ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

Written By:

ಬಲ್ಲ ಮೂಲಗಳ ಪ್ರಕಾರ ಭಾರತೀಯ ಸೇನೆಯು ಹಳೆಯ ಮಾರುತಿ ಶ್ರೇಣಿಯ ವಾಹನಗಳನ್ನು ಬದಲಾಯಿಸಲಿದ್ದು, ಇವುಗಳ ಸ್ಥಾನವನ್ನು ಹೆಚ್ಚು ಆಧುನಿಕ ಸೌಲಭ್ಯಗಳುಳ್ಳ ಟಾಟಾ ಸಫಾರಿ ಕ್ರೀಡಾ ಬಳಕೆಯ ವಾಹನಗಳು ತುಂಬಲಿದೆ.

To Follow DriveSpark On Facebook, Click The Like Button
ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

ಪ್ರಾಥಮಿಕ ಹಂತವಾಗಿ 3,200 ವಾಹನಗಳ ತಯಾರಿಕೆಗೆ ಆರ್ಡರ್ ಮಾಡಲಾಗಿದ್ದು, ಮುಂದಿನ ವರ್ಷಗಳಲ್ಲಿ ಈ ಪ್ರಮಾಣ 10 ಪಟ್ಟು ಜಾಸ್ತಿಯಾಗಲಿದೆ.

ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

ಈ ಬಗ್ಗೆ ಭಾರತೀಯ ರಕ್ಷಣಾ ಇಲಾಖೆಯು ಅಧಿಕೃತ ಪ್ರಕಟಣೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ. ಆರ್ಮಿ ವಾಹನ ರೇಸ್ ನಲ್ಲಿ ಮಹೀಂದ್ರ ಸ್ಕಾರ್ಪಿಯೊವನ್ನು ಟಾಟಾ ಸಫಾರಿ ಹಿಂದಿಕ್ಕಿದೆ.

ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

ಭಾರತೀಯ ಸೇನೆಯು ಏರ್ಪಡಿಸಿದ್ದ ಅತ್ಯಂತ ಕಠಿಣ ಟೆಸ್ಟಿಂಗ್ ಕಾರ್ಯಗಳಲ್ಲಿ ಇವುಗಳು ಭಾಗವಹಿಸಿದೆ. ಎತ್ತರದ ಭೂ ಪ್ರದೇಶದಿಂದ ತೊಡಗಿ ಮರುಭೂಮಿ, ಹಿಮ ಪ್ರದೇಶಗಳಲ್ಲಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕಿತ್ತು.

ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

ಭಾರತೀಯ ರಕ್ಷಣಾ ಇಲಾಖೆ ಮತ್ತು ಟಾಟಾ ಸಂಸ್ಥೆಗಳ ನಡುವೆ ನಡುವೆ ಒಪ್ಪಂದ ನಡೆಯಲಿದೆ. ಜಿಪ್ಸಿ ಸ್ಥಾನವನ್ನು ತುಂಬಲಿರುವ ಟಾಟಾ ವಾಹನಗಳು ಭಾರತೀಯ ಸೇನೆಯ ಬೆಟಾಲಿಯನ್ ಪಡೆಗಳ ಮತ್ತು ಅಧಿಕಾರಿಗಳ ಸಾರಿಗೆಗೆ ಬಳಕೆ ಮಾಡಲಾಗುವುದು.

ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

ಪ್ರಸ್ತುತ 30,000ದಷ್ಟು ಮಾರುತಿ ಜಿಪ್ಸಿ ವಾಹನಗಳು ಭಾರತೀಯ ಸೇನೆಯ ಸೇವೆಯಲ್ಲಿದ್ದು, ಮುಂದಿನ ವರ್ಷದಿಂದ ಬದಲಾವಣೆಯ ಪರ್ವ ಆರಂಭವಾಗಲಿದೆ. ತನ್ನೆಲ್ಲ ಯುನಿಟ್ ಗಳಿಗೆ ಏಕಮಾತ್ರ ಮಾಡೆಲನ್ನು ಸೇನೆಯು ನಿಯೋಜಿಸಲಿದೆ.

ಭಾರತೀಯ ಸೇನೆಯಿಂದ ಜಿಪ್ಸಿ ಔಟ್; ಟಾಟಾ ಸಫಾರಿ ಹೊಸ ಸಾರಥಿ

ವರ್ಷಾರಂಭದಲ್ಲಷ್ಟೇ ಭಾರತೀಯ ಸೇನೆಗೆ ಮಿಲಿಟರಿ ಟ್ರಕ್ ಗಾಗಿ 1,300 ಕೋಟಿ ರುಪಾಯಿಗಳ ಒಪ್ಪಂದಕ್ಕೆ ಟಾಟಾ ಸಹಿ ಹಾಕಿತ್ತು. ಇದನ್ನು ರಾಕೆಟ್ ಲಾಂಚರ್, ನೆಲದಿಂದ ಗಾಳಿಗೆ ದಾಳಿಯನ್ನಿಡುವ ಕ್ಷಿಪಣಿ ರವಾನೆಗೂ ಬಳಕೆ ಮಾಡಲಿದೆ.

Read more on ಭಾರತ india
English summary
Tata Safari Storme To Replace Maruti Gypsy As The New Army Vehicle
Story first published: Tuesday, December 6, 2016, 17:53 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark