ಮಗದೊಮ್ಮೆ ವಿಜಯ ಪತಾಕೆ ಹಾರಿಸಿತೇ ಮಾರುತಿ ಬಲೆನೊ?

Written By:

ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ದೇಶದ ಅತಿ ದೊಡ್ಡ ಹಾಗೂ ಜನಪ್ರಿಯ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಮಗದೊಂದು ಕಾನ್ಸೆಪ್ಟ್ ಮಾದರಿಯನ್ನು ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ.

ಆಟೋ ವಲಯಗಳಿಂದ ಬಂದಿರುವ ಖಚಿತ ಮಾಹಿತಿಗಳ ಪ್ರಕಾರ ಮಾರುತಿ ಸಂಸ್ಥೆಯು ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಮಾದರಿಯನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಿದೆ.

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು

ಆರ್‌ಎಸ್ ಪರಿಕಲ್ಪನೆಯು ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿಗೆ ಹೆಚ್ಚಿನ ಕ್ರೀಡಾತ್ಮಕ ಶೈಲಿಯನ್ನು ನೀಡಲಿದೆ. ಅಲ್ಲದೆ ಹೆಚ್ಚು ಶಕ್ತಿಶಾಲಿ ಕಾರು ಎಂದೆನಿಸಿಕೊಳ್ಳಲಿದೆ.

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು

ನೂತನ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಮಾದರಿಯಲ್ಲಿ ನೂತನ 1.0 ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದ್ದು, 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 2015 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಐಕೆ-2 ಕಾನ್ಸೆಪ್ಟ್ ಮಾದರಿಯಲ್ಲಿರುವ ಎಂಜಿನ್ ತಾಂತ್ರಿಕತೆಗೆ ಸಮಾನವಾಗಿದೆ.

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಮಾದರಿಯಲ್ಲಿ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಅಲ್ಲದೆ ಒಟ್ಟಾರೆಯಾಗಿ ಕ್ರೀಡಾತ್ಮಕ ಶೈಲಿ ಕಾಪಾಡಿಕೊಳ್ಳಲಾಗುವುದು.

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು

ಹಾಗಿದ್ದರೂ ನೂತನ ಮಾರುತಿ ಬಲೆನೊ ಆರ್‌ಎಸ್ ಮಾದರಿಯು ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸಂಸ್ಥೆಯಿಂದು ಯಾವುದೇ ಮಾಹಿತಿಗಳು ಬಂದಿಲ್ಲ.

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು

ಇದು ಪ್ರಮುಖವಾಗಿಯೂ ಅಬಾರ್ತ್ ಪುಂಟೊ, ಹೋಂಡಾ ಜಾಝ್ ಆರ್‌ಎಸ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಜಿಟಿ ನಿರ್ವಹಣಾ ಮಾದರಿಗಳಿಗೆ ಪೈಪೋಯನ್ನು ನೀಡಲಿದೆ.

ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು

ಫೆಬ್ರವರಿ 05ರಂದು ಆರಂಭವಾಗಲಿರುವ 2016 ಆಟೋ ಎಕ್ಸ್ ಪೋದಲ್ಲಿ ಬಲೆನೊ ಆರ್‌ಎಸ್ ಹೊರತಾಗಿ ನೂತನ ವಿಟಾರಾ ಬ್ರಿಝಾ ಕಾಂಪಾಕ್ಟ್ ಎಸ್‌ಯುವಿ, ಇಗ್ನಿಸ್ ಎಸ್‌ಯುವಿ ಇತ್ಯಾದಿ ಮಾದರಿಗಳನ್ನು ಮಾರುತಿ ಪ್ರದರ್ಶಿಸಲಿದೆ.

English summary
Maruti Baleno RS To Be Showcased At 2016 Auto Expo
Story first published: Monday, February 1, 2016, 11:16 [IST]
Please Wait while comments are loading...

Latest Photos