ನೋಡಲು ಮರೆಯದಿರಿ ದಟ್ಸನ್ ಗೊ ರಾಲಿ ಕಾನ್ಸೆಪ್ಟ್ ಕಾರು

Written By:

2016 ಆಟೋ ಎಕ್ಸ್ ಪೋದಲ್ಲಿ ಅನೇಕ ಹೊಸ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿರುವ ದಟ್ಸನ್, ಮಗದೊಂದು ಅತ್ಯಾಕರ್ಷಕ ರಾಲಿ ಕಾರನ್ನು ಅನಾವರಣಗೊಳಿಸಿದೆ. ಅದುವೇ, ದಟ್ಸನ್ ಗೊ ರಾಲಿ ಕಾನ್ಸೆಪ್ಟ್.

ದಟ್ಸನ್ ರಾಲಿ ಕಾರು ಒಂದು ಪರಿಪೂರ್ಣ ರಾಲಿ ಕಾರಾಗಿರಲಿದ್ದು, ಎಂಜಿನ್ ತಾಂತ್ರಿಕತೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡುಬರಲಿದೆ. ಇದಕ್ಕನುಸಾರವಾಗಿ ಕಾರಿನ ಹೊರಮೈ ಮತ್ತು ಒಳಮೈಯಲ್ಲಿ ಬದಲಾವಣೆ ಕಂಡುಬಂದಿದೆ.

ದಟ್ಸನ್ ಗೊ ರಾಲಿ ಕಾನ್ಸೆಪ್ಟ್

ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನಷ್ಟು ಸ್ಥಿರತೆ ಹಾಗೂ ಎಸ್‌ಯುವಿ ಶೈಲಿಯ ಗ್ರೌಂಡ್ ಕ್ಲಿಯರನ್ಸ್ ನೂತನ ಗೊ ರಾಲಿ ಕಾರಿನಲ್ಲಿ ಕಾಪಾಡಿಕೊಳ್ಳಲಾಗಿದೆ. ಇದು 2017 ಅಥವಾ 2018ನೇ ಸಾಲಿನಲ್ಲಿ ಮಾರುಕಟ್ಟೆ ತಲುಪಲಿದ್ದು, ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿಗಳಿಗೆ ಸೆಡ್ಡು ನೀಡಲಿದೆ.

ದಟ್ಸನ್ ಗೊ ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿರುವ ಗೊ ಕ್ರಾಸ್, ರಾಲಿ ಕಾರಿನ ಶೈಲಿಯ ಆಸನ ವ್ಯವಸ್ಥೆಗಳನ್ನು ಪಡೆದಿದೆ. ಅಲ್ಲದೆ ರೋಲ್ ಕೇಜ್ ಶೈಲಿಯ ದೇಹ ರಚನೆ ಪಡೆದಿದೆ.

English summary
Datsun Go Rally Showcased at 2016 Auto Expo
Story first published: Thursday, February 11, 2016, 16:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X