ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

Written By:

ಮುಂದಿನ ವರ್ಷ ಎರ್ಟಿಗಾ ಕಾರಿನ ಎರಡನೆಯ ಪೀಳಿಗೆಯ ಮಾದರಿಯನ್ನು ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಲಾಗುತಿದ್ದು, ಈ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎನ್ನಲಾಗಿದೆ.

To Follow DriveSpark On Facebook, Click The Like Button
ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

ಮಾರುತಿ ಸಂಸ್ಥೆಯು ತನ್ನ ಎಂಪಿವಿ ಮಾದರಿಯ ಎರ್ಟಿಗಾ ಕಾರನ್ನು 2012ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಕಳೆದ ಐದು ವರ್ಷಗಳಲ್ಲಿ, ಈ ವಾಹನವು ಭಾರತದಲ್ಲಿ ಕೇವಲ ಒಮ್ಮೆ ಮಾತ್ರ ಸಣ್ಣ ಫೇಸ್‌ಲಿಫ್ಟ್ ಆಯ್ಕೆಯನ್ನು ಪಡೆದುಕೊಂಡಿದೆ, ಆದರೆ ಸದ್ಯ ಬಂದಿರುವ ಮಾಹಿತಿ ಪ್ರಕಾರ ಈ ಕಾರು ನವೀಕರಣಗೊಂಡು ಬಿಡುಗಡೆಯಾಗಲಿದೆ.

ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

ಸುಜುಕಿ ಇಂಡೊಮೊಬಿಲ್ ಕಂಪನಿಯ ಮಾರ್ಕೆಟಿಂಗ್ ಹೆಡ್ ಡೊನ್ನಿ ಅವರು ಈ ಪ್ರಕಟಣೆಗಳನ್ನು ದೃಢಪಡಿಸಿದ್ದು, ಈಗಾಗಲೇ ಈ ಹೊಚ್ಚ ಹೊಸ ಫೇಸ್ ಲಿಫ್ಟ್ ಕಾರಿನ ಅಭಿವೃದ್ಧಿಗೆ ಕೈಹಾಕಲಾಗಿದೆ ಎಂಬ ವಿಚಾರ ತಿಳಿದುಬಂದಿದೆ.

ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

ಸದ್ಯ ಬಿಡುಗಡೆಗೆ ಸಿದ್ಧವಾಗಿರಿರುವ ಸ್ವಿಫ್ಟ್ ಕಾರಿನ ತಂತ್ರಜ್ಞಾನವನ್ನೇ ಈ ಕಾರೂ ಸಹ ಪಡೆದುಕೊಳ್ಳಲಿದ್ದು, ಮುಂದಿನ ಪೀಳಿಗೆಯ HEARTECT ಪ್ಲೇಟ್‌ಫಾರಂ ಆಧಾರವನ್ನು ಈ ಕಾರು ಪಡೆದುಕೊಳ್ಳಲಿದೆ.

ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಈ HEARTECT ಪ್ಲೇಟ್‌ಫಾರಂನಿಂದಾಗಿ ಕಾರಿನ ತೂಕವನ್ನು ಕಡಿಮೆ ಮಾಡಲು ಸಹಾಯವಾಗಲಿದ್ದು, ತೂಕದ ಉಳಿತಾಯದ ಜೊತೆಗೆ, ಈ ಎಂಪಿವಿ ಮಾದರಿ ಹೆಚ್ಚು ಇಂಧನ ಕ್ಷಮತೆ ಹೊಂದಲಿದೆ.

ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

ಹೊಸ ಸ್ವಿಫ್ಟ್ ಮತ್ತು ಡಿಜೈರ್ ಕಾರಿನಲ್ಲಿ ನೀಡಲಾಗಿರುವ ಹೊಸ ಡ್ಯಾಶ್‌ಬೋರ್ಡ್ ಈ ಕಾರು ಸಹ ಪಡೆಯಬಹುದು ಎಂಬ ಮಾಹಿತಿ ಇದ್ದು, ಈ ಮೂಲಕ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್‌ನೊಂದಿಗೆ ಹೊಸ ಟಚ್‌ಸ್ಕ್ರೀನ್ ಸಿಸ್ಟಮ್ ತನ್ನದಾಗಿಸಿಕೊಳ್ಳಲಿದೆ ಎನ್ನಬಹುದು.

ಮುಂದಿನ ವರ್ಷದ ಅಂತ್ಯದ ವೇಳೆಗೆ ಮಾರುತಿ ಎರ್ಟಿಗಾ ಫೇಸ್‌ಲಿಫ್ಟ್ ಭಾರತದಲ್ಲಿ ಬಿಡುಗಡೆ ?

ಎಂಜಿನ್ ಬಗ್ಗೆ ಹೇಳುವುದಾದರೆ, ಈ ಕಾರು ಡಿಡಿಐಎಸ್ 200 ಮಾದರಿಯಲ್ಲಿ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ. ಪೆಟ್ರೋಲ್ ಎಂಜಿನ್‌ಗೆ ಸಂಬಂಧಿಸಿದಂತೆ, ಕಂಪೆನಿಯು ಹೊಸ 1.5 ಲೀಟರ್ ಎಂಜಿನ್ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಕಂಪನಿ ನೀಡಿಲ್ಲ.

Read more on ಮಾರುತಿ maruti
English summary
An all-new Ertiga, the second generation model is going to be unveiled next year in Indonesia post which it will most likely be introduced in the Indian market as well.
Story first published: Monday, September 11, 2017, 16:04 [IST]
Please Wait while comments are loading...

Latest Photos