'ಗೂಗ್ಲಿ' ಮಾಡುವಲ್ಲಿ ಸ್ಪಿನ್ ವಿಫಲ; ಭಾರತಕ್ಕೆ ಎಸ್ಸೆನ್ಸಿಯಾ, ಬೀಟ್ ಆಕ್ಟಿವ್

Written By:

ಕಳೆದ ಕೆಲವು ಸಮಯಗಳಿಂದ ಅಮೆರಿಕ ಮೂಲದ ದೈತ್ಯ ವಾಹನ ಸಂಸ್ಥೆಯಾಗಿರುವ ಜನರಲ್ ಮೋಟಾರ್ಸ್ ಭಾರತದಲ್ಲಿ ಅತಿ ನೂತನ ಷೆವರ್ಲೆ ಸ್ಪಿನ್ ಬಹು ಬಳಕೆಯ ವಾಹನವನ್ನು (ಎಂಪಿವಿ) ಬಿಡುಗಡೆ ಮಾಡುವ ಬಗ್ಗೆ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ ಈಗ ಬಂದಿರುವ ನಿರಾಶಜನಕ ಸುದ್ದಿಯೊಂದರಲ್ಲಿ ಷೆವರ್ಲೆ ಸ್ಪಿನ್ ಭಾರತಕ್ಕೆ ಎಂಟ್ರಿ ಕೊಡುವುದು ಅನುಮಾನವೆನಿಸಿದೆ.

ಇದರ ಬದಲಾಗಿ ಅತಿ ನೂತನ ಷೆವರ್ಲೆ ಬೀಟ್ ಆಕ್ಟಿವ್ ಕ್ರಾಸೋವರ್ ಕಾರನ್ನು ಜನರಲ್ ಮೋಟಾರ್ಸ್ ಪರಿಚಯಿಸಲಿದೆ. ಇದರ ಜೊತೆಗೆ ನೂತನ ಬೀಟ್ ಹ್ಯಾಚ್ ಬ್ಯಾಕ್ ಮತ್ತು ಎಸ್ಸೆನ್ಸಿಯಾ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

To Follow DriveSpark On Facebook, Click The Like Button
'ಗೂಗ್ಲಿ' ಮಾಡುವಲ್ಲಿ ಸ್ಪಿನ್ ವಿಫಲ; ಭಾರತಕ್ಕೆ ಎಸ್ಸೆನ್ಸಿಯಾ, ಬೀಟ್ ಆಕ್ಟಿವ್

ನಿಮ್ಮ ಮಾಹಿತಿಗಾಗಿ 2016 ಆಟೋ ಎಕ್ಸ್ ಪೋದಲ್ಲಿ ಬೀಟ್ ಆಕ್ಟಿವ್ ಕಾನ್ಸೆಪ್ಟ್ ಕಾರನ್ನು ಷೆವರ್ಲೆ ಸಂಸ್ಥೆಯು ಪರಿಚಯಿಸಿತ್ತು. ಭಾರತದಲ್ಲಿ ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ವರ್ಧಿಸುತ್ತಿರುವ ಬೇಡಿಕೆಯನ್ನು ಮನಗಂಡಿರುವ ಸಂಸ್ಥೆಯು ತನ್ನ ಸಾನಿಧ್ಯವನ್ನು ಗಟ್ಟಿಪಡಿಸುವ ಇರಾದೆಯಲ್ಲಿದೆ.

'ಗೂಗ್ಲಿ' ಮಾಡುವಲ್ಲಿ ಸ್ಪಿನ್ ವಿಫಲ; ಭಾರತಕ್ಕೆ ಎಸ್ಸೆನ್ಸಿಯಾ, ಬೀಟ್ ಆಕ್ಟಿವ್

ಇನ್ನೊಂದೆಡೆ ಷೆವರ್ಲೆ ಎಸ್ಸೆನ್ಸಿಯಾ ಕಾಂಪಾಕ್ಟ್ ಸೆಡಾನ್ ಕಾರು ಭಾರತೀಯ ಮಧ್ಯಮ ವರ್ಗದ ಕುಟುಂಬ ವಿಭಾಗದವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಸದ್ಯ ಈ ವಿಭಾಗದಲ್ಲಿ ಮಾರುತಿ ಸುಜುಕಿ ಡಿಜೈರ್ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ.

'ಗೂಗ್ಲಿ' ಮಾಡುವಲ್ಲಿ ಸ್ಪಿನ್ ವಿಫಲ; ಭಾರತಕ್ಕೆ ಎಸ್ಸೆನ್ಸಿಯಾ, ಬೀಟ್ ಆಕ್ಟಿವ್

ಷೆವರ್ಲೆ ಬೀಟ್ ಆಕ್ಟಿವ್ ಕ್ರಾಸೋವರ್ ಅಥವಾ ಕ್ರೀಡಾ ಬಳಕೆಯ ವಾಹನವು ಭಾರತೀಯರಿಗೆ ಷೆವರ್ಲೆ ನೀಡುತ್ತಿರುವ ಕೊಡುಗೆಯಾಗಿರಲಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

'ಗೂಗ್ಲಿ' ಮಾಡುವಲ್ಲಿ ಸ್ಪಿನ್ ವಿಫಲ; ಭಾರತಕ್ಕೆ ಎಸ್ಸೆನ್ಸಿಯಾ, ಬೀಟ್ ಆಕ್ಟಿವ್

ಇದರಲ್ಲಿರುವ 1.0 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

'ಗೂಗ್ಲಿ' ಮಾಡುವಲ್ಲಿ ಸ್ಪಿನ್ ವಿಫಲ; ಭಾರತಕ್ಕೆ ಎಸ್ಸೆನ್ಸಿಯಾ, ಬೀಟ್ ಆಕ್ಟಿವ್

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುವುದು. ಇದು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಏರ್ ಬ್ಯಾಗ್ ಭದ್ರತಾ ವೈಶಿಷ್ಟ್ಯಗಳನ್ನು ತುಂಬಿಕೊಂಡಿರಲಿದೆ.

English summary
GM to launch new Chevrolet Beat, Beat Activ, Essentia in India
Story first published: Saturday, June 18, 2016, 16:50 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark