ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

Written By:

'ವಿಶ್ವ ಪರಿಸರ ದಿನಾಚರಣೆ'ಯಂದು ನಮ್ಮ ಬೆಂಗಳೂರಿಗೆ ಮೊತ್ತ ಮೊದಲ ವೋಲ್ವೋ ಬಸ್ ಪ್ರವೇಶ ಪಡೆದಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಸರ ಸ್ನೇಹಿ ವೋಲ್ವೋ ಬಸ್ ಗಳ ಸೇವೆಯನ್ನು ಪಡೆಯಲಿದೆ.

ಹಾಗಿದ್ದರೂ ಈ ಬಗ್ಗೆ ಬಿಎಂಟಿಸಿ ಹಾಗೂ ವೋಲ್ವೋ ಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ. ಅಲ್ಲದೆ ಎಷ್ಟು ವೋಲ್ವೋ ಹೈಬ್ರಿಡ್ ಬಸ್ಸುಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂಬುದು ತಿಳಿದು ಬಂದಿಲ್ಲ.

To Follow DriveSpark On Facebook, Click The Like Button
ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

ವೋಲ್ವೋ ಹೈಬ್ರಿಡ್ ಬಸ್ಸುಗಳು ವಾಯು ಮಾಲಿನ್ಯ ತಡೆಯಲು ಸಹಕಾರಿಯಾಗಲಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

ವೋಲ್ವೋ ಹೈಬ್ರಿಡ್ ಬಸ್ಸಿನಲ್ಲಿ ಡೀಸೆಲ್ ಎಂಜಿನ್ ಮತ್ತು ಲಿಥಿಯಂ ಇಯಾನ್ ಎಲೆಕ್ಟ್ರಿಕ್ ಮೋಟಾರು ಬಳಕೆ ಮಾಡಲಾಗುವುದು.

ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

ಕಡಿಮೆ ವೇಗದಲ್ಲಿ ಸಂಚರಿಸುವಾಗ, ಬಾಗಿಲು ಮುಚ್ಚುಗಡೆಗೊಳಿಸಲು, ಸ್ಟೀರಿಂಗ್ ಮತ್ತು ಇತರ ಹೈಡ್ರಾಲಿಕ್ ಪ್ರಕ್ರಿಯೆಗಳಿಗೆ ಬ್ಯಾಟರಿ ಚೈತನ್ಯವನ್ನು ಬಳಕೆ ಮಾಡಲಾಗುವುದು.

ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

'ರಿ ಜರೇಟಿವ್ ಬ್ರೇಕಿಂಗ್' ಮೂಲಕ ಬ್ಯಾಟರಿ ಚಾರ್ಜ್ ಆಗಲಿದೆ. ಇವೆಲ್ಲದರ ಮುಖಾಂತರ ಶೇಕಡಾ 30ರಷ್ಟು ಡೀಸೆಲ್ ಉಳಿಸಬಹುದಾಗಿದೆ.

ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

ವೋಲ್ವೋ ಹೈಬ್ರಿಡ್ ಬಸ್ಸುಗಳಿಗೆ ಕೇಂದ್ರ ಸರಕಾರದ ಫೇಮ್ (Faster Adoption & manufacturing of Electric and Hybrid Vehicle) ಯೋಜನೆಯ ಪ್ರಕಾರ 61 ಲಕ್ಷ ರು.ಗಳಷ್ಟು ಸಬ್ಸಿಡಿಯೂ ದೊರಕಲಿದೆ.

ಸದ್ದಿಲ್ಲದೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ವೋಲ್ವೋ ಹೈಬ್ರಿಡ್ ಬಸ್

ಹೊಸಕೋಟೆಯಲ್ಲಿರುವ ವೋಲ್ವೋ ಘಟಕದಲ್ಲಿ ಹೈಬ್ರಿಡ್ ಬಸ್ಸುಗಳನ್ನು ಜೋಡಣೆ ಮಾಡಲಾಗುವುದು. ಆದರೆ ಬ್ಯಾಟರಿಗಳಂತಹ ಮುಖ್ಯ ಘಟಕಗಳನ್ನು ಆಮದು ಮಾಡಲಾಗುವುದು.

English summary
Bangalore Metropolitan Transport Corporation gets Volvo Hybrid Bus
Story first published: Tuesday, June 7, 2016, 11:25 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark