ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಭಾರತದಲ್ಲಿ ಅತಿ ಹೆಚ್ಚು ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

By Nagaraja

ಜಪಾನ್ ನ ದೈತ್ಯ ವಾಹನ ಸಂಸ್ಥೆ ಟೊಯೊಟಾ ಮೋಟಾರ್ ಕಾರ್ಪೋರೇಷನ್ ಭಾಗವಾಗಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯು ಇತ್ತೀಚೆಗಷ್ಟೇ ಭಾರತದಲ್ಲಿ ಇನ್ನೋವಾ ಕ್ರೈಸ್ಟಾ ಮತ್ತು ಫಾರ್ಚ್ಯುನರ್ ಗಳಂತಹ ಅತ್ಯಾಕರ್ಷಕ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ಸಂಸ್ಥೆಯೀಗ ಹೊಸ ವರ್ಷದ ಸಂಭ್ರಮದ ಕೊಡುಗೆಯ ಭಾಗವಾಗಿ ಪ್ರಯಸ್ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ವಾಹನ ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಪ್ರಯಸ್ ಹೈಬ್ರಿಡ್ ಕಾರು 2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲೂ ಟೊಯೊಟಾ ಪ್ರಯಸ್ ಜಾಗತಿಕ ಪಾದಾರ್ಪಣೆಗೈದಿತ್ತು. ಇದು ಟೊಯೊಟಾದ ಜಾಗತಿಕ ತಳಹದಿ ಬಳಕೆ ಮಾಡುತ್ತಿರುವ ಸಂಸ್ಥೆಯ ಮೊದಲ ಕಾರಾಗಿರಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೇಕ್ಚರ್ (ಟಿಎನ್ ಜಿಎ) ತಳಹದಿಯಲ್ಲಿ ನೂತನ ಪ್ರಯಸ್ ನಿರ್ಮಾಣವಾಗುತ್ತಿದ್ದು, ಅತ್ಯುತ್ತಮ ಹ್ಯಾಂಡ್ಲಿಂಗ್ ಜೊತೆಗೆ ಸ್ಥಿರತೆಯನ್ನು ಪ್ರದಾನ ಮಾಡಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ನೂತನ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಪ್ರೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಗಿಟ್ಟಿಸಿಕೊಳ್ಳಲಿದೆ. 1.8 ಲೀಟರ್ 4 ಸಿಲಿಂಡರ್ ಡಿಒಎಚ್ ಸಿ ವಿವಿಟಿ-ಐ ಮೋಟಾರು ಜೊತೆಗೆ ಇವಿ44, ಇಕೊ ಮತ್ತು ಪವರ್ ಮೋಡ್ ಗಲು 142 ಎನ್ ಎಂ ತಿರುಗುಬಲದಲ್ಲಿ 97 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಲಿಥಿಯಂ-ಇಯಾನ್/ನಿಕ್ಕೆಲ್-ಮೆಟಲ್ ಹೈಬ್ರಿಡ್ ಬ್ಯಾಟರಿಗಳು ಹೊಂದಿರುವ ಇದರ ಎಲೆಕ್ಟ್ರಿಕ್ ಮೋಟಾರು 136 ಎನ್ ಎಂ ತಿರುಗುಬಲದಲ್ಲಿ 71 ಅಶ್ವಶಕ್ತಿ ಉತ್ಪಾದಿಸಲು ನೆರವಾಗಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಇಂಧನ ಕ್ಷಮತೆಯಲ್ಲಿ ಶೇಕಡಾ 10ರಷ್ಟು ವೃದ್ಧಿ ದಾಖಲಿಸಿರುವ ಟೊಯೊಟಾ ಉಷ್ಣತೆಯ ದಕ್ಷತೆಯಲ್ಲಿ ಶೇಕಡಾ 40ರಷ್ಟು ಸುಧಾರಣೆ ಕಂಡುಬಂದಿದೆ.

ಆಯಾಮ

ಆಯಾಮ

ಉದ್ದ: 4540

ಅಗಲ: 1760

ಎತ್ತರ: 1470

ಚಕ್ರಾಂತರ: 2700

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಅಂದರೆ ತನ್ನ ಹಿಂದಿನ ಮಾದರಿಗಿಂತಲೂ 60 ಎಂಎಂ ಹೆಚ್ಚು ಉದ್ದ, 15 ಎಂಎಂ ಹೆಚ್ಚು ಅಗಲವನ್ನು ಪಡೆಯಲಿದ್ದು, ಕಾರಿನೊಳಗೆ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಹಾಗೆಯೇ ಇಂಧನ ಟ್ಯಾಂಕ್ ಸಾಮರ್ಥ್ಯದಲ್ಲೂ 445 ಲೀಟರ್ ಗಳಿಂದ 502 ಲೀಟರ್ ಗಳಿಗೆ ವರ್ಧನೆಯಾಗಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ, 4.2 ಇಂಚುಗಳ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡಿಸ್ ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಕಲರ್ ಹೆಡ್ ಅಪ್ ಡಿಸ್ ಪ್ಲೇ ವಿಶಿಷ್ಟತೆಗಳಿರಲಿದೆ.

ಹೊಸ ವರ್ಷದಲ್ಲಿ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ಬಿಡುಗಡೆ

ಅಂದ ಹಾಗೆ ನೂತನ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 30ರಿಂದ 40 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

Most Read Articles

Kannada
English summary
Toyota Confirms New Prius India Launch In January 2017
Story first published: Thursday, November 24, 2016, 15:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X