ಮೋಟಾರು ವಾಹನ ಕಾಯ್ದೆ (ತಿದ್ದುಪಡಿ): ನೀವು ತಿಳಿದುಕೊಳ್ಳಬೇಕಾದ 17 ಅಂಶಗಳು!

Written By:

ದೇಶದ ರಸ್ತೆಗಳಲ್ಲಿ ನಡೆಯುತ್ತಿರುವ ಅಪಘಾತ ಪ್ರಸಂಗಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು 2016 ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡಿದೆ. ವರ್ಷಂಪ್ರತಿ ದೇಶದ ರಸ್ತೆಗಳಲ್ಲಿ ಐದು ಲಕ್ಷದಷ್ಟು ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಇವುಗಳಲ್ಲಿ 1.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ.

ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇವುಗಳಲ್ಲಿ ದಂಡ, ಜೈಲುವಾಸದ ಜೊತೆಗೆ ಚಾಲನಾ ಪರವಾನಗಿ ರದ್ದುಗೊಳ್ಳುವ ಅಪಾಯವೂ ಎದುರಾಗಲಿದೆ. ಅಂದ ಹಾಗೆ ನೂತನ ವಾಹನ ಕಾಯ್ದೆ ತಿದ್ದುಪಡಿಯಲ್ಲಿ ಉಲ್ಲೇಖ ಮಾಡಿರುವ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ಬೊಟ್ಟು ಮಾಡಿ ತೋರಿಸಲಿದ್ದೇವೆ. ಈ ಸಂಬಂಧ ನಿಮ್ಮ ಅಮೂಲ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ.

To Follow DriveSpark On Facebook, Click The Like Button
ಕುಡಿದು ವಾಹನ ಚಾಲನೆ ಮಾಡಿದ್ರೆ ?

ಕುಡಿದು ವಾಹನ ಚಾಲನೆ ಮಾಡಿದ್ರೆ ?

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ ಗರಿಷ್ಠ 10,000 ರು.ಗಳ ವರಗೆ ದಂಡ ವಿಧಿಸಲಾಗುವುದು. ಇಲ್ಲಿಯ ವರೆಗೆ 2,000 ರು.ಗಳ ವರೆಗೆ ದಂಡ ವಿಧಿಸಲಾಗುತ್ತಿತ್ತು.

ಹಿಟ್ ಆ್ಯಂಡ್ ರನ್

ಹಿಟ್ ಆ್ಯಂಡ್ ರನ್

ಹಿಂಟ್ ಆ್ಯಂಡ್ ರನ್ ಪ್ರಕರಣದಲ್ಲಿ ಸಂತ್ರಸ್ತರಿಗೆ ಎರಡು ಲಕ್ಷ ರು.ಗಳ ಪರಿಹಾರ ನೀಡುವ ಕುರಿತಾಗಿಯೂ ಪ್ರಸ್ತಾಪಿಸಲಾಗಿದೆ.

ಸ್ಪೀಡಿಂಗ್/ರೇಸಿಂಗ್

ಸ್ಪೀಡಿಂಗ್/ರೇಸಿಂಗ್

ಓವರ್ ಸ್ಪೀಡ್ ಅಥವಾ ರೇಸಿಂಗ್ ಗೆ 500 ರು.ಗಳಿಂದ 5,000 ರು.ಗಳ ವರೆಗೆ ದಂಡ ಹೇರಲಾಗುವುದು.

ವಿಮೆ ಇಲ್ಲದೆ ವಾಹನ ಚಾಲನೆ

ವಿಮೆ ಇಲ್ಲದೆ ವಾಹನ ಚಾಲನೆ

ವಾಹನ ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದ್ರೆ 2,000 ರು.ಗಳ ದಂಡ ಹಾಗೂ ಮೂರು ತಿಂಗಳ ಜೈಲುವಾಸ ವಿಧಿಸಲಾಗುವುದು.

ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ

ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ

ಹಾಗೊಂದು ವೇಳೆ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದ್ರೆ 1000 ರುಪಾಯಿಗಳ ದಂಡ ಹಾಗೂ ಮೂರು ತಿಂಗಳುಗಳ ವರೆಗೆ ಲೈಸನ್ಸ್ ಅಮಾನತು ಮಾಡಲಾಗುವುದು.

ಅಪ್ರಾಪ್ತರ ವಯಸ್ಕರ ಎಡವಟ್ಟು

ಅಪ್ರಾಪ್ತರ ವಯಸ್ಕರ ಎಡವಟ್ಟು

ಇನ್ನೊಂದು ವೇಳೆ ಅಪ್ರಾಪ್ತ ವಯಸ್ಕರು ಚಾಲನೆ ಮಾಡುವ ವಾಹನಗಳು ಅಪಘಾತಕ್ಕೀಡಾದ್ದಲ್ಲಿ ಅಂತಹ ಸಂದರ್ಭದಲ್ಲಿ ಹೆತ್ತವರನ್ನೇ ಹೊಣೆ ಮಾಡಲಾಗುವುದು. ಇದರ ಜೊತೆಗೆ ವಾಹನ ನೊಂದಣಿ ರದ್ದು ಮಾಡಲಾಗುವುದು. ಅಲ್ಲದೆ 25,000 ರು.ಗಳ ದಂಡ ಹಾಗೂ ಮೂರು ತಿಂಗಳುಗಳ ಕಠಿಣ ಜೈಲುವಾಸ ಶಿಕ್ಷೆಯನ್ನು ವಿಧಿಸಲಾಗುವುದು.

ಸಂಚಾರ ನಿಯಮ ಉಲ್ಲಂಘನೆ

ಸಂಚಾರ ನಿಯಮ ಉಲ್ಲಂಘನೆ

ಸಂಚಾರ ನಿಯಮ ಉಲ್ಲಂಘನೆಗಾಗಿ ಈ ಹಿಂದೆಯಿದ್ದ 100 ರು.ಗಳ ದಂಡವನ್ನು 500 ರು.ಗಳಿಗೆ ಏರಿಸಲಾಗಿದೆ.

ಅಶಿಸ್ತಿನ ವರ್ತನೆ

ಅಶಿಸ್ತಿನ ವರ್ತನೆ

ಹಾಗೆಯೇ ಅಧಿಕಾರಿಗಳ ವಿರುದ್ಧ ಅಶಿಸ್ತಿನ ವರ್ತನೆ ತೋರಿದರೆ ದಂಡದ ಪ್ರಮಾಣವನ್ನು 500 ರು.ಗಳಿಂದ 2000 ರು.ಗಳಿಗೆ ಏರಿಸಲಾಗಿದೆ.

ಲೈಸನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ

ಲೈಸನ್ಸ್ ಇಲ್ಲದೆ ಅನಧಿಕೃತ ವಾಹನ ಚಾಲನೆ

ಚಾಲನಾ ಪರವಾನಗಿ ಇಲ್ಲದೆ ಅನಧಿಕೃತ ವಾಹನ ಚಾಲನೆ ಮಾಡಿದರೆ ದಂಡದ ಪ್ರಮಾಣವನ್ನು 1000 ರು.ಗಳಿಂದ 5,000 ರು.ಗಳಿಗೆ ಏರಿಕೆಗೊಳಿಸಲಾಗಿದೆ.

ಡ್ರೈವಿಂಗ್ ಅನರ್ಹತೆ

ಡ್ರೈವಿಂಗ್ ಅನರ್ಹತೆ

ಡ್ರೈವಿಂಗ್ ಅನರ್ಹಗೊಳಿಸಿದ ಬಳಿಕವೂ ಚಾಲನೆ ಮಾಡಿದ್ದಲ್ಲಿ ದಂಡದ ಪ್ರಮಾಣವನ್ನು 500 ರು.ಗಳಿಂದ 10,000 ರು.ಗಳಿಗೆ ಏರಿಕೆಗೊಳಿಸಲಾಗಿದೆ.

ಅತಿಯಾದ ಗಾತ್ರ

ಅತಿಯಾದ ಗಾತ್ರ

ವಾಹನದ ಗಾತ್ರ ಮೀರಿದ್ದಲ್ಲಿ 5000 ರು.ಗಳಷ್ಟು ದಂಡ ಹೇರಲಾಗುವುದು.

ಅಪಾಯಕಾರಿ ಚಾಲನೆ

ಅಪಾಯಕಾರಿ ಚಾಲನೆ

ಅಪಾಯಕಾರಿ ವಾಹನ ಚಾಲನೆ ದಂಡದ ಪ್ರಮಾಣವನ್ನು 1000 ರು.ಗಳಿಂದ 5,000 ರು.ಗಳಿಗೆ ಹೆಚ್ಚಳ ಮಾಡಲಾಗಿದೆ.

ಮಿತಿ ಮೀರಿದ ಸರಕು

ಮಿತಿ ಮೀರಿದ ಸರಕು

ವಾಹನಗಳಲ್ಲಿ ಮಿತಿ ಮೀರಿದ ಸರಕು ಸಾಗಣೆ ಮಾಡಿದ್ದಲ್ಲಿ ಗರಿಷ್ಠ 20,000 ರು.ಗಳ ದಂಡ ವಿಧಿಸಲಾಗುವುದು.

ಓವರ್ ಲೋಡಿಂಗ್ - ಪ್ರಯಾಣಿಕರು

ಓವರ್ ಲೋಡಿಂಗ್ - ಪ್ರಯಾಣಿಕರು

ಪ್ರತಿಯೊಬ್ಬ ಪ್ರಯಾಣಿಕರಿಗೂ ಹೆಚ್ಚುವರಿಯಾಗಿ 1000 ರು. ದಂಡ ಪಾವತಿಸಬೇಕು.

ಸೀಟು ಬೆಲ್ಟ್ ಹಾಕಿಕೊಳ್ಳದಿದ್ದರೆ ?

ಸೀಟು ಬೆಲ್ಟ್ ಹಾಕಿಕೊಳ್ಳದಿದ್ದರೆ ?

ಕಾರು ಚಾಲನೆ ವೇಳೆ ಸೀಟು ಬೆಲ್ಟ್ ಹಾಕಿಕೊಳ್ಳದಿದ್ದರೆ ದಂಡದ ಪ್ರಮಾಣವನ್ನು 100 ರು.ಗಳಿಂದ 1000 ರು.ಗಳಿಗೆ ಏರಿಕೆಗೊಳಿಸಲಾಗಿದೆ.

ಪರವಾನಗಿ ಇಲ್ಲದ ವಾಹನ

ಪರವಾನಗಿ ಇಲ್ಲದ ವಾಹನ

ಪರವಾನಗಿ ಇಲ್ಲದ ವಾಹನ ಮೇಲಿನ ದಂಡದ ಪ್ರಮಾಣವನ್ನು 5000 ರು.ಗಳಿಂದ 10,000 ರು.ಗಳಿಗೆ ಏರಿಕೆಗೊಳಿಸಲಾಗಿದೆ.

ತುರ್ತು ವಾಹನಗಳಿಗೆ ಹಾದಿ ಬಿಟ್ಟುಕೊಡದಿದ್ದಲ್ಲಿ?

ತುರ್ತು ವಾಹನಗಳಿಗೆ ಹಾದಿ ಬಿಟ್ಟುಕೊಡದಿದ್ದಲ್ಲಿ?

ಅಂಬುಲೆನ್ಸ್ ಗಳಂತಹ ತುರ್ತು ವಾಹನಗಳಿಗೆ ಹಾದಿ ಬಿಟ್ಟುಕೊಡದಿದ್ದಲ್ಲಿ 10,000 ರು.ಗಳ ವರೆಗೆ ದಂಡ ವಿಧಿಸಲಾಗುವುದು.

Read more on ಭಾರತ india
English summary
2016 Motor Vehicle Amendment Bill Passed: Complete Details
Story first published: Friday, August 5, 2016, 10:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark