ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಗ್ರಾಹಕರಿಗೆ ಗರಿಷ್ಠ ಕೊಡುಗೆಗಳನ್ನು ನೀಡುವುದರಲ್ಲೂ ಸದಾ ಹೆಸರು ಮಾಡಿದೆ. ಇದನ್ನು ಮಗದೊಮ್ಮೆ ಸಾಬೀತುಪಡಿಸಿರುವ ಟಾಟಾ ಸಂಸ್ಥೆಯೀಗ ಪ್ರತಿ ವಾರವೂ ದೀಪಾವಳಿ ಆಫರ್ ಘೋಷಿಸಿದೆ.

ದೀಪಾವಳಿ ಹಬ್ಬದ ಆವೃತ್ತಿಯ ಭಾಗವಾಗಿ ಟಾಟಾ 'ಹರ್ ವೀಕ್ ದಿವಾಳಿ' ಆಕರ್ಷಕ ಆಫರುಗಳನ್ನು ಮುಂದಿಟ್ಟಿದ್ದು, ಮುಂದಿನ ಏಳು ವಾರಗಳ ಪರ್ಯಂತ ಮುಂದುವರಿಯಲಿದೆ. ಇದು ನಗದು, ಎಕ್ಸ್ ಚೇಂಜ್ ಜೊತೆಗೆ ಉಚಿತ ವಿಮೆ ಸೌಲಭ್ಯಗಳನ್ನು ಸೇರಿರಲಿದೆ.

ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

ಟಾಟಾ ಸಂಸ್ಥೆಯು ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ ತನ್ನೆಲ್ಲ ಪ್ರಯಾಣಿಕ ಶ್ರೇಣಿಯ ಕಾರುಗಳಿಗೆ ಆಫರ್ ಗಳು ಅನ್ವಯವಾಗಲಿದೆ. ಈ ಅವಧಿಯಲ್ಲಿ ಟಾಟಾ ಕಾರು ಬುಕ್ ಮಾಡಿದ ಗ್ರಾಹಕರಿಗೆ 10 ಲಕ್ಷ ರುಪಾಯಿ ಗೆಲ್ಲುವ ಅವಕಾಶವಿರುತ್ತದೆ.

ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

ಟಾಟಾದ ಎಲ್ಲ ಅಧಿಕೃತ ಶೋ ರೂಂ ಗಳಲ್ಲಿ ಸಫಾರಿ ಸ್ಟ್ರೋಮ್ ಖರೀದಿ ವೇಳೆಯಲ್ಲಿ ಒಂದು ಲಕ್ಷದ ವರೆಗೆ ಆಫರ್ ನೀಡಲಾಗುತ್ತಿದೆ.

ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

ಅತ್ತ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಖರೀದಿ ವೇಳೆಯಲ್ಲಿ 20,000 ರುಪಾಯಿಗಳ ವರೆಗೆ ನಗದು ಆಫರ್ ನೀಡಲಾಗುತ್ತದೆ. ದೇಶದ ಮುಂಚೂಣಿಯ ಬ್ಯಾಂಕ್ ಗಳಿಂದ ಗ್ರಾಹಕರು ಆಕರ್ಷಕ ಹಣಕಾಸು ನೆರವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಪ್ರಯಾಣಿಕ ವಿಭಾಗದ ಅಧ್ಯಕ್ಷ ಮಯಾಂಕ್ ಪರೀಕ್, ಹಬ್ಬದ ಆವೃತ್ತಿ ಆರಂಭವಾಗಿರುವಂತೆಯೇ ಟಾಟಾಗೆ ಇದರ ಭಾಗವಾಗಲು ಸಾಧ್ಯವಾಗಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದಿದ್ದಾರೆ.

ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

ಅಚ್ಚರಿಯೆಂಬಂತೆ ಟಾಟಾ ಆಫರ್ ಗಳು ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ. ಅತ್ತ ಮಾರಾಟದ ವಿಚಾರವನ್ನು ಗಮನಿಸಿದಾಗಲೂ ಟಾಟಾಗೆ ಶುಭ ಸೂಚಕವೆನಿಸಿದ್ದು, 2016 ಆಗಸ್ಟ್ ತಿಂಗಳಲ್ಲಿ ಶೇಕಡಾ 17ರಷ್ಟು ಮಾರಾಟ ಏರುಗತಿ ಸಾಧಿಸಿತ್ತು. ಇದರಲ್ಲಿ ಟಾಟಾ ಟಿಯಾಗೊ ನಿರ್ಣಾಯಕ ಪಾತ್ರವಹಿಸಿದೆ.

ಮಿಸ್ ಮಾಡದಿರಿ; ಟಾಟಾದಿಂದ ಪ್ರತಿ ವಾರವೂ 'ದೀಪಾವಳಿ ಆಫರ್'

ನೂತನ ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರು 3.20 ಲಕ್ಷ ರು.ಗಳಿಂದ ಆರಂಭವಾಗಲಿದೆ. ಸೆಪ್ಟೆಂಬ್ರ 16ರಿಂದಲೇ ಆರಂಭವಾಗಿರುವ ಆಫರ್ ಗಳು ಸೀಮಿತ ಅವಧಿಯ ವರೆಗೆ ಮಾತ್ರ ಲಭ್ಯವಾಗಲಿದೆ.

English summary
Tata Motors Introduce ‘Har Week Diwali’ Offer Pan India
Story first published: Tuesday, September 20, 2016, 16:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark