ಹಿನ್ನಲೆಯಲ್ಲಿ ಆಸಕ್ತ ಗ್ರಾಹಕರು ಆದಷ್ಟು ಬೇಗನೇ ಆಡಿ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ಔರಾಂಗಬಾದ್ ನಲ್ಲಿರುವ ಘಟಕದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗಲಿರುವ ಆಡಿ ಕ್ಯೂ3 ಡೈನಾಮಿಕ್ ಎಡಿಷನ್, ಇ-ಎಲ್ ಇಡಿ ಬೆಳಕಿನ ಸೇವೆಯನ್ನು ಪಡೆಯಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ಮುಂಭಾಗದ ಬಾಗಿಲಿನಲ್ಲಿ ಲೊಗೊ ಪ್ರೊಜೊಕ್ಷನ್ ಕಾರ್ಪೆಟ್ ಲ್ಯಾಂಪ್ , ಆಕ್ರಮಣಕಾರಿ ಫ್ರಂಟ್ ಲೋವರ್ ಬಂಪರ್, ಲಿಪ್ ಸ್ಪಾಯ್ಲರ್, ಸ್ಪೋರ್ಟ್ಸ್ ಏರ್ ಇನ್ ಲೆಟ್ ಕವರ್, ಫ್ರಂಟ್ ಗ್ರಿಲ್ ನಲ್ಲಿ ಕ್ರೋಮ್ ಸ್ಪರ್ಶತೆ, ಕ್ಲಿಯರ್ ಲೆನ್ಸ್ ಟೈಲ್ ಲ್ಯಾಂಪ್, ಹಿಂದುಗಡೆ ಬಾಗಿಲಿನಲ್ಲಿ ಕ್ವಾಟ್ರೊ ಬ್ಯಾಡ್ಜಿಂಗ್ ಇರಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ವೀಲ್ ಆರ್ಚ್ ಮೇಲೆ ಫುಲ್ ಪೈಂಟ್ ಫಿನಿಶ್ ನೊಂದಿಗೆ ಮತ್ತಷ್ಟು ಸ್ಟೈಲಿಷ್ ಎನಿಸಿಕೊಳ್ಳಲಿದೆ. ಇದರಲ್ಲದೆ ಎಂಜಿನ್ ಹೊಂದಾಣಿಕೆ, ಸ್ಟೀರಿಂಗ್, ಗೇರ್ ಬಾಕ್ಸ್ ಹೊಂದಾಣಿಕೆಗಾಗಿ ಆಡಿ ಡ್ರೈವ್ ಸೆಲೆಕ್ಟ್ ಆಯ್ಕೆಯಿರಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ಕಾರಿನೊಳಗೆ ಎಂಎಂಐ ನೇವಿಗೇಷನ್ ಸಿಸ್ಟಂ, ಪಾರ್ಕಿಂಗ್ ಸಿಸ್ಟಂ ಪ್ಲಸ್ ಜೊತೆ ರಿಯರ್ ವ್ಯೂ ಕ್ಯಾಮೆರಾ, ಆಡಿ ಸೌಂಡ್ ಸಿಸ್ಟಂ ಮತ್ತು ವಾಯ್ಸ್ ಡೈಲಾಗ್ ವ್ಯವಸ್ಥೆಯಿರಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ಆಡಿ ಕ್ಯೂ3 ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲಿ ಉತ್ತಮ ಸಿಗ್ನಲ್ ಗಾಗಿ ಫೋನ್ ಬಾಕ್ಸ್, ಹಾಡುಗಳನ್ನು ಸ್ಟೋರ್ ಮಾಡಲು 20 ಜಿಬಿ, ಬ್ಲೂಟೂತ್ ಕನೆಕ್ಟಿವಿಟಿ, ವಾಯ್ಸ್ ಸ್ಟ್ರೀಮಿಂಗ್ ಇತ್ಯಾದಿ ಸೇವೆಯಿರಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ಇನ್ನುಳಿದಂತೆ ಎಲ್ ಇಡಿ ಇಂಟಿರಿಯರ್ ಪ್ಯಾಕೇಜ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಫ್ರಂಟ್ ಸೀಟು ಎಂಬಿತ್ಯಾದಿ ವೈಶಿಷ್ಟ್ಯಗಳು ಇರಲಿದೆ.

ಹಬ್ಬಕ್ಕೆ ಆಡಿ ಕೊಡುಗೆ; ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ಬಿಡುಗಡೆ

ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಆಡಿ ಕ್ಯೂ3 ಡೈನಾಮಿಕ್ ಎಡಿಷನ್ ನಲ್ಲಿರುವ 2.0 ಲೀಟರ್ ಡೀಸೆಲ್ ಎಂಜಿನ್ 380 ಎನ್ ಎಂ ತಿರುಗುಬಲದಲ್ಲಿ 174 ಅಶ್ವಶಕ್ತಿಯನ್ನು ನೀಡಲಿದೆ. ಇದು ಎಸ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಆಲ್ ವೀಲ್ ಚಾಲನಾ ವ್ಯವಸ್ಥೆಯಲ್ಲೂ ಲಭ್ಯವಿರುತ್ತದೆ.

Read more on ಆಡಿ audi
English summary
Audi India Launches An All-New Special Edition For 2016 Festive Season
Story first published: Thursday, October 6, 2016, 15:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark