ಅಗ್ರ ಪಟ್ಟವೊಂದೇ ಗುರಿ; ಮುಂಬರುವ ಹ್ಯುಂಡೈ ಕಾರುಗಳನ್ನು ಸೂಕ್ಷ್ಮವಾಗಿ ಗಮನಿಸಿ!

Written By:

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ 1998ರಲ್ಲಿ ಚಿಕ್ಕದಾದ 'ಸ್ಯಾಂಟ್ರೊ' ಮುಖಾಂತರ ಭಾರತಕ್ಕೆ ಕಾಲಿಟ್ಟಿತ್ತು. ತದಾ ಬಳಿಕ ವಿಶ್ವಾಸಾರ್ಹ ಗುಣಮಟ್ಟದ ಕಾರುಗಳನ್ನು ಪರಿಚಯಿಸಿರುವ ಹ್ಯುಂಡೈ ದೇಶದ ಅತಿ ಅತಿ ದೊಡ್ಡ ವಾಹನ ಸಂಸ್ಥೆ ಮಾರುತಿ ಸುಜುಕಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.

ನಿರಂತರ ಅಂತರಾಳದಲ್ಲಿ ನೂತನ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡಲು ಗಮನ ಕೇಂದ್ರಿಕರಿಸಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ 2016-17ನೇ ಸಾಲಿನಲ್ಲೂ ಕೆಲವು ಆಕರ್ಷಕ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಈ ಎಲ್ಲದರ ಮುಖಾಂತರ ಮಾರುತಿಯನ್ನು ಆದಷ್ಟ ಬೇಗನೇ ಹಿಂದಿಕ್ಕಿ ಅಗ್ರಪಟ್ಟಕ್ಕೇರುವ ಗುರಿಯನ್ನು ಹೊಂದಿದೆ.

To Follow DriveSpark On Facebook, Click The Like Button
01. ಹ್ಯುಂಡೈ ಇಯಾನ್ ಫೇಸ್ ಲಿಫ್ಟ್

01. ಹ್ಯುಂಡೈ ಇಯಾನ್ ಫೇಸ್ ಲಿಫ್ಟ್

ಪ್ರಮುಖವಾಗಿಯೂ ದೇಶದ ನಂ.1 ಕಾರು ಮಾರುತಿ ಆಲ್ಟೊಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಇಯಾನ್ ಗುರುತಿಸಿಕೊಂಡಿದೆ. ಮಾರುತಿಯಿಂದ ಪ್ರಬಲ ಸ್ಪರ್ಧೆ ಎದುರಾಗುತ್ತಿದ್ದರೂ ತನ್ನ ಈಗಲೂ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಇಯಾನ್ ಯಶ ಕಂಡಿದೆ. ಅಲ್ಲದೆ ಅತಿ ಶೀಘ್ರದಲ್ಲೇ ಇಯಾನ್ ಗೆ ಹೊಸ ಸ್ವರೂಪ ನೀಡಲು ಹ್ಯುಂಡೈ ಸಿದ್ಧತೆ ನಡೆಸುತ್ತಿದೆ.

ಹ್ಯುಂಡೈ ಇಯಾನ್ ಫೇಸ್ ಲಿಫ್ಟ್

ಹ್ಯುಂಡೈ ಇಯಾನ್ ಫೇಸ್ ಲಿಫ್ಟ್

ಹ್ಯುಂಡೈನ ಹೆಸರಾಂತ ಫ್ಯೂಯಿಡಿಕ್ 2.0 ವಿನ್ಯಾಸ ತಂತ್ರಗಾರಿಕೆಯು ಇಯಾನ್ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ. ಹಾಗಿದ್ದರೂ ಎಂಜಿನ್ ಮಾನಂದಂಡಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವ ಸಾಧ್ಯತೆಗಳಿಲ್ಲ. ಇದು 814 ಹಾಗೂ 998 ಸಿಸಿ ಪೆಟ್ರೋಲ್ ಎಂಜಿನ್ ಗಳಿಂದ ನಿಯಂತ್ರಿಸ್ಪಡಲಿದೆ.

ನಿರೀಕ್ಷಿತ ಬೆಲೆ: 3 ರಿಂದ 4.50 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ಅಕ್ಟೋಬರ್

02. ನೂತನ ಹ್ಯುಂಡೈ ಎಲಂಟ್ರಾ

02. ನೂತನ ಹ್ಯುಂಡೈ ಎಲಂಟ್ರಾ

ಆರನೇ ತಲೆಮಾರಿನ ಸೆಡಾನ್ ಕಾರಾಗಿರುವ ಹ್ಯುಂಡೈ ಎಲಂಟ್ರಾ ಭಾರತಕ್ಕೆ ಕಾಲಿಡಲು ಸಜ್ಜಾಗಿ ನಿಂತಿದೆ. ಇದರಲ್ಲಿ ಹೊಸ ಫ್ರಂಟ್ ಗ್ರಿಲ್ ಜೊತೆಗೆ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ನೂತನ ಹ್ಯುಂಡೈ ಎಲಂಟ್ರಾ

ನೂತನ ಹ್ಯುಂಡೈ ಎಲಂಟ್ರಾ

2015 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನ ಕಂಡಿರುವ ಹ್ಯುಂಡೈ ಎಲಂಟ್ರಾದಲ್ಲಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್ 179 ಎನ್ ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.6 ಮತ್ತು 1.8 ಲೀಟರ್ ಡೀಸೆಲ್ ಎಂಜಿನ್ ಗಳು ಸಹ ಪಡೆಯಲಿದೆ.

ನಿರೀಕ್ಷಿತ ಬೆಲೆ: 15 ರಿಂದ 18 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ಅಕ್ಟೋಬರ್/ನವೆಂಬರ್

03. ಹ್ಯುಂಡೈ ಟಕ್ಸನ್

03. ಹ್ಯುಂಡೈ ಟಕ್ಸನ್

ವಿದೇಶಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹ್ಯುಂಡೈ, ಮೂರನೇ ತಲೆಮಾರಿನ ಟಕ್ಸನ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ. ಇದು ಕ್ರೆಟಾ ಹಾಗೂ ಸಾಂಟಾಫೆ ನಡುವೆ ಗುರುತಿಸಿಕೊಳ್ಳಲಿದೆ.

ಹ್ಯುಂಡೈ ಟಕ್ಸನ್

ಹ್ಯುಂಡೈ ಟಕ್ಸನ್

ಹ್ಯುಂಡೈ ಟಕ್ಸನ್ ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಇದರ 1.7 ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಗಳು ಅನುಕ್ರಮವಾಗಿ 114 ಹಾಗೂ 182 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ.

ನಿರೀಕ್ಷಿತ ಬೆಲೆ: 18 ರಿಂದ 25 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2016 ವರ್ಷಾಂತ್ಯ ಅಥವಾ 2017 ಆರಂಭ

04. ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

04. ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ನೂತನ ಹೋಂಡಾ ಸಿಟಿ ಹಾಗೂ ಮಾರುತಿ ಸಿಯಾಝ್ ಮಾದರಿಗಳಿಗೆ ಹೋಲಿಸಿದಾಗ ಕಳೆಗುಂದಿರುವ ಹ್ಯುಂಡೈ ವೆರ್ನಾ, ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗದಲ್ಲಿ ಕಳೆದು ಹೋಗಿರುವ ತನ್ನ ಸ್ಥಾನವನ್ನು ಮರಳಿ ಪಡೆಯುವ ಇರಾದೆಯಲ್ಲಿದೆ. ಆಗಲೇ 2016 ಬೀಜಿಂಗ್ ಮೋಟಾರು ಶೋದಲ್ಲಿ ಪಾದಾರ್ಪಣೆ ಮಾಡಿರುವ ನೂತನ ಹ್ಯುಂಡೈ ವೆರ್ನಾ ಭಾರತದಕ್ಕೂ ಎಂಟ್ರಿ ಕೊಡಲಿದೆ.

ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ನ್ಯೂ ಜನರೇಷನ್ ಹ್ಯುಂಡೈ ವೆರ್ನಾ

ದೊಡ್ಡದಾದ ಫ್ರಂಟ್ ಗ್ರಿಲ್, ಆಕರ್ಷಕ ಹೆಡ್ ಲ್ಯಾಂಪ್ ಹೀಗೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯಲಿರುವ ಹ್ಯುಂಡೈ ವೆರ್ನಾ, 1.4 ಹಾಗೂ 1.6 ಲೀಟರ್ ಪೆಟ್ರೋಲ್/ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ನಿರೀಕ್ಷಿತ ಬೆಲೆ: 8 ರಿಂದ 14 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017 ಜೂನ್/ಜುಲೈ

05. ಹ್ಯುಂಡೈ ಹೆಕ್ಸಾ ಸ್ಪೇಸ್

05. ಹ್ಯುಂಡೈ ಹೆಕ್ಸಾ ಸ್ಪೇಸ್

ಬಹು ಉಪಯುಕ್ತ ವಾಹನ ವಿಭಾಗದಲ್ಲಿ ಸೂಕ್ತ ಕಾರಿನ ಕೊರತೆಯನ್ನು ಅನುಭವಿಸುತ್ತಿರುವ ಹ್ಯುಂಡೈ, ನೂತನ ಹೆಕ್ಸಾ ಸ್ಪೇಸ್ ಮುಖಾಂತರ ಇದನ್ನು ತುಂಬಿಸಲಿದೆ. ನಿಮ್ಮ ಮಾಹಿತಿಗಾಗಿ, ನಾಲ್ಕು ವರ್ಷಗಳ ಹಿಂದೆಯೇ ಅಂದರೆ 2012 ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಹೆಕ್ಸಾ ಸ್ಪೇಸ್ ಕಾನ್ಸೆಪ್ಟ್ ಮಾದರಿಯನ್ನು ಹ್ಯುಂಡೈ ಪ್ರದರ್ಶನಗೊಳಿಸಿತ್ತು.

ಹ್ಯುಂಡೈ ಹೆಕ್ಸಾ ಸ್ಪೇಸ್

ಹ್ಯುಂಡೈ ಹೆಕ್ಸಾ ಸ್ಪೇಸ್

ಮಾರುತಿ ಎರ್ಟಿಗಾ ಮತ್ತು ಹೋಂಡಾ ಮೊಬಿಲಿಯೊ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಹ್ಯುಂಡೈ ಹೆಕ್ಸಾ, ಜನಪ್ರಿಯ ಐ10 ತಳಹದಿಯಲ್ಲಿ ನಿರ್ಮಾಣವಾಗಲಿದೆ. ಅಲ್ಲದೆ ವೆರ್ನಾದಲ್ಲಿರುವುದಕ್ಕೆ ಸಮಾನವಾದ 1.4 ಹಾಗೂ 1.6 ಲೀಟರ್ ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ.

ನಿರೀಕ್ಷಿತ ಬೆಲೆ: 7 ರಿಂದ 10 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017 ಆರಂಭ

06. ಹ್ಯುಂಡೈ ಕಾರ್ಲಿನೊ

06. ಹ್ಯುಂಡೈ ಕಾರ್ಲಿನೊ

ಮಾರುತಿ ವಿಟಾರಾ ಬ್ರಿಝಾ ಯಶಸ್ಸಿನಿಂದ ಎಚ್ಚೆತ್ತುಕೊಂಡಿರುವ ಹ್ಯುಂಡೈ, ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಪ್ರತಿಸ್ಪರ್ಧಿಯೊಂದನ್ನು ಕಣಕ್ಕಿಳಿಸಲಿದೆ. ಅದುವೇ ಹ್ಯುಂಡೈ ಕಾರ್ಲಿನೊ (Carlino). 2016 ಆಟೋ ಎಕ್ಸ್ ಪೋದಲ್ಲೂ ತನ್ನ ಸಾನಿಧ್ಯ ಮೆರೆದಿರುವ ಹ್ಯುಂಡೈ ಕಾರ್ಲಿನೊ ದೇಶದಲ್ಲಿ ಉಪಯುಕ್ತ ವಾಹನ ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದೆ.

ಹ್ಯುಂಡೈ ಕಾರ್ಲಿನೊ

ಹ್ಯುಂಡೈ ಕಾರ್ಲಿನೊ

ಹ್ಯುಂಡೈ ಕಾರ್ಲಿನೊ 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಕ್ರೆಟಾ ಎಸ್ ಯುವಿಗಿಂತಲೂ ಕೆಳದರ್ಜೆಯಲ್ಲಿ ಗುರುತಿಸಿಕೊಳ್ಳಲಿದ್ದು, ಬ್ರಿಝಾ ಜೊತೆ ಜೊತೆಗೆ ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಟಿಯುವಿ300 ಮಾದರಿಗಳಿಗೂ ಪ್ರತಿಸ್ಪರ್ಧಿಯಾಗಲಿದೆ.

ನಿರೀಕ್ಷಿತ ಬೆಲೆ: 7 ರಿಂದ 10 ಲಕ್ಷ ರು.

ನಿರೀಕ್ಷಿತ ಬಿಡುಗಡೆ: 2017 ವರ್ಷಾಂತ್ಯ ಅಥವಾ 2018 ಆರಂಭ

ಅಗ್ರ ಪಟ್ಟವೊಂದೇ ಗುರಿ; ಮುಂಬರುವ ಹ್ಯುಂಡೈ ಕಾರುಗಳನ್ನು ಸೂಕ್ಷ್ಮವಾಗಿ ಗಮನಿಸಿ!

ಈಗ ನಿಮ್ಮ ಬಳಿಯಿರುವ ಹ್ಯುಂಡೈ ಕಾರು ಮತ್ತು ಅವುಗಳು ನೀಡುತ್ತಿರುವ ಮೈಲೇಜ್ ವಿವರಗಳನ್ನು ನಮ್ಮ ಜೊತೆಗೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

English summary
Upcoming Hyundai Cars In India 2016-17; You Might Buy One
Story first published: Monday, June 20, 2016, 15:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark