ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

Written By:

ಬಹುನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಹೊಸ ವರ್ಷಾರಂಭದಲ್ಲಿ ಬಿಡುಗಡೆಯಾಗಲಿರುವಂತೆಯೇ ಈ ಕಾಂಪಾಕ್ಟ್ ಕ್ರಾಸೋವರ್ ಕಾರಿಗೆ ಸಂಬಂಧಪಟ್ಟಂತೆ ಎಕ್ಸ್ ಕ್ಲೂಸಿವ್ ಮಾಹಿತಿಗಳು ಹೊರ ಬರುತ್ತಿದೆ. ನೂತನ ಮಾರುತಿ ಸುಜುಕಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಮಾದರಿಗಳಲ್ಲಿ ಬಿಡುಗಡೆಯಾಗಲಿದೆಯೆಂಬುದು ಸದ್ಯದ ಹಾಟ್ ಸುದ್ದಿ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಮಾರುತಿ ಸುಜುಕಿ ಇಗ್ನಿಸ್ ಕಳೆದ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಬೇಕಿದ್ದರು ಸಹ ಕಾರಣಾಂತರಗಳಿಂದಾಗಿ ಬಿಡುಗಡೆ ದಿನಾಂಕವನ್ನು ಹೊಸ ವರ್ಷಕ್ಕೆ ಮುಂದೂಡಲಾಗಿತ್ತು.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ಮತ್ತು ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳಿಗೆ ಅತೀವ ಬೇಡಿಕೆ ಎದುರಾಗಿರುವ ಹಿನ್ನಲೆಯಲ್ಲಿ ಇಗ್ನಿಸ್ ಆಗಮನವು ವಿಳಂಬವಾಗಿತ್ತು.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ಮಾರುತಿಯ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಮುಖಾಂತರ ಮಾರುತಿ ಇಗ್ನಿಸ್ ಮಾರಾಟವಾಗಲಿದೆ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದು 1.2 ಲೀಟರ್ ಕೆ12ಬಿ ವಿವಿಟಿ ಪೆಟ್ರೋಲ್ ಜೊತೆಗೆ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ಎರಡು ಎಂಜಿನ್ ಗಳು ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

2017 ಜನವರಿ 13ರಂದು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಇಗ್ನಿಸ್ ಭಾರತದಲ್ಲಿ ಅಂದಾಜು 4.5 ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

2435 ಎಂಎಂ ಚಕ್ರಾಂತರವನ್ನು ಕಾಪಾಡಿಕೊಳ್ಳಲಿರುವ ಮಾರುತಿ ಸುಜುಕಿ ಇಗ್ನಿಸ್ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಇರಲಿದೆ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ಇನ್ನುಳಿದಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಕಪ್ಪು ವರ್ಣದ ಎ ಮತ್ತು ಸಿ ಪಿಲ್ಲರ್ ಮತ್ತು 18 ಇಂಚುಗಳ 10 ಸ್ಪೋಕ್ ಅಲಾಯ್ ಚಕ್ರಗಳು ಜೋಡಣೆಯಾಗಲಿದೆ.

ಮಾರುತಿ ಇಗ್ನಿಸ್ ಪೆಟ್ರೋಲ್ ಮತ್ತು ಡೀಸೆಲ್ ಎಎಂಟಿ ಖಚಿತ

ಅಂತಿಮವಾಗಿ ವಿಟಾರಾ ಬ್ರಿಝಾದಲ್ಲಿರುವುದಕ್ಕೆ ಸಮಾನವಾಗಿ ಮಾರುತಿ ಐ ಕ್ರಿಯೇಟ್ ಕಸ್ಟಮೈಸ್ಡ್ ಆಯ್ಕೆಯೂ ಇರುವ ಸಾಧ್ಯತೆಗಳಿವೆ.

English summary
Confirmed: Maruti Ignis AMT Petrol And Diesel
Story first published: Friday, December 16, 2016, 10:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark