ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

Written By:

ಭಾರತದಲ್ಲಿ ಷೆವರ್ಲೆ ಕಾರುಗಳ ಬೆಲೆಗಳಲ್ಲಿ ಭಾರಿ ಕಡಿತವುಂಟಾಗಿದೆ. ಇದರಲ್ಲಿ ಪ್ರಮುಖವಾಗಿಯೂ ಎಂಜಾಯ್ ಬಹು ಬಳಕೆಯ ವಾಹನ ಹಾಗೂ ಟ್ರೈಲ್ ಬ್ಲೇಜರ್ ಬೆಲೆಗಳಲ್ಲಿ ಭರ್ಜರಿ ಇಳಿಕೆ ಕಂಡುಬಂದಿದೆ. ಹಬ್ಬದ ಸಂಭ್ರಮದ ಅಂಗವಾಗಿ ಷೆವರ್ಲೆ ಟ್ರೈಲ್ ಬ್ಲೇಜರ್ ಮತ್ತು ಎಂಜಾಯ್ ಬೆಲೆಗಳಲ್ಲಿ ಅನುಕ್ರಮವಾಗಿ 3.04 ಹಾಗೂ 1.94 ಲಕ್ಷ ರು.ಗಳಷ್ಟು ಇಳಿಕೆ ಕಂಡುಬಂದಿದೆ.

To Follow DriveSpark On Facebook, Click The Like Button
ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

ಷೆವರ್ಲೆ ಎಂಜಾಯ್ ಬೆಲೆಗಳಲ್ಲಿ ಭಾರಿ ಕಡಿತ ಮಾಡಿರುವುದರೊಂದಿಗೆ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ನೂತನ ಬೆಲೆಗಳು 4.99 ಲಕ್ಷ ರು.ಗಳಿಂದ 7.24 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

ಇದಕ್ಕೂ ಮೊದಲು ಷೆವರ್ಲೆ ಟ್ರೈಲ್ ಬ್ಲೇಜರ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 26.99 ಲಕ್ಷ ರು.ಗಳಲ್ಲಿ ಬಿಡುಗಡೆಯಾಗಿತ್ತು. ಈಗ 3.04 ಲಕ್ಷ ರು.ಗಳಷ್ಟು ಇಳಿಕೆಯೊಂದಿಗೆ ಇದರ ಬೆಲೆ 23.95 ಲಕ್ಷ ರು.ಗಳಿಗೆ ಬಂದು ತಲುಪಿದೆ.

ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

ಷೆವರ್ಲೆ ಎಂಜಾಯ್ ಬೇಸ್ ವೆರಿಯಂಟ್ ಬೆಲೆಯಲ್ಲಿ 1.53 ಲಕ್ಷ ರು.ಗಳಷ್ಟು ಇಳಿಕೆಯುಂಟಾಗಿದೆ. ಇದರೊಂದಿಗೆ ಈ ಹಿಂದಿದ್ದ 6.52 ಲಕ್ಷ ರು.ಗಳಿಂದ 4.99 ಲಕ್ಷ ರು.ಗಳಿಗೆ ಬೆಲೆ ಕಡಿತವಾಗಿದೆ.

ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

ಅದೇ ರೀತಿ ಟಾಪ್ ಎಂಡ್ ಮಾದರಿಯಲ್ಲಿ 1.81 ಲಕ್ಷ ರು.ಗಳಷ್ಟು ಬೆಲೆ ಕಡಿಗೊಂಡಿದ್ದು, ಇದೀಗ 6.24 ಲಕ್ಷ ರುಗಷ್ಟು ದುಬಾರಿಯೆನಿಸಲಿದೆ .

ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

ಡೀಸೆಲ್ ಬೇಸ್ ವೆರಿಯಂಟ್ ನಲ್ಲೂ 1.94 ಲಕ್ಷ ರು.ಗಳಷ್ಟು ಬೆಲೆ ಇಳಿಕೆಯಾಗಿದೆ. ತನ್ಮೂಲಕ ಈ ಹಿಂದಿದ್ದ 7.88 ಲಕ್ಷ ರು.ಗಳಿಂದ 5.99 ಲಕ್ಷ ರು.ಗಳಿಗೆ ಇಳಿಕೆಯಾಗಿದೆ. ಅದೇ ಹೊತ್ತಿಗೆ ಡೀಸೆಲ್ ಟಾಪ್ ಎಂಡ್ ಬೆಲೆಯಲ್ಲಿ 1.94 ಲಕ್ಷ ರು.ಗಳಷ್ಟು ಕಡಿತಗೊಂಡು 7.24 ಲಕ್ಷ ರು.ಗಳಿಗೆ ತಲುಪಿದೆ.

ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

2013ನೇ ಸಾಲಿನಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ಷೆವರ್ಲೆ ಎಂಜಾಯ್ ಮಾರುಕಟ್ಟೆಯಲ್ಲಿ ಗಮನಾರ್ಹ ಮಾರಾಟ ಸಾಧಿಸುವಲ್ಲಿ ವಿಫಲವಾಗಿತ್ತು.

ಷೆವರ್ಲೆ ಕಾರುಗಳಿಗೆ 3 ಲಕ್ಷ ರು.ಗಳಷ್ಟು ಭರ್ಜರಿ ಬೆಲೆ ಕಡಿತ

ಬ್ರ್ಯಾಂಡ್ ಮೌಲ್ಯ, ವ್ಯಾನ್ ಶೈಲಿಯ ವಿನ್ಯಾಸ, ತೀರಾ ಸಾಮಾನ್ಯ ಆಂತರಿಕ ಗುಣಮಟ್ಟತೆಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಪ್ರಸ್ತುತ ಹಬ್ಬದ ಸಂಭ್ರಮದಲ್ಲಿ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಷೆವರ್ಲೆ ಎಂಜಾಯ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಷೆವರ್ಲೆ ಎಂಜಾಯ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ (ರು.ಗಳಲ್ಲಿ)

ಎಲ್ ಎಸ್8: ಹಳೆಯ ದರ: 6,51,924 ಹೊಸ ದರ: 4,99,000

ಎಲ್ ಎಸ್7: ಹಳೆಯ ದರ: 6,54,650 ಹೊಸ ದರ: 4,99,000

ಎಲ್ ಟಿ8: ಹಳೆಯ ದರ: 7,31,771 ಹೊಸ ದರ: 5,64,000

ಎಲ್ ಟಿ7: ಹಳೆಯ ದರ: 7,16,499 ಹೊಸ ದರ: 5,64,000

ಎಲ್ ಟಿಝಡ್8: ಹಳೆಯ ದರ: 8,01,861 ಹೊಸ ದರ: 6,24,000

ಎಲ್ ಟಿಝಡ್7: ಹಳೆಯ ದರ: 8,01,588 ಹೊಸ ದರ: 6,24,000

ಷೆವರ್ಲೆ ಎಂಜಾಯ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಷೆವರ್ಲೆ ಎಂಜಾಯ್: ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ (ರು.ಗಳಲ್ಲಿ)

ಎಲ್ ಎಸ್8: ಹಳೆಯ ದರ: 7,88, 357 ಹೊಸ ದರ: 5,99,000

ಎಲ್ ಎಸ್7: ಹಳೆಯ ದರ: 7,91,188 ಹೊಸ ದರ: 5,99,000

ಎಲ್ ಟಿ8: ಹಳೆಯ ದರ: 8,34,411 ಹೊಸ ದರ: 6,64,000

ಎಲ್ ಟಿ7: ಹಳೆಯ ದರ: 8,41,022 ಹೊಸ ದರ: 6,64,000

ಎಲ್ ಟಿಝಡ್8: ಹಳೆಯ ದರ: 9,15,105 ಹೊಸ ದರ: 7,24,000

ಎಲ್ ಟಿಝಡ್7: ಹಳೆಯ ದರ: 9,17,832 ಹೊಸ ದರ: 7,24,000

English summary
Chevrolet Trailblazer, Enjoy Witnesses Huge Price Cut In India During Festive Season
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark