ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್ "ಮೊಟೋರಿಗ್-2017"..!!

Written By:

ಮೋಟಾರ್ ಸ್ಪೋರ್ಟ್ಸ್ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಮೊಟೋರಿಗ್ ಸಾಹಸ ಪ್ರದರ್ಶನ ಮತ್ತು ವಿಂಟೇಜ್ ಕಾರ್ ಕಲೆಕ್ಷನ್ ಕುರಿತಾದ ವಿಶೇಷ ವರದಿ ಇಲ್ಲಿದೆ.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಕಾರು ಮತ್ತು ಬೈಕ್‌ಗಳ ಆಕರ್ಷಕ ಸಾಹಸಮಯ ಪ್ರದರ್ಶನದ ಮೂಲಕ ಜಾಗೃತಿ ಮತ್ತು ಕೌಶಲ್ಯ ಮತ್ತಿತರ ವಿಷಯಗಳನ್ನು ಬಿತ್ತರಿಸುವ ಕಾರ್ಯಕ್ರಮವೇ "ಮೊಟೋರಿಗ್".

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಆಳ್ವಾಸ್ ಎಜುಕೇಷನ್ ಫೌಂಡೇಶನ್ ಮತ್ತು ಟಿಎಎಸ್‌ಸಿ, ಐಎಮ್ಎಸ್ಸಿ, ಬೆದ್ರ ಅಡ್ವೆಂಚರ್ಸ್ ಕ್ಲಬ್, ಕರಾವಳಿ ರೈಡರ್ಸ್, ಕೆಎಲ್ 14 ಮತ್ತು ಟೀಮ್ ಬೆದ್ರ ಯುನೈಟೆಡ್ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಮೂಡುಬಿದಿರೆಯ ಮಿರಾಜು ಶೋಭಾವನದಲ್ಲಿ ನಡೆದ ನಾಲ್ಕನೇ ಆವೃತ್ತಿಯ ಮೋಟಾರ್ ಪ್ರದರ್ಶನ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಮೋಟಾರ್ ಸಾಹಸ ಪ್ರದರ್ಶನಕ್ಕೆ ಚಾಲನೆ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ, ಕರಾವಳಿ ಭಾಗದಲ್ಲಿ ಮೋಟಾರ್ ಸ್ಪೋರ್ಟ್ಸ್ ಬಗ್ಗೆ ಹೊಸ ಆಯಾಮ ಹುಟ್ಟುಹಾಕುತ್ತಿದ್ದಾರೆ.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಮೋಟಾರ್ ಸಾಹಸ ಪ್ರದರ್ಶನದಲ್ಲಿ ಈ ಬಾರಿ ಪ್ರಮುಖ ಆಕರ್ಷಣೆಯಾಗಿದ್ದ ರಾಷ್ಟ್ರೀಯ ಚಾಂಪಿಯನ್‌ಗಳಾದ ಗೌರವ್ ಕಾತ್ರಿ, ಅರ್ಜುನ್ ರಾವ್, ರಾಹುಲ್ ಕಾಂತರಾಜು, ಅದ್ನಾನ್, ಸುದೀಪ್ ಕೋಠಾರಿ ವಿಶೇಷ ಪ್ರದರ್ಶನ ನಡೆಸಿದರು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಮೋಟಾರ್ ಶೋ ಪ್ರದರ್ಶನಕ್ಕಾಗಿಯೇ ಮಿಜಾರು ಶೋಭಾವನದಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಮೋಟಾರ್ ಶೋ ಅಷ್ಟೇ ಅಲ್ಲದೇ ವಿಂಟೇಜ್ ಕಾರು ಮತ್ತು ಬೈಕ್ ಕಲೆಕ್ಷನ್ ಕೂಡಾ ವಿಶೇಷ ಗಮನ ಸೆಳೆಯುವಂತೆ ಮಾಡಿತ್ತು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಪ್ರದರ್ಶನದಲ್ಲಿ ಭಾಗಿಯಾಗಿದ್ದ ನೂರಾರು ವಿವಿಧ ರೀತಿಯ ಕಾರುಗಳು ಮತ್ತು ಬೈಕ್‌ಗಳ ಸಂಗ್ರಹ ಎಲ್ಲರ ಆಕರ್ಷಣೆಗೆ ಕಾರಣವಾದವು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಮೋಟಾರ್ ಕಲೆಕ್ಷನ್‌ನಲ್ಲಿ ಸೂಪರ್ ಬೈಕ್ಸ್, ಸೂಪರ್ ಕಾರ್, ಐಷಾರಾಮಿ ಕಾರುಗಳು, ವಿಂಟೇಜ್ ಸಂಗ್ರಹಣೆಗಳು ಮತ್ತು ಕಸ್ಟಮೈಸ್ಡ್ ಮಾಡಲಾದ ವಾಹನಗಳು ಮತ್ತು ರಾಷ್ಟ್ರೀಯ ಚಾಲಕರು ಮತ್ತು ಸವಾರರು ನಿರ್ವಹಿಸಿದ ಕಸ್ಟಮೈಸ್ಡ್ ಕಾರುಗಳು ಕೂಡಾ ಪ್ರದರ್ಶನಗೊಂಡವು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಪ್ರದರ್ಶನದಲ್ಲಿ 1991ರ ಮಾದರಿಯ ಫೋರ್ಡ್ ಕಂಪೆನಿಯ ಲಿಂಕನ್ ಟೌನ್ ಕಾರು, ವಿಟೇಂಜ್ ಕಾರ್ ಕಲೆಕ್ಷನ್‌ಗೆ ವಿಶೇಷ ಮೆರಗು ನೀಡಿತ್ತು.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ಒಟ್ಟಿನಲ್ಲಿ 2 ದಿನಗಳ ನಡೆದ ಮೊಟೋರಿಗ್ ಕಾರ್ಯಕ್ರಮವು ಹತ್ತಾರು ವಿಶೇಷತೆಗಳಿಗೆ ಕಾರಣವಾಯಿತ್ತಲ್ಲದೇ, ಕಾರವಳಿ ಜನರಿಗೆ ಮೋಟಾರ್ ಸ್ಪೋರ್ಟ್ಸ್ ಬಗೆಗೆ ವಿಶೇಷ ಆಸಕ್ತಿ ಹುಟ್ಟುಹಾಕಿದ್ದು ಸುಳ್ಳಲ್ಲ.

ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ಆಳ್ವಾಸ್

ರಾಜ್ಯದಲ್ಲಿ ಗುಣಮಟ್ಟ ಶಿಕ್ಷಣಕ್ಕಾಗಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯು, ಯುವಸಮುದಾಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಿ ಎಂಬುವುದೇ ನಮ್ಮೆಲ್ಲರ ಆಶಯ.

English summary
Read in Kannada about alvas motorig 4th event highlights.
Please Wait while comments are loading...

Latest Photos