ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

Written By:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ದೇಶದ ಮೊತ್ತ ಮೊದಲ ಬಯೋಡೀಸೆಲ್ ಅಥವಾ ಜೈವಿಕ ಇಂಧನ ಚಾಲಿತ ಬಸ್ಸುಗಳಿಗೆ ನಮ್ಮ ಬೆಂಗಳೂರಿನಲ್ಲಿ ಕಳೆದ ಶನಿವಾರದಂದು ಚಾಲನೆ ನೀಡಲಾಗಿದೆ.

To Follow DriveSpark On Facebook, Click The Like Button
ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

ಜೈವಿಕ ಇಂಧನ ಚಾಲಿತ 25ರಷ್ಟು ಐಷಾರಾಮಿ ಮಲ್ಟಿ ಆಕ್ಸೆಲ್ ಸ್ಕಾನಿಯಾ ಬಸ್ಸುಗಳನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿರುವ ಬಯೋಡೀಸೆಲ್ ಬಸ್ಸುಗಳು ಡೀಸೆಲ್ ಇಂಧನ ಚಾಲಿತ ಬಸ್ಸುಗಿಂತಲೂ ಅಗ್ಗವೆನಿಸಲಿದೆ.

ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

ಕೆಆಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂಧರ್ ಕುಮಾರ್ ಕಟರಿಯಾ ಹೇಳುವಂತೆಯೇ ಬಯೋ ಡೀಸೆಲ್ ಬಸ್ಸುಗಳು ಡೀಸೆಲ್ ಬಸ್ಸಿಗಿಂತಲೂ ಶೇಕಡಾ 60ರಿಂದ 70ರಷ್ಟು ಕಡಿಮೆ ಮಾಲಿನ್ಯವನ್ನು ಹೊರದಬ್ಬಲಿದೆ. ಇನ್ನು ಇಂಧನ ಕ್ಷಮತೆಯ ಮೇಲೂ ಯಾವುದೇ ಧಕ್ಕೆಯುಂಟಾಗುವುದಿಲ್ಲ.

ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

ನೂತನ ಐರಾವತ ಬಸ್ಸುಗಳು ಬೆಂಗಳೂರು-ಕುಂದಾಪುರ, ಬೆಂಗಳೂರು-ಬೀದರ್, ಬೆಂಗಳೂರು-ತಿರುಪತಿ ಮತ್ತು ಬೆಂಗಳೂರು-ಚೆನ್ನೈ ನಡುವಣ ಓಡಾಡಲಿದೆ.

ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

ಸ್ಕಾನಿಯಾ ಹೈ ಎಂಡ್ ಬಸ್ಸುಗಳಲ್ಲಿ ಬಯೋ ಡೀಸೆಲ್ ಕಿಟ್ ಲಗತ್ತಿಸಲಾಗುತ್ತಿದೆ. ಇದಕ್ಕಾಗಿ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆ ತರುವ ಅಗತ್ಯವಿಲ್ಲ ಎಂಬುದನ್ನು ಕೆಎಸ್ ಆರ್ ಟಿಸಿ ವಿವರಿಸಿದೆ.

ದೇಶದ ಪ್ರಪ್ರಥಮ ಬಯೋಡೀಸೆಲ್ ಚಾಲಿತ ಬಸ್ಸುಗಳಿಗೆ ಬೆಂಗಳೂರಿನಲ್ಲಿ ಚಾಲನೆ

ಈಗಿರುವ ಸಾಮಾನ್ಯ ಡೀಸೆಲ್ ಬಸ್ಸುಗಳನ್ನು ಕೆಎಸ್‌ಆರ್‌ಟಿಸಿ 80ರಷ್ಟು ಡೀಸೆಲ್ ಹಾಗೂ 20ರಷ್ಟನ್ನು ಜೈವಿಕ ಇಂಧನ ಚಾಲಿತ ಬಸ್ಸುಗಳನ್ನಾಗಿ ಪರಿವರ್ತಿಸಲಿದೆ.

English summary
Karnataka State Road Transport Corporation Inducts India’s First Bio-Diesel Buses
Story first published: Monday, December 26, 2016, 10:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark