ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

Written By:

ದೇಶದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಇತ್ತೀಚೆಗಷ್ಟೇ ಮಹೀಂದ್ರ ಕೆಯುವಿ100 ಬುಕ್ಕಿಂಗ್ ಆರಂಭಿಸಲಾಗಿತ್ತು. ಪ್ರಸ್ತುತ ಕಾರಿಗೆ ಆನ್ ಲೈನ್ ನಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಒಂದು ತಿಂಗಳೊಳಗೆ 21,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಾಗಿದೆ.

Also Read: ಮಹೀಂದ್ರ ಕೆಯುವಿ100 ಚೆಲುವೆಯ ಭಂಗಿಗಳನ್ನು ಮನಸಾರೆ ಆಸ್ವಾದಿಸಿ!

ದೇಶದ ಅತಿ ದೊಡ್ಡ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಎಸ್‌ಯುವಿ ಶೈಲಿಯ ಕಾರಾಗಿರುವ ಕೆಯುವಿ100 ಈಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿದೆ.

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

ಹೊಸ ವರ್ಷದ ಸಂಭ್ರಮದೊಂದಿಗೆ ಕಳೆದ ತಿಂಗಳಿನಲ್ಲಷ್ಟೇ ಫ್ಲಿಪ್ ಕಾರ್ಟ್ ನಲ್ಲಿ ಮಹೀಂದ್ರ ಕೆಯುವಿ100 ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ಮೂಲಕ ಮಹೀಂದ್ರ ಹಾಗೂ ಫ್ಲಿಪ್ ಕಾರ್ಟ್ ಆನ್ ಲೈನ್ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

ಆಗಲೇ ಆನ್ ಲೈನ್ ಗ್ರಾಹಕರ ಪೈಕಿ ನೆಚ್ಚಿನ ತಾಣವಾಗಿ ಪರಿಣಮಿಸಿರುವ ಫ್ಲಿಪ್ ಕಾರ್ಟ್ ಜನವರಿ ತಿಂಗಳಲ್ಲಿ ಆಟೋಮೊಬೈಲ್ ವಿಭಾಗದಲ್ಲಿ ಮಹೀಂದ್ರ ಬಹುನಿರೀಕ್ಷಿತ ಕಾರಿನ ಮಾರಾಟವನ್ನು ಆರಂಭಿಸಿತ್ತು.

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

ಅಧ್ಯಯನ ವರದಿಗಳ ಪ್ರಕಾರ 2016ನೇ ಸಾಲಿನಲ್ಲಿ 145 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತ ಜಗತ್ತಿನಲ್ಲೇ ಮೂರನೇ ಅಥಿ ದೊಡ್ಡ ವಾಹನ ಮಾರುಕಟ್ಟೆಯಾಗಿ ಬೆಳೆದು ನಿಲ್ಲಲಿದೆ. ದ್ವಿಚಕ್ರ ವಿಭಾಗದಲ್ಲಿ ಭಾರತ ಈಗಲೇ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

ಈ ಸಂದರ್ಭದಲ್ಲಿ ಅತೀವ ಹರ್ಷವನ್ನು ವ್ಯಕ್ತಪಡಿಸಿರುವ ಫ್ಲಿಪ್ ಕಾರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಆಟೋ ವಿಭಾಗದ ಉಪಾಧ್ಯಕ್ಷರಾಗಿರುವ ಆದರ್ಶ್ ಕೆ. ಮೆನನ್, ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಇದು ಬದಲಾವಣೆಯ ಸಂಕೇತ ಎಂದಿದ್ದಾರೆ.

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

ಇದೇ ರೀತಿಯ ಅಭಿಪ್ರಾಯ ಮಂಡಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಆಟೋಮೋಟಿವ್ ವಿಭಾಗದ ಸೇಲ್ಸ್ ಆಂಡ್ ಕಸ್ಟಮರ್ ಕೇರ್ ಹಿರಿಯ ಉಪಾಧ್ಯಕ್ಷ ವಿಜಯ್ ರಾಮ್ ನಕ್ರಾ, ಇದು ಆನ್ ಲೈನ್ ಮಾರುಕಟ್ಟೆಯಲ್ಲಿ ನಾವು ಇಟ್ಟುಕೊಂಡಿರುವ ನಂಬಿಕೆಗೆ ದೊರಕಿರುವ ಪ್ರತಿಫಲವಾಗಿದೆ ಎಂದಿದ್ದಾರೆ.

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್

ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಮಹೀಂದ್ರ ಕೆಯುವಿ100 ಕಾರಿಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಆಫ್ ಲೈನ್ ಹಾಗೂ ಆನ್ ಲೈನ್ ಸೇರಿದಂತೆ 21000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದೆ. ಈ ಪೈಕಿ ಶೇಕಡಾ 45ರಷ್ಟು ಫ್ಲಿಪ್ ಕಾರ್ಟ್ ನಿಂದ ದಾಖಲಾಗಿರುವುದು ಗಮನಾರ್ಹವೇ ಸರಿ.

ಎಂಜಿನ್

ಎಂಜಿನ್

ಪೆಟ್ರೋಲ್ mFALCON, G80

ಎಂಜಿನ್ ಸಾಮರ್ಥ್ಯ: 1198 ಸಿಸಿ

ಗರಿಷ್ಠ ಪವರ್: 82(61)@5500 bhp(kW)@rpm

ತಿರುಗುಬಲ: 115@3500-3600 Nm@rpm

ಎಂಜಿನ್

ಎಂಜಿನ್

ಡೀಸೆಲ್: mFALCON, D75

ಎಂಜಿನ್ ಸಾಮರ್ಥ್ಯ: 1198 ಸಿಸಿ

ಗರಿಷ್ಠ ಪವರ್: 77(57)@3750 (bhp(kW)@rpm)

ತಿರುಗುಬಲ: 190@1750-2250 Nm@rpm

ಮೈಲೇಜ್

ಮೈಲೇಜ್

ಡೀಸೆಲ್ 25.32 ಕೀ.ಮೀ (ಫಸ್ಟ್ ಇನ್ ಕ್ಲಾಸ್)

ಪೆಟ್ರೋಲ್ 18.15 ಕೀ.ಮೀ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ (ರು.ಗಳಲ್ಲಿ)

ಕೆ2 (6 ಸೀಟು): 533978

ಕೆ2 ಪ್ಲಸ್ (6 ಸೀಟು): 556369

ಕೆ4 (5 ಸೀಟು): 569600

ಕೆ4 (6 ಸೀಟು): 574689

ಕೆ4 ಪ್ಲಸ್ (5 ಸೀಟು): 591991

ಕೆ4 ಪ್ಲಸ್ (6 ಸೀಟು): 597080

ಕೆ6 (5 ಸೀಟು): 634738

ಕೆ6 (6 ಸೀಟು): 639827

ಕೆ6 ಪ್ಲಸ್ (5 ಸೀಟು): 657129

ಕೆ6 ಪ್ಲಸ್ (6 ಸೀಟು): 662218

ಕೆ8 (5 ಸೀಟು): 690716

ಕೆ8 (6 ಸೀಟು): 695805

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ (ರು.ಗಳಲ್ಲಿ)

ಕೆ2 (6 ಸೀಟು): 452556

ಕೆ2 ಪ್ಲಸ್ (6 ಸೀಟು): 474947

ಕೆ4 (5 ಸೀಟು): 488178

ಕೆ4 (6 ಸೀಟು): 493267

ಕೆ4 ಪ್ಲಸ್ (5 ಸೀಟು): 510569

ಕೆ4 ಪ್ಲಸ್ (6 ಸೀಟು): 515658

ಕೆ6 (5 ಸೀಟು): 548227

ಕೆ6 (6 ಸೀಟು): 553316

ಕೆ6 ಪ್ಲಸ್ (5 ಸೀಟು): 570618

ಕೆ6 ಪ್ಲಸ್ (6 ಸೀಟು): 575707

ಕೆ8 (5 ಸೀಟು): 604205

ಕೆ8 (6 ಸೀಟು): 609293

ಮಹೀಂದ್ರ ಕೆಯುವಿ100 ಫ್ಲಿಪ್ ಕಾರ್ಟ್‌ನಲ್ಲಿ ಬೊಂಬಾಟ್ ಸೇಲ್
English summary
Mahindra & Flipkart Record 21,000 KUV1OO Bookings In A Month
Story first published: Wednesday, March 2, 2016, 15:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark