2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

Written By:

ಭಾರತೀಯ ವಾಹನ ಮಾರುಕಟ್ಟೆಯು 2026ರ ವೇಳೆಯಾಗುವಾಗ 6.5 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆಯೆಂದು ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಭರವಸೆ ವ್ಯಕ್ತಪಡಿಸಿದೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ಈ ವೇಳೆಯಾಗುವಾಗ ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇಕಡಾ 12ರಷ್ಟು ಪಾಲನ್ನು ಭಾರತೀಯ ವಾಹನ ಮಾರುಕಟ್ಟೆಯನ್ನು ಹೊಂದಿರಲಿದೆ ಎಂದು ಮಾರುತಿ ಉಲ್ಲೇಖಿಸಿದೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ಸದ್ಯ ದೇಶದ ಒಟ್ಟು ಉತ್ಪನ್ನದ ಶೇಕದಾ 7.1ರಷ್ಟನ್ನು ಭಾರತೀಯ ವಾಹನ ಮಾರುಕಟ್ಟೆ ಹೊಂದಿದೆ. ಹಾಗೆಯೇ ಈ ವಿಭಾಗದಲ್ಲಿ 3.2 ಕೋಟಿ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿಯುತ್ತಿದ್ದಾರೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಅಯುವಾಕ, ಈ ಗುರಿಯನ್ನು ತಲುಪಲು ಮುಂದಿನ ಒಂದಿನ ದಶಕದಲ್ಲಿ 65 ದಶಲಕ್ಷದಷ್ಟು ಹೊಸ ಉದ್ಯೋಗ ಸೃಷ್ಟಿಯಾಗಬೇಕಿದೆ ಎಂದಿದ್ದಾರೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ಮಾತು ಮುಂದುವರಿಸಿದ ಅವರು ಕಳೆದೊಂದು ದಶಕದಲ್ಲಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿದೆ ಎಂದಿದ್ದಾರೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ವಾಹನ ಉದ್ಯಮದ ವೃದ್ಧಿಗಾಗಿ, ಪರಿಸರ ಮಾಲಿನ್ಯ, ಅಪಘಾತ, ವಾಹನ ದಟ್ಟಣೆ ಹಾಗೂ ಜಾಗತಿಕ ತಾಪಮಾನದತ್ತವೂ ಗಮನ ಕೇಂದ್ರಿಕರಿಸುವ ಅಗತ್ಯವಿದೆ ಎಂದವರು ವಿವರಿಸಿದ್ದಾರೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ಜಗತ್ತಿನ ಅಗ್ರ ಮೂರು ವಾಹನ ಮಾರುಕಟ್ಟೆಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಸುರಕ್ಷಿತ, ದಕ್ಷತೆ, ಪರಿಸರ ಸ್ನೇಹಿ ವಾಹನಗಳನ್ನು ಉತ್ಪಾದಿಸುವ ಅಗತ್ಯವಿದೆ.

2026ರ ವೇಳೆಗೆ 6.5 ಕೋಟಿ ಉದ್ಯೋಗ ಸೃಷ್ಟಿ: ಮಾರುತಿ

ಇದೇ ಸಂದರ್ಭದಲ್ಲಿ ಮಾರುತಿ ಸಂಸ್ಥೆಯು ಗ್ರಾಮೀಣ ಅಭಿವೃದ್ಧಿ, ಕೌಶಲ್ಯ ತರಬೇತಿ, ಪರಿಸರ ರಕ್ಷಣೆ ಮತ್ತು ರಸ್ತೆ ಸುರಕ್ಷತೆಯತ್ತ ಗಮನ ಕೇಂದ್ರಿಕರಿಸುವುದಾಗಿ ವಿವರಿಸುತ್ತಾರೆ.

English summary
Indian Automobile Industry Can Generate 6.5 Crore Jobs By 2026: Maruti Suzuki
Story first published: Friday, November 25, 2016, 15:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark