ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

Written By:

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ದೊಸ್ತ್ ಪ್ಲಸ್ ಎನ್ನುವ ಲಘು ವಾಣಿಜ್ಯ ಬಳಕೆ ವಾಹನವನ್ನು ಬಿಡುಗಡೆ ಮಾಡಿದೆ.

ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

ಸಣ್ಣ ಪ್ರಮಾಣದ ಸರಕು ಸಾಗಾಟ ಪ್ರಕ್ರಿಯೆಗೆ ಸಹಕಾರಿಯಾಗಿರುವ ನಿಟ್ಟಿನಲ್ಲಿ ದೊಸ್ತ್ ಪ್ಲಸ್ ವಿನ್ಯಾಸಗಳನ್ನು ಕೈಗೊಳ್ಳಲಾಗಿದ್ದು, ಹೊಸ ವಾಹನದ ಬೆಲೆಯನ್ನು ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ರೂ.5.68 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

ಅಶೋಕ್ ಲೈಲ್ಯಾಂಡ್ ಬಿಡುಗಡೆಗೊಳಿಸಿರುವ ದೊಸ್ತ್ ಪ್ಲಸ್ ವಾಹನವು ವಾಣಿಜ್ಯ ವಿಭಾಗದ ಮಧ್ಯಮ ಗಾತ್ರದ ಶೈಲಿ ಹೊಂದಿದ್ದು, ಅತ್ಯುತ್ತಮ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಹೊಂದಿದೆ.

Recommended Video - Watch Now!
Datsun rediGO Gold 1.0-Litre Launched In India - DriveSpark
ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

ಎಂಜಿನ್ ಸಾಮರ್ಥ್ಯ

ದೊಸ್ತ್ ಪ್ಲಸ್ ವಾಹನವು 1.5-ಲೀಟರ್ ಟಿಡಿಸಿಆರ್ ಎಂಜಿನ್ ಹೊಂದಿದ್ದು, 60-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 2 ರಿಂದ 3.5 ಟನ್ ಭಾರವನ್ನು ಹೊತ್ತು ಸಾಗಬಲ್ಲ ಗುಣಹೊಂದಿದೆ.

ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

ಜೊತೆಗೆ 2645ಎಂಎಂ ಉದ್ದ ಮತ್ತು 1620ಎಂಎಂ ಅಗಲ ಹೊಂದಿರುವ ದೊಸ್ತ್ ಪ್ಲಸ್, ಸರಕು ಸಾಗಿಸಲು ನೇರವಾಗು ದೃಷ್ಠಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಹೊರ ವಿನ್ಯಾಸಗಳನ್ನು ಕೈಗೊಳ್ಳಲಾಗಿದೆ.

ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

ಇದಲ್ಲದೇ ದೊಸ್ತ್ ಪ್ಲಸ್ ಮಾದರಿಯ ಖರೀದಿ ಮೇಲೆ ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿರುವ ಅಶೋಕ್ ಲೈಲ್ಯಾಂಡ್, 2 ವರ್ಷಗಳ ಕಾಲ ರಸ್ತೆ ಬದಿ ಸೇವೆಗಳು ಮತ್ತು ಆಕರ್ಷಕ ಬಡ್ಡಿದರಗಳಲ್ಲಿ ಹಣಕಾಸಿನ ನೆರವು ನೀಡುತ್ತಿದೆ.

ದೊಸ್ತ್ ಪ್ಲಸ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯ ವಾಣಿಜ್ಯ ವಾಹನಗಳ ಮಾರಾಟ ವಿಭಾಗದಲ್ಲಿ ಶೇ.40ರಷ್ಟು ಪಾಲು ಹೊಂದಿರುವ ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಇದುವರೆಗೆ ಹಲವಾರು ಮಾದರಿಯ ವಾಹನಗಳನ್ನು ಬಿಡುಗಡೆ ಮಾಡಿದ್ದು, ದೊಸ್ತ್ ಪ್ಲಸ್ ಕೂಡಾ ಉಳಿದ ಮಾದರಿಗಳಂತೆ ಉತ್ತಮ ಕಾರ್ಯನಿರ್ವಹಣಾ ವೈಶಿಷ್ಟ್ಯತೆಯನ್ನು ಹೊಂದುವಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Ashok Leyland Dost Plus Launched In Bangalore At A Starting Price Of Rs 5.68 Lakh.
Story first published: Thursday, September 28, 2017, 18:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark