ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ವಿಟಾರಾ ಬ್ರಿಝಾ ಯಶಸ್ಸಿನ ಬಳಿಕ ಮಾರುತಿ ಮತ್ತಷ್ಟು ಬೃಹತ್ತಾದ ಎಸ್ ಯುವಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.

By Nagaraja

ವಿಟಾರಾ ಬ್ರಿಝಾ ಯಶಸ್ಸಿನಿಂದ ಪ್ರೇರಣೆ ಪಡೆದಿರುವ ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ದೇಶದಲ್ಲಿ ಮತ್ತಷ್ಟು ಬೃಹತ್ತಾದ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿರುವ ಮಾರುತಿ ವಿಟಾರಾ ಬ್ರಿಝಾ, ಎಂಟು ತಿಂಗಳ ಅವಧಿಯಲ್ಲೇ 1.72 ಲಕ್ಷಕ್ಕೂ ಹೆಚ್ಚಿನ ಬುಕ್ಕಿಂಗ್ ದಾಖಲಿಸಿಕೊಂಡಿತ್ತು.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ದೇಶದ ಅತ್ಯಂತ ಯಶಸ್ವಿ ಕಾರೆನಿಸಿಕೊಂಡಿರುವ ವಿಟಾರಾ ಬ್ರಿಝಾ, ಮಾಸಿಕ 10,000 ಯುನಿಟ್ ಗಳಷ್ಟು ಮಾರಾಟವನ್ನು ಕಾಯ್ದುಕೊಂಡಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಈ ಸಂಬಂಧ ಹೇಳಿಕೆ ಕೊಟ್ಟಿರುವ ಮಾರುತಿ ಸುಜುಕಿ ಮುಖ್ಯಸ್ಥ ಆರ್ ಸಿ ಭಾರ್ಗವ, ನಾವಿಂದು ಕಾಂಪಾಕ್ಟ್ ಎಸ್ ಯುವಿಯನ್ನು ಹೊಂದಿದ್ದು, ಈಗ ದೊಡ್ಡದಾದ ಎಸ್ ಯುವಿ ವಿಭಾಗಕ್ಕೆ ಮುಂದುವರಿಯಲಿದ್ದೇವೆ ಎಂದಿದ್ದಾರೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಮಾರುತಿ ಪಾಲಿಗೆ ಪ್ರೀಮಿಯಂ ಕಾರುಗಳು ಅಷ್ಟೇನೂ ಯಶ ಕೊಟ್ಟಿರಲಿಲ್ಲ. ಈ ಹಿಂದೆ 15 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಕಿಜಾಝಿ ಸೆಡಾನ್ ಮತ್ತು ಗ್ರಾಂಡ್ ವಿಟಾರಾ ಎಸ್ ಯುವಿ ಬಿಡುಗಡೆಗೊಳಿಸಿದರೂ ವೈಫಲ್ಯವನ್ನು ಅನುಭವಿಸಿತ್ತು.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಈ ಎರಡು ವಾಹನಗಳ ಮಾರಾಟವು ಕಳಪೆ ಮಟ್ಟದಲ್ಲಿದ್ದರಿಂದ ಕೊನೆಗೆ ತಮ್ಮ ಯೋಜನೆಯನ್ನು ಕೈಬಿಡಲು ಮಾರುತಿ ಪ್ರೇರಣೆಗೊಂಡಿತ್ತು. ಹಾಗಿದ್ದರೂ ಮಗದೊಮ್ಮೆ ಅಗ್ನಿ ಪರೀಕ್ಷೆಗಿಳಿಯಲು ಸಜ್ಜಾಗುತ್ತಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಭಾರತೀಯ ವಾಹನ ಮಾರುಕಟ್ಟೆ ಬದಲಾಗುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಸಿಯಾಝ್ ಸೆಡಾನ್ ಕಾರಾಗಿದೆ. ಇದು ಮಾರುತಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಮತ್ತಷ್ಟು ಕಾರುಗಳನ್ನು ಬಿಡುಗಡೆ ಮಾಡಲು ಪ್ರೋತ್ಸಾಹ ತುಂಬಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಭಾರತಕ್ಕೆ ಯಾವ ಎಸ್ ಯುವಿ ಬರಲಿದೆ ಎಂಬುದು ಇನ್ನು ಸ್ಪಷ್ಟಗೊಂಡಿಲ್ಲ. ನಿಕಟವರ್ತಿಗಳ ಪ್ರಕಾರ ಮಾರುತಿಯು ಹೊಚ್ಚ ಹೊಸ ವಿಟಾರಾ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ನಾಲ್ಕನೇ ತಲೆಮಾರಿನ ವಿಟಾರಾ ಬ್ರಿಝಾ ವಿಶ್ವದ್ಯಾಂತ ಮಾರಾಟವಾಗುತ್ತಿದೆ. ಇದೀಗ ಭಾರತದತ್ತವೂ ತನ್ನ ಹೆಜ್ಜೆಯನ್ನಿಡಲಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

1.6 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ನೂತನ ವಿಟಾರಾ, 320 ಎನ್ ಎಂ ತಿರುಗುಬಲದಲ್ಲಿ 118 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಸುಜುಕಿಯ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯು ಇದರಲ್ಲಿರಲಿದ್ದು, ದೇಶದಲ್ಲಿ 16ರಿಂದ 20 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ವಿಟಾರಾ ಬ್ರಿಝಾ ಯಶಸ್ಸು; ಬೃಹತ್ ಎಸ್ ಯುವಿ ಬಿಡುಗಡೆ ಮಾಡಲಿರುವ ಮಾರುತಿ

ಇನ್ನು ವಿಟಾರಾ ಬ್ರಿಝಾ ತಳಹದಿಯಲ್ಲೇ ನೂತನ ಎಸ್ ಯುವಿ ಅಭಿವೃದ್ಧಿಗೊಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದು ಭಾರತದಲ್ಲೇ ನಿರ್ಮಾಣವಾಗಿ ಜಾಗತಿಕ ಮಾರಾಟದತ್ತ ಕಣ್ಣಾಯಿಸಲಿದೆ.

Most Read Articles

Kannada
English summary
Maruti Suzuki Considering To Launch Bigger SUV — To Be Slotted Above Vitara Brezza
Story first published: Wednesday, December 7, 2016, 15:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X