ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

Written By:

ಬಹುನಿರೀಕ್ಷಿತ ಹ್ಯುಂಡೈ ಟಕ್ಸನ್ 2016 ಅಕ್ಟೋಬರ್ 24ರಂದು ಬಿಡುಗಡೆಯಾಗುವುದಾಗಿ ನಿಗದಿಯಾಗಿತ್ತು. ಆದರೆ ಇದೀಗ ಕಾರಣಾಂತರಗಳಿಂದಾಗಿ ಹ್ಯುಂಡೈ ಟಕ್ಸನ್ ಬಿಡುಗಡೆಯನ್ನು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಮುಂದೂಡಿದೆ. ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿರುವ ಹ್ಯುಂಡೈ, ಕಾರಣಾಂತರಗಳಿಂದಾಗಿ ಹ್ಯುಂಡೈ ಟಕ್ಸನ್ ಬಿಡುಗಡೆಯನ್ನು ಮುಂದೂಡಲಾಗತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ.

To Follow DriveSpark On Facebook, Click The Like Button
ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಈ ಮೊದಲು 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಹ್ಯುಂಡೈ ಟಕ್ಸನ್ ಪ್ರಕಸ್ತ ಸಾಲಿನಲ್ಲೇ ಬಿಡುಗಡೆಗೊಳಿಸುವ ಬಗ್ಗೆ ಸೂಚನೆ ನೀಡಿದ್ದವು. ಮುಂದಿನ ಬಿಡುಗಡೆ ದಿನಾಂಕವನ್ನು ಹ್ಯುಂಡೈ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

2004ರಲ್ಲಿ ಜಾಗತಿಕ ಪ್ರವೇಶದ ಬಳಿಕ 2005ರಲ್ಲಿ ಈ ಮೊದಲನೇ ತಲೆಮಾರಿನ ಕಾರು ಭಾರತವನ್ನು ಹಿಂಬಾಲಿಸಿತ್ತು. ತದಾ ನಂತರ ಕಳಪೆ ಮಾರಾಟದ ಹಿನ್ನಲೆಯಲ್ಲಿ ಹಿಂಪಡೆಯಲಾಗಿತ್ತು.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ನೂತನ ಟಕ್ಸನ್ ಕಾರು ಕ್ರೆಟಾ ಹಾಗೂ ಸಾಂಟಾ ಫೆ ಕ್ರೀಡಾ ಬಳಕೆಯ ನಡುವೆ ಗುರುತಿಸಿಕೊಳ್ಳಲಿದೆ. ಇದರಲ್ಲೂ ಸಂಸ್ಥೆಯ ನೂತನ ಫ್ಯೂಯಿಡಿಕ್ 2.0 ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಭಾರತದಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ ಬೇಡಿಕೆಯನ್ನು ಪರಿಗಣಿಸಿರುವ ಹ್ಯುಂಡೈ, ಮೂರನೇ ತಲೆಮಾರಿನ ಟಕ್ಸನ್ ಎಸ್ ಯುವಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದು ಕ್ರೆಟಾ ತರಹನೇ ಅತ್ಯುತ್ತಮ ಬೇಡಿಕೆ ಕಾಪಾಡಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಸ್ಪರ್ಶ, ಎಲ್ ಇಡಿ ಟೈಲ್ ಲೈಟ್, ಕ್ರೀಡಾತ್ಮಕ ಬಂಪರ್, ಹೆಡ್ ಲ್ಯಾಂಪ್, ರೂಫ್ ಲೈನ್ ಇತ್ಯಾದಿ ಗಮನಾರ್ಹ ವಿನ್ಯಾಸ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಶೇಕಡಾ 50ರಷ್ಟು ಸ್ಥಳೀಯ ಜೋಡಣೆ ಕಾರ್ಯಕ್ಕೆ ಮುಂದಾಗಲಿರುವ ಹ್ಯುಂಡೈ, ಟಕ್ಸನ್ ಎಸ್ ಯುವಿ ಕ್ರೀಡಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡುವ ಇರಾದೆಯನ್ನಿಟ್ಟುಕೊಂಡಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಲೆಥರ್ ಹೋದಿಕೆಯ ಸೀಟು, ಇನ್ಸ್ಟ್ರುಮೆಂಟ್ ಪ್ಯಾನೆಲ್, ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಕ್ಸ್, ಯುಎಸ್ ಬಿ, ಬ್ಲೂಟೂತ್ ಕನೆಕ್ಟಿವಿಟಿ, ಹೈ ಎಂಡ್ ಆಡಿಯೋ ಸಿಸ್ಟಂ ಜೊತೆ ಎಂಟು ಸ್ಪೀಕರ್, ಐಚ್ಛಿಕ ಪ್ಯಾನರಾಮಿಕ್ ಸನ್ ರೂಫ್, ಎಲೆಕ್ಟ್ರಿಕ್ ಲಿಫ್ಟ್ ಗೇಟ್ ಇತ್ಯಾದಿ ಸೌಲಭ್ಯಗಳಿರಲಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಹಾಗಿದ್ದರೂ ಎಂಜಿನ್ ಮಾನದಂಡಗಳ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಇದರಲ್ಲಿರುವ 2.0 ಲೀಟರ್ ಡೀಸೆಲ್ ಎಂಜಿನ್ 134 ಹಾಗೂ 181 ಅಶ್ವಶಕ್ತಿಗಳನ್ನು ಉತ್ಪಾದಿಸುವ ಸಾದ್ಯತೆಯಿದೆ. ಇದು ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಭಾರತದಲ್ಲಿ ಹೋಂಡಾ ಸಿಆರ್ ವಿ, ಸ್ಕೋಡಾ ಯೆಟಿ ಮತ್ತು ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಮಾದರಿಗಳಿಗೆ ಹ್ಯುಂಡೈ ಟಕ್ಸನ್ ಪೈಪೋಟಿಯನ್ನು ಒಡ್ಡಲಿದೆ.

ಹ್ಯುಂಡೈ ಟಕ್ಸನ್ ಬಿಡುಗಡೆಗೆ ಆರಂಭದಲ್ಲೇ ಎದುರಾಯ್ತು ವಿಘ್ನ!

ಇನ್ನು ಭಾರತ ಮಾರುಕಟ್ಟೆಯಲ್ಲಿ ನೂತನ ಹ್ಯುಂಡೈ ಟಕ್ಸನ್, 20ರಿಂದ 25 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4447

ಅಗಲ: 1850

ಎತ್ತರ: 1645

ಚಕ್ರಾಂತರ: 2670

English summary
Hyundai Delays The Launch Of Its Premium SUV Tucson In India
Story first published: Saturday, October 8, 2016, 15:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark