ನಿಸ್ಸಾನ್ 'ಗಾಡ್ಜಿಲ್ಲಾ' ಪವರ್‌ಫುಲ್ ಜಿಟಿಆರ್ ಕಾರಿನ ಶಕ್ತಿ ಪ್ರದರ್ಶನ

Written By:

ಭಾರತದಲ್ಲಿ ಅತ್ಯಂತ ಶಕ್ತಿಶಾಲಿ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್, ಕೊಟ್ಟ ಮಾತಿಗೆ ತಕ್ಕಂತೆ ಅತ್ಯಂತ ಪವರ್ ಫುಲ್ 'ಗಾಡ್ಜಿಲ್ಲಾ' ಕಾರನ್ನು ಅನಾವರಣಗೊಳಿಸಿದೆ.

ವಿಶ್ವದ್ಯಾಂತ 'ಗಾಡ್ಜಿಲ್ಲಾ' ಎಂಬ ಹೆಸರಿನಿಂದಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಿಸ್ಸಾನ್ ಜಿಟಿಆರ್ ಸೂಪರ್ ಕಾರು ಪ್ರಸಕ್ತ ಸಾಲಿನಲ್ಲೇ ಭಾರತ ಪ್ರವೇಶ ಪಡೆಯಲಿರುವುದು ಮಗದೊಂದು ಖುಷಿ ಸುದ್ದಿಯಾಗಿದೆ.

To Follow DriveSpark On Facebook, Click The Like Button
ನಿಸ್ಸಾನ್ ಜಿಟಿಆರ್

ಎಂಜಿನ್ ತಾಂತ್ರಿಕತೆ

ಶಕ್ತಿಶಾಲಿ 3.8 ಲೀಟರ್ ಟ್ವಿನ್ ಟರ್ಬೊ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನಿಸ್ಸಾನ್ ಜಿಟಿಆರ್, 628 ಎನ್‌ಎಂ ತಿರುಗುಬಲದಲ್ಲಿ 542 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ವೇಗವರ್ಧನೆ: 3 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ: ಗಂಟೆಗೆ 315 ಕೀ.ಮೀ.

ಶೈಲಿ

ಅತ್ಯಂತ ಹೊಳಪಿನಿಂದ ಕೂಡಿರುವ ನಿಸ್ಸಾನ್ ಜಿಟಿಆರ್ ಪ್ರತಿಯೊಬ್ಬ ವಾಹನ ಪ್ರೇಮಿಯನ್ನು ತನ್ನತ್ತ ಸೆಳೆಯುತ್ತಿದೆ. ತನ್ನ ಶಕ್ತಿಯನ್ನು ಪ್ರತಿಬಿಂಬಿಸುವಂತೆ ನಿಸ್ಸಾನ್ ಜಿಟಿಆರ್ ಮುಂಭಾಗದಲ್ಲಿ ದೊಡ್ಡದಾದ ಫ್ರಂಟ್ ಗ್ರಿಲ್ ಪಡೆದಿದೆ.

ಹಿಂಭಾಗದಲ್ಲಿ 1990ರ ನಿಸ್ಸಾನ್ ಜಿಟಿಆರ್‌ಗೆ ಗೌರವ ಸೂಚಿಸಿಕೊಂಡು ತಲಾ ನಾಲ್ಕು ಟೈಲ್ ಲ್ಯಾಂಪ್ ಗಳು ಹಾಗೂ ಎಕ್ಸಾಸ್ಟ್ ಕೊಳವೆಗಳನ್ನು ಲಗತ್ತಿಸಲಾಗಿದೆ. ಇದು ಈ ಐಕಾನಿಕ್ ಕಾರಿಗೆ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಲಭ್ಯತೆ, ಪ್ರತಿಸ್ಪರ್ಧಿಗಳು

2016 ಸೆಪ್ಟೆಂಬರ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿರುವ ನಿಸ್ಸಾನ್ ಜಿಟಿಆರ್, ಪ್ರಮುಖವಾಗಿಯೂ ಮರ್ಸಿಡಿಸ್ ಎಎಂಜಿ ಜಿಟಿಆಸ್ ಮತ್ತು ಪೋರ್ಷೆ 911 ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ನಿಸ್ಸಾನ್ ಜಿಟಿಆರ್

ನಿಸ್ಸಾನ್ ರಾಯಭಾರಿ ಜಾನ್ ಅಬ್ರಹಾಂ

ಇದೇ ಸಂದರ್ಭದಲ್ಲಿ ತನ್ನೆಲ್ಲ ಮಾದರಿಗಳ ಪ್ರಚಾರಕ್ಕೆ ಉತ್ತೇಜನ ನೀಡಲು ಮುಂದಾಗಿರುವ ನಿಸ್ಸಾನ್, ಸಂಸ್ಥೆಯ ಮುಖ್ಯ ರಾಯಭಾರಿಯನ್ನಾಗಿ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರನ್ನು ನೇಮಕಗೊಳಿಸಿದೆ. ನಿಸ್ಸಾನ್ ಜಿಟಿಆರ್ ಸೇರಿದಂತೆ ಮುಂಬರುವ ಎಕ್ಸ್ ಟ್ರೈಲ್ ಹೈಬ್ರಿಡ್ ಕಾರಿನ ಪ್ರಚಾರವನ್ನು ಜಾನ್ ಅಬ್ರಹಾಂ ಮಾಡಲಿದ್ದಾರೆ.

English summary
Nissan's 'Godzilla' Has Come To India - GT-R Showcased At Auto Expo
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X