ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

Written By:

ಗ್ಲೋಬಲ್ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಬಜಾಜ್ ಕ್ಯೂಟ್ ಕ್ವಾಡ್ರಾಸೈಕಲ್ ವಾಹನವು ಒಂದು ಸ್ಟಾರ್ ರೇಟಿಂಗ್ ಗೆಲ್ಲುವಲ್ಲಿ ಯಶಸ್ವಿ ಕಂಡಿದೆ. ಜನಪ್ರಿಯ ಪ್ರಯಾಣಿಕ ಕಾರುಗಳೇ ಜಾಗತಿಕ ಮಟ್ಟದ ಕ್ರಾಶ್ ಟೆಸ್ಟ್ ನಲ್ಲಿ ಭಾರಿ ವೈಫಲ್ಯವನ್ನು ಅನುಭವಿಸಿರುವ ಈ ವೇಳೆಯಲ್ಲಿ ಬಜಾಜ್ ಕ್ಯೂಟ್ ಏಕೈಕ ಸ್ಟಾರ್ ಗೆದ್ದಿರುವುದು ಗಮನ ಸೆಳೆದಿದೆ.

To Follow DriveSpark On Facebook, Click The Like Button
ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ದೇಶದಲ್ಲಿ ಕಾನೂನಿನ ತೊಡಕು ಎದುರಾಗಿರುವ ಹಿನ್ನಲೆಯಲ್ಲಿ ನಿರ್ಮಾಣ ಸ್ವರೂಪ ಪಡೆದಿರುವ ಹೊರತಾಗಿಯೂ ಬಜಾಜ್ ಕ್ಯೂಟ್ ಬಿಡುಗಡೆ ಕನಸು ಇನ್ನು ನನಸಾಗಿಲ್ಲ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಎದುರುಗಡೆಯಿಂದ ನಡೆಸಿರುವ ಢಿಕ್ಕಿ ಪರೀಕ್ಷೆಯಲ್ಲಿ ಕ್ಯೂಟ್ ರಚನೆಯು ಅಸ್ಥಿರವಾಗಿರುವುದು ಕಂಡುಬಂದಿದೆ. ಹಾಗಾಗಿ ಹೆಚ್ಚಿನ ಭಾರ ತುಂಬುವುದು ಅಪಾಯಕಾರಿಯೆನಿಸಿಕೊಳ್ಳಲಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಬದಿಯಲ್ಲಿ ನಡೆಸಿರುವ ಪರೀಕ್ಷೆಯಲ್ಲಿ ಢಿಕ್ಕಿ ಹೊಡೆದ ಭಾಗದಲ್ಲಿ ಎ ಪಿಲ್ಲರ್ ನಿಂದ ಡೋರ್ ಬೇರ್ಪಟ್ಟಿದೆ. ಇನ್ನು ಒಳಗೆ ಕುಳಿತುಕೊಂಡ ಪ್ರಯಾಣಿಕನಿಗೂ ನೋವು ಸಂಭವಿಸುವ ಭೀತಿಯಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಎದುರುಗಡೆಯಿಂದ ಢಿಕ್ಕಿ ಹೊಡೆಯುವಾಗ ಕೃತಕ ಮಾನವನ ತಲೆಯು ನೇರವಾಗಿ ಸ್ಟೀರಿಂಗ್ ವೀಲ್ ಮೇಲೆ ಅಪ್ಪಳಿಸುತ್ತದೆ. ಇಲ್ಲಿ ಯಾವುದೇ ಏರ್ ಬ್ಯಾಗ್ ಸೌಲಭ್ಯವಿಲ್ಲದಿರುವುದರಿಂದ ಗಾಯಗಳಾಗುವ ಸಂಭವ ಜಾಸ್ತಿಯಾಗಿರುತ್ತದೆ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಹಾಗಿದ್ದರೂ ಕುತ್ತಿಗೆಗೆ ನೀಡಲಾಗುತ್ತಿರುವ ರಕ್ಷಣೆಯು ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದನ್ನು ಗ್ಲೋಬಲ್ ಎನ್ ಸಿಎಪಿ ಪ್ರತ್ಯೇಕವಾಗಿ ಉಲ್ಲೇಖಿಸಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಇನ್ನು ಮೊಣಕಾಲು, ಎಲುಬು ಮತ್ತು ಸೊಂಟದ ರಕ್ಷಣೆಯು ಕಳಪೆ ಮಟ್ಟದಲ್ಲಿದೆ. ಎದೆಯ ಭಾಗದ ರಕ್ಷಣೆಯಲ್ಲೂ ಹಿನ್ನಡೆ ಅನುಭವಿಸಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಕಳೆದ ಅಕ್ಟೋಬರ್ ತಿಂಗಳಲ್ಲಿ ಪರಿಚಯವಾಗಿರುವ ಬಜಾಜ್ ಕ್ಯೂಟ್ ಇದುವರೆಗೆ 19 ದೇಶಗಳಿಗೆ 334 ಯುನಿಟ್ ಗಳಷ್ಟು ರಫ್ತು ಮಾಡಲಾಗಿದೆ.

ಢಿಕ್ಕಿ ಪರೀಕ್ಷೆಯಲ್ಲಿ ಒಂದು ಸ್ಟಾರ್ ರೇಟಿಂಗ್ ಗೆದ್ದ ಬಜಾಜ್ ಕ್ಯೂಟ್

ಆರಂಭದಲ್ಲಿ ಆರ್‌ಇ60 ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಬಜಾಜ್ ನ ಬಹುನಿರೀಕ್ಷಿತ ಕ್ವಾಡ್ರಾಸೈಕಲ್ ಮಾದರಿಗೆ ಕಾನೂನು ತೊಡಕು ಎದುರಾಗಿದೆ. ಇದಕ್ಕೆ ಕೇಂದ್ರ ಸರಕಾರ ಇನ್ನಷ್ಟೇ ನಿಶಾನೆ ನೀಡಬೇಕಿದೆ.

ಮುಖ್ಯಾಂಶಗಳು:

ಮುಖ್ಯಾಂಶಗಳು:

216 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಪೆಟ್ರೋಲ್ ಎಂಜಿನ್

17ರಿಂದ 20 ಅಶ್ವಶಕ್ತಿ ಸಾಧ್ಯತೆ

ಪೆಟ್ರೋಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ ಮಾದರಿಗಳಲ್ಲಿ ಲಭ್ಯ

ಮೈಲೇಜ್ 37 ಪ್ರತಿ ಕೀ.ಮೀ.

ಅಂದಾಜು ಬೆಲೆ: 2 ಲಕ್ಷ ರು.

English summary
Bajaj Qute Earns One Star Rating At Global NCAP Crash Tests
Story first published: Friday, November 18, 2016, 17:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark