ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ಕಾರಿನ ವಿಶೇಷತೆ ಏನು...?

Written By:

ನೆಕ್ಸಾ ಪ್ರೀಮಿಯಂ ಮಾರಾಟಗಾರರ ಸಹಯೋಗದೊಂದಿಗೆ ಮಾರುತಿ ಸುಜುಕಿ ತನ್ನ ಸೆಡಾನ್ ಮಾದರಿಯ ಫೇಸ್-ಲಿಫ್ಟ್ ಸಿಯಾಝ್ ಕಾರನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.

To Follow DriveSpark On Facebook, Click The Like Button
ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಬಲ್ಲ ಮೂಲಗಳ ಪ್ರಕಾರ ದೇಶದ ಪ್ರಮುಖ ಕಾರು ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಮತ್ತೊಂದು ಕಾರು ಸಿಯಾಝ್ ಅನ್ನು ಮತ್ತಷ್ಟು ಬಣ್ಣಗಳೊಂದಿಗೆ, ಮತ್ತಷ್ಟು ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ ಮತ್ತು ಕಾರನ್ನು ನೆಕ್ಸಾ ಕಾರು ಮಾರಾಟ ಸಂಸ್ಥೆಯ ಮೂಲಕ ಮಾರಾಟ ಮಾಡಲಾಗುವುದು ಎನ್ನಲಾಗಿದೆ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಸಿಯಾಝ್ ಕಾರಿನ ಹೊರರೂಪ ಮತ್ತಷ್ಟು ಅಂದಗೊಂಡು ನಿಮಗಿಷ್ಟವಾಗುವ ರೀತಿಯಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ಕಂಪನಿ ಭರವಸೆಯನ್ನೂ ಸಹ ನೀಡಿದೆ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಮೂಲಗಳ ಪ್ರಕಾರ ಸಿಯಾಝ್ ಕಾರು ಹೊಚ್ಚ ಹೊಸ ಹೆಡ್ ಲ್ಯಾಂಪ್,ಅಲಾಯ್ ಚಕ್ರಗಳು, ಬೆಳಗಿನ ಹೊತ್ತು ಬೆಳಗುವ ಎಲ್ಈಡಿ ದೀಪಗಳು ಮತ್ತು ಮಾರ್ಪಾಡುಗೊಂಡ ಬಂಪರ್ ಗಳೊಂದಿಗೆ ನಿಮ್ಮ ಮುಂದೆ ಬರಲಿದೆ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಇನ್ನು ಸಿಯಾಝ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಹೆಚ್ಚು ಗಮನ ಹರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಸಿಯಾಝ್ ಕಾರಿನ ಅತ್ಯುನ್ನತ ಶ್ರೇಣಿಯಲ್ಲಿ ಸನ್ ರೂಫ್ ಒಳಗೊಂಡಿರಲಿದ್ದು, ಕಾರಿನ ಒಳಭಾಗದಲ್ಲಿ ಆಪಲ್ ಕಾರ್-ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯನ್ನು(Touchscreen Infotainment System) ಒಳಗೊಂಡಿರಲಿದೆ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಇನ್ನು ಹೊಸ ಸಿಯಾಝ್ ಕಾರಿನ ಮೆಕ್ಯಾನಿಕಲ್ ವಿಭಾಗಕ್ಕೆ ಸಂಬಂಧಿಸಿದಂತೆ ಯಾವುದೇ ಮಾರ್ಪಾಡು ಮಾಡಲು ಕಂಪನಿ ಮುಂದಾಗಿಲ್ಲ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಈಗಿರುವ ಸಿಯಾಝ್ ಕಾರಿನ ಎಂಜಿನ್ ಅನ್ನು ಹೊಸ ಆವೃತಿಯ ಸಿಯಾಝ್ ಕಾರಿನಲ್ಲಿ ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದು, 1.3-ಲೀಟರ್ ಪೆಟ್ರೋಲ್ ಮಾದರಿಯ ಎಂಜಿನ್ ಹೊಂದಿರುವ ಸಿಯಾಝ್ 130 ಏನ್ಎಂ ತಿರುಗುಬಲದಲ್ಲಿ 91 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಸಿಯಾಝ್ ಫೇಸ್ ಲಿಫ್ಟ್ ವಿಶೇಷತೆ ಏನು...?

ಇನ್ನು ಈ ಕಾರಿನ ಎಲ್ಲಾ ಮಾದರಿಗಳಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಅಥವಾ ಎಬಿಎಸ್ ವ್ಯವಸ್ಥೆ ಮತ್ತು ಮುಂಭಾಗದಲ್ಲಿ ಎರಡು ಏರ್ ಬ್ಯಾಗ್ ಗಳು ಒಳಗೊಂಡಿರಲಿವೆ.

ಹೊಸ ತಲೆಮಾರಿನ 2017 ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

English summary
Maruti Suzuki is all set to launch the facelifted Ciaz in the Indian market by April 2017. Ciaz will be the fourth product to be sold through Nexa premium dealerships.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark