ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

Written By:

ಕಳೆದ ಕೆಲವು ತಿಂಗಳುಗಳಿಂದ ಸಣ್ಣ ಕಾರು ವಿಭಾಗದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿದ್ದು, ದೇಶದ ನಂ.1 ಮಾರುತಿ ಸುಜುಕಿಯ ಆಲ್ಟೊಗೆ ಪ್ರತಿಸ್ಪರ್ಧಿಯಾಗಿ ರೆನೊ ಕ್ವಿಡ್ ಕಣಕ್ಕಿಳಿದಿತ್ತು. ಇದಾದ ಬೆನ್ನಲ್ಲೇ ಇತ್ತೀಚೆಗಷ್ಟೇ ದಟ್ಸನ್ ರೆಡಿ ಗೊ ಸಹ ತನ್ನ ಸಾನಿಧ್ಯನವನ್ನು ತೋರ್ಪಡಿಸಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಜನಪ್ರಿಯ ಆಲ್ಟೊ 800 ಮಾದರಿಗೆ ಭಾರಿ ಡಿಸ್ಕೌಂಟ್ ಗಳನ್ನು ಒದಗಿಸಲು ನಿರ್ಧರಿಸಿದೆ. ಈ ಮೂಖಾಂತರ ಗರಿಷ್ಠ ಮಾರಾಟವನ್ನು ಕಾಯ್ದುಕೊಳ್ಳುವ ಇರಾದೆಯನ್ನಿಟ್ಟುಕೊಂಡಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ಬಲ್ಲ ಮೂಲಗಳ ಪ್ರಕಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾರುತಿ ಡೀಲರುಗಳು ಆಲ್ಟೊ 800 ಖರೀದಿ ವೇಳೆಯಲ್ಲಿ ಗರಿಷ್ಠ 82,000 ರು.ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದ್ದಾರೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ನ್ನೊಂದೆಡೆ ದಶಕಗಳಿಂದಲೂ ದೇಶದ ಅಗ್ರ ಮಾರಾಟವಾಗುವ ಕಾರೆಂಬ ಪಟ್ಟ ಗಿಟ್ಟಿಸಿಕೊಂಡಿರುವ ಆಲ್ಟೊ 800ಗೆ ಮುಂಬೈನಲ್ಲಿ 55,000 ರು.ಗಳ ರಿಯಾಯಿತಿ ದರ ನೀಡಲಾಗುತ್ತಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ಆಲ್ಟೊ 800 ಎಲ್‌ಎಕ್ಸ್ ಐ ಮಾದರಿಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಹೊರತಾಗಿ ಲಾಯಲ್ಟಿ ಬೋನಸ್, ಎಕ್ಸ್ ಚೇಂಜ್ ಬೋನಸ್, ಕಾರ್ಪೋರೇಟ್, ಸರ್ಕಾರಿ ಡಿಸ್ಕೌಂಟ್ ಗಳು ಲಭ್ಯವಾಗಲಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ಮಾರುತಿ ಇತ್ತೀಚೆಗಷ್ಟೇ ಪರಿಷ್ಕೃತ ಮಾರುತಿ 800 ಕಾರನ್ನು ಬಿಡುಗಡೆಗೊಳಿಸಿತ್ತು. ತನ್ಮೂಲಕ ತನ್ನ ಅಗ್ರಸ್ಥಾನವನ್ನು ಭದ್ರವಾಗಿಟ್ಟುಕೊಳ್ಳುವ ಇರಾದೆಯಲ್ಲಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ಇನ್ನೊಂದೆಡೆ ಮಾರುಕಟ್ಟೆಗೆ ಪ್ರವೇಶಿಸಿದ 10 ತಿಂಗಳಲ್ಲೇ 1.25 ಲಕ್ಷ ಯುನಿಟ್ ಗಳ ಬುಕ್ಕಿಂಗ್ಸ್ ಗಿಟ್ಟಿಸಿಕೊಂಡಿರುವ ರೆನೊ ಕ್ವಿಡ್ ದೇಶದ ಜನಪ್ರಿಯ ಮಾದರಿಗೆ ನಿಕಟ ಪೈಪೋಟಿಯನ್ನು ಒಡ್ಡುತ್ತಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ಅತ್ತ ಜೂನ್ 07ರಂದು ಮಾರುಕಟ್ಟೆಗೆ ಪರಿಚಯಿಸಿರುವ ದಟ್ಸನ್ ರೆಡಿ ಗೊ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆ 2.38 ಲಕ್ಷ ರು.ಗಳಿಗೆ ಬಿಡುಗಡೆಗೊಂಡಿತ್ತು. ಇದರಲ್ಲಿರುವ 799 ಸಿಸಿ ತ್ರಿ ಸಿಲಿಂಡರ್ ಎಂಜಿನ್ 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೆ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ಏತನ್ಮಧ್ಯೆ ಮಾರುತಿ ಆಲ್ಟೊ 800 ಪ್ರತಿ ಲೀಟರ್ ಗೆ 22.74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿರುವ 796 ಸಿಸಿ ಎಂಜಿನ್ 69 ಎನ್ ಎಂ ತಿರುಗುಬಲದಲ್ಲಿ 47 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಫೈವ್ ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಕ್ವಿಡ್, ರೆಡಿ ಗೊ ಎಫೆಕ್ಟ್? ಮಾರುತಿ ಆಲ್ಟೊಗೆ ಭಾರಿ ಡಿಸ್ಕೌಂಟ್

ರೆನೊ ಕ್ವಿಡ್ ಸಹ ರೆಡಿ ಗೊ ಕಾರಿಗೆ ಸಮಾನವಾದ 799 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 72 ಎನ್ ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಕೂಡಾ ಫೈವ್ ಸ್ಪೀಡ್ ಗೇರ್ ಬಾಕ್ಸ್ ಪಡೆದಿದ್ದು, ಪ್ರತಿ ಲೀಟರ್ ಗೆ 25 ಕೀ.ಮೀ. ಮೈಲೇಜ್ ನೀಡಲಿದೆ.

English summary
Discounts On Maruti Alto 800; Kwid & redi-Go Popularity Effect
Story first published: Saturday, June 11, 2016, 16:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark