ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಜಾಗ್ವಾರ್ ಸಂಸ್ಥೆಯನ್ನು ಟಾಟಾ ಮೋಟಾರ್ಸ್ ಖರೀದಿಸಿದ ಭಾರತದತ್ತವೂ ಗಮನ ಕೇಂದ್ರಿಕರಿಸಿದೆ. ಐಷಾರಾಮಿ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ನೂತನ ಜಾಗ್ವಾರ್ ಎಫ್-ಪೇಸ್ ಹೊಸ ಆಯಾಮವನ್ನು ತುಂಬಲಿದೆ.

By Nagaraja

ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಬ್ರಿಟನ್ ನ ಐಕಾನಿಕ್ ವಾಹನ ಸಂಸ್ಥೆ ಜಾಗ್ವಾರ್ ಅತಿ ನೂತನ ಎಫ್-ಪೇಸ್ ಕ್ರೀಡಾ ಬಳಕೆಯ (ಎಸ್ ಯುವಿ) ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆಯು 68.40 ಲಕ್ಷ ರು.ಗಳಿಂದ ಆರಂಭವಾಗಲಿದ್ದು, ಟಾಪ್ ಎಂಡ್ 1.13 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಎಫ್-ಪೇಸ್ ಪ್ಯೂರ್: 68.40 ಲಕ್ಷ ರು.

ಎಫ್-ಪೇಸ್ ಪ್ರೆಸ್ಟೀಜ್: 74.50 ಲಕ್ಷ ರು.

ಎಫ್-ಪೇಸ್ ಆರ್-ಸ್ಪೋರ್ಟ್: 1.02 ಕೋಟಿ ರು.

ಎಫ್-ಪೇಸ್ ಫಸ್ಟ್ ಎಡಿಷನ್: 1.13 ಕೋಟಿ ರು.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಜಾಗ್ವಾರ್ ಎಫ್-ಪೇಸ್ ಎರಡು ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದು 2.0 ಲೀಟರ್ ಫೋರ್ ಸಿಲಿಂಡರ್ ಮತ್ತು 3.0 ಲೀಟರ್ ವಿ6 ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮುಖಾಂತರ ಶಕ್ತಿ ರವಾನೆಯಾಗಲಿದ್ದು, ಜಾಗ್ವಾರ್ ನ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಒಳಗೊಂಡಿರಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಜಾಗ್ವಾರ್ ಎಫ್-ಪೇಸ್ ನಲ್ಲಿರುವ 2.0 ಲೀಟರ್ ಎಂಜಿನ್ 430 ಎನ್ ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 8.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆಯನ್ನು ಮತ್ತು ಗಂಟೆಗೆ ಗರಿಷಠ 208 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಅದೇ ಹೊತ್ತಿಗೆ 3.0 ಲೀಟರ್ ವಿ6 ಎಂಜಿನ್ 700 ಎನ್ ಎಂ ತಿರುಗುಬಲದಲ್ಲಿ 296 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 6.2 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗ ಮತ್ತು ಗಂಟೆಗೆ 241 ಕೀ.ಮೀ. ವೇಗವರ್ಧಿಸಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

2013 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಜಾಗ್ವಾರ್ ಎಫ್-ಪೇಸ್ ಕಾನ್ಸೆಪ್ಟ್ ಮಾದರಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರಲಾಗಿಲ್ಲ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ವಿನ್ಯಾಸದತ್ತ ಗಮನ ಹಾಯಿಸಿದಾಗ, ಇದೊಂದು ಅಪ್ಪಟ ಕ್ರೀಡಾ ಕಾರನ್ನು ನೆನಪಿಸುತ್ತಿದೆ. ಮುಂಬಾಗದಲ್ಲಿ ಸಂಸ್ಥೆಯ ಟ್ರೇಡ್ ಮಾರ್ಕ್ ವಿನ್ಯಾಸ ನೀತಿಯನ್ನು ಕಾಯ್ದುಕೊಳ್ಳಲಾಗಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ದೊಡ್ಡದಾದ ಫ್ರಂಟ್ ಗ್ರಿಲ್, ಬಂಪರ್, ಎಲ್ ಇಡಿ ಹೆಡ್ ಲ್ಯಾಂಪ್ ಜೊತೆ ಜೆ ಆಕಾರದ ಡೇಟೈಮ್ ರನ್ನಿಂಗ್ ಲೈಟ್ಸ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಎಕ್ಸ್ ಇ ಮತ್ತು ಎಕ್ಸ್ ಎಫ್ ಸೆಡಾನ್ ಕಾರುಗಳಿಗೆ ನೂತನ ಜಾಗ್ವಾರ್ ಎಫ್-ಪೇಸ್ ಸಾಮ್ಯತೆಯನ್ನು ಪಡೆದುಕೊಂಡಿದ್ದು, ಗ್ರಿಲ್ ಕೆಳಗಡೆಯಾಗಿ ದೊಡ್ಡದಾದ ಏರ್ ಇಂಟೇಕ್ ಗಳಿರುತ್ತದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಸ್ಪೋರ್ಟಿ ಅಲಾಯ್ ವೀಲ್ ಸೇವೆಯನ್ನು ಕೊಡಲಾಗುತ್ತಿದ್ದು, 18,19 ಹಾಗೂ 20 ಇಂಚುಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಕಾರಿನ ಹಿಂದುಗಡೆಯೂ ಎಸ್ ಯುವಿ ಶೈಲಿಯ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಇಲ್ಲಿ ಎಫ್-ಟೈಪ್ ಮಾದರಿಗೆ ಸಮಾನವಾದ ಟೈಲ್ ಲ್ಯಾಂಪ್ ಕಾಣಬಹುದಾಗಿದೆ. ಇದರ ಜೊತೆಗೆ ರೂಫ್ ಮೌಂಟೆಡ್ ಸ್ಪಾಯ್ಲರ್ ಇರಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಕಾರಿನೊಳಗೆ ಲೆಥರ್ ಹೋದಿಕೆಯ ಸೀಟು ಜೊತೆ ಹೆಚ್ಚಿನ ಬಣ್ಣಗಳ ಆಯ್ಕೆಯಿರಲಿದೆ. ಮೂಡ್ ಲೈಟಿಂಗ್ ಮತ್ತು ಪ್ಯಾನರಾಮಿಕ್ ಸನ್ ರೂಫ್ ಪ್ರಮುಖ ಆಕರ್ಷಣೆಯಾಗಲಿದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಎಂಟು ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ ಸ್ಟಾಂಡರ್ಡ್ ಆಗಿ ಲಭ್ಯವಾಗಲಿದೆ. ಇದನ್ನು 10.2 ಇಂಚುಗಳ ವರೆಗೆ ವರ್ಧಿಸುವ ಅವಕಾಶವಿರುತ್ತದೆ. ಹಾಗೆಯೇ ಮೆರಿಡಿಯನ್ ಎಕ್ಸ್ ಲೆಂಟ್ 280 ಡಬ್ಲ್ಯು ಸೌಂಡ್ ಸಿಸ್ಟಂ ಇರುತ್ತದೆ.

ಮನಮೋಹಕ ಎಸ್‌ಯುವಿ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಭಾರತಕ್ಕೆ ಹೆಜ್ಜೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏರ್ ಬ್ಯಾಗ್ ಜೊತೆಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಮತ್ತು 360 ಡಿಗ್ರಿ ಕ್ಯಾಮೆರಾ ಆಯ್ಕೆಯೂ ಲಭ್ಯವಿರುತ್ತದೆ.

Most Read Articles

Kannada
English summary
Home Four Wheelers Jaguar F-Pace SUV Launched In India; Prices Start At Rs. 68.40 Lakh
Story first published: Friday, October 21, 2016, 10:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X