ಟೊಯೊಟಾದಿಂದ ಸಣ್ಣ ಎಂಪಿವಿ; ಇದೇನಾ ಮಿನಿ ಇನ್ನೋವಾ?
ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ, ಭಾರತದಲ್ಲಿ ಅತಿ ನೂತನ ಇನ್ನೋವಾ ಕ್ರೈಸ್ಟಾ ಬಿಡುಗಡೆಗೊಳಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಈಗ ಮಗದೊಂದು ಸಣ್ಣ ಬಹು ಬಳಕೆಯ ವಾಹನ ನಿರ್ಮಾಣದಲ್ಲಿ ಸಂಸ್ಥೆಯು ತೊಡಗಿಸಿಕೊಂಡಿದೆ.
ಟೊಯೊಟಾ ಅಭಿವೃದ್ಧಿಪಡಿಸುತ್ತಿರುವ ನೂತನ ಎಂಪಿವಿ ಮಿನಿ ಇನ್ನೋವಾ ಕಾರು ಆಗಿರಲಿದೆಯೇ ಎಂಬುದು ಬಹಳಷ್ಟು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಟೊಯೊಟಾ 'ಕಾಲ್ಯಾ' (Calya) ಎಂಬ ಹೆಸರಿನಿಂದ ಅರಿಲ್ಪಡುವ ನೂತನ ಸಣ್ಣ ಎಂಪಿವಿ ಕಡಿಮೆ ದುಬಾರಿಯ ಗ್ರೀನ್ ಕಾರು (LCGC) ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

ಮೂಲಗಳ ಪ್ರಕಾರ ಟೊಯೊಟಾ 'ಆಗ್ಯಾ' ತಳಹದಿಯಲ್ಲಿ ನೂತನ ಎಂಪಿವಿ ನಿರ್ಮಿಸಲಾಗಿದ್ದು, ಮೊದಲು ಇಂಡೋನೇಷ್ಯಾ ಮಾರುಕಟ್ಟೆಯನ್ನು ತಲುಪಲಿದೆ.

ಎರಡನೇ ತಲೆಮಾರಿನ ಇನ್ನೋವಾ ಕ್ರೈಸ್ಟಾಗೆ ಹೋಲುವಂತೆ ವಿನ್ಯಾಸವು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

'ಕಾಲ್ಯಾ' ಎಂಬ ಸಂಸ್ಕೃತ ಪದದ ಅರ್ಥ ಯಾವುದೇ ದೋಷವಿಲ್ಲ ಅಥವಾ ಪರಿಪೂರ್ಣ ಎಂಬುದಾಗಿದೆ.

ಬಲ್ಲ ಮೂಲಗಳ ಪ್ರಕಾರ ನೂತನ ಟೊಯೊಟಾ ಎಂಪಿವಿ ಕಾರಲ್ಲಿ ಇಟಿಯೋಸ್ ಕಾರಿನಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಇರಲಿದೆ. ಅಲ್ಲದೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಇಂಡೋನೇಷ್ಯಾ ಮಾರುಕಟ್ಟೆಯಲ್ಲೇ ನಿರ್ಮಾಣವಾಗಲಿರುವ ನೂತನ ಕಾರು ಪ್ರತಿ ಲೀಟರ್ ಗೆ 20 ಕೀ.ಮೀ. ಹೆಚ್ಚು ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರಲಿದೆ.


Click it and Unblock the Notifications








