ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

Written By:

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಪ್ರಕಟಿಸಿದ ಯೋಜನೆಗಳಂತೆಯೇ ಪ್ರಸಕ್ತ ಸಾಲಿನಲ್ಲೇ ಕೂಪರ್ ಎಸ್ ಮತ್ತು ಕ್ಲಬ್ ಮ್ಯಾನ್ ಮಾದರಿಗಳನ್ನು ಜರ್ಮನಿಯ ಐಕಾನಿಕ್ ಮಿನಿ ಸಂಸ್ಥೆಯು ಬಿಡುಗಡೆಗೊಳಿಸಬೇಕಿತ್ತು. ಇದರಂತೆ ದೇಶದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಮಿನಿ, ಕೂಪರ್ ಎಸ್ ಬಳಿಕವೀಗ ಕ್ಲಬ್ ಮ್ಯಾನ್ ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದೆ.

To Follow DriveSpark On Facebook, Click The Like Button
ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

2016 ಡಿಸೆಂಬರ್ 15ರಂದು ಮಿನಿ ಕ್ಲಬ್ ಮ್ಯಾನ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ತನ್ಮೂಲಕ ಜರ್ಮನಿಯ ಪರಂಪರೆಯನ್ನು ದೇಶದಲ್ಲೂ ಸಾರಲಿದೆ.

ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

ಕೂಪರ್ ಎಸ್ ಜೊತೆ ವಿನ್ಯಾಸವನ್ನು ಹಂಚಿಕೊಂಡಿರುವ ಕ್ಲಬ್ ಮ್ಯಾನ್, ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಅತಿ ಉದ್ದವಾದ ಮಿನಿ ಕಾರಾಗಿದೆ.

ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

ಮುಂಭಾಗದಲ್ಲಿ ಸಂಪೂರ್ಣವಾಗಿ ಹೊಸತಾದ ಗ್ರಿಲ್, ಬಂಪರ್ ಮತ್ತು ಪರಿಷ್ಕೃತ ಹೆಡ್ ಲ್ಯಾಂಪ್ ಗಳು ಇರಲಿದೆ. ಹಿಂಭಾಗದಲ್ಲಿ ಪರಿಣಾಮಕಾರಿಕಾರಿ ವಿನ್ಯಾಸ ಮೈಗೂಡಿಸಿಕೊಂಡಿದೆ.

ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

ಮಿನಿ ಫೈವ್ ಡೋರ್ ಗಿಂತಲೂ 270 ಎಂಎಂ ಉದ್ದ ಮತ್ತು 90 ಎಂಎಂ ಅಗಲವನ್ನು ಕ್ಲಬ್ ಮ್ಯಾನ್ ಹೊಂದಿರಲಿದೆ. ಹಾಗೆಯೇ 100 ಎಂಎಂ ಹೆಚ್ಚುವರಿ ಚಕ್ರಾಂತರವೂ ಇರಲಿದೆ. ಇನ್ನು 360 ಲೀಟರ್ ಢಿಕ್ಕಿ ಜಾಗವನ್ನು 1250 ಲೀಟರ್ ಗೆ ವರ್ಧಿಸಬಹುದಾಗಿದೆ.

ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

ಕಂಪ್ಲೀಟ್ ಬಿಲ್ಟ್ ಯುನಿಟ್ ಹಾದಿಯಲ್ಲಿ ದೇಶವನ್ನು ತಲುಪಲಿರುವ ಮಿನಿ ಕ್ಲಬ್ ಮ್ಯಾನ್ ದೆಹಲಿ ಎಕ್ಸ್ ಶೋ ರೂಂ ಪ್ರಕಾರ 40ರಿಂದ 45 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಪ್ರಸಕ್ತ ತಿಂಗಳಲ್ಲೇ ಮಿನಿ ಕ್ಲಬ್ ಮ್ಯಾನ್ ಬಿಡುಗಡೆ

2.0 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡುವ ಮಿನಿ ಕ್ಲಬ್ ಮ್ಯಾನ್ ಅನುಕ್ರಮವಾಗಿ 189 ಮತ್ತು 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೇಗವರ್ಧನೆ

ವೇಗವರ್ಧನೆ

ಪೆಟ್ರೋಲ್

6.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ ಗಂಟೆಗೆ 225 ಕೀ.ಮೀ.

ಡೀಸೆಲ್

0.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ ಗಂಟೆಗೆ 222 ಕೀ.ಮೀ.

Read more on ಮಿನಿ mini
English summary
Mini Clubman India Launch Date Revealed
Story first published: Monday, December 5, 2016, 16:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark