1 ಸಿರೀಸ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಗುಡ್ ಬೈ ಹೇಳಿದ ಬಿಎಂಡಬ್ಲ್ಯು

ಈ ಹಿಂದೆ ಭಾರೀ ಬೇಡಿಕೆ ಹೊಂದಿದ್ದ 1 ಸೀರಿಸ್ ಕಾರು ಮಾದರಿಯ ಉತ್ಪಾದನೆಯನ್ನು ಬಿಎಂಡಬ್ಲ್ಯು ಕೈಬಿಟ್ಟಿದ್ದು, ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನ ಕಾರು ವಿಭಾಗದಿಂದಲೂ 1 ಸಿರೀಸ್ ಮಾದರಿಯನ್ನು ತೆಗದು ಹಾಕಿದೆ.

By Praveen

ಐಷಾರಾಮಿ ಪ್ರಿಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಈ ಹಿಂದೆ ಭಾರೀ ಬೇಡಿಕೆ ಹೊಂದಿದ್ದ 1 ಸೀರಿಸ್ ಕಾರು ಮಾದರಿಯ ಉತ್ಪಾದನೆಯನ್ನು ಬಿಎಂಡಬ್ಲ್ಯು ಕೈಬಿಟ್ಟಿದ್ದು, ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನ ಕಾರು ವಿಭಾಗದಿಂದಲೂ 1 ಸಿರೀಸ್ ಮಾದರಿಯನ್ನು ತೆಗದು ಹಾಕಿದೆ.

1 ಸಿರೀಸ್ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಬಿಎಂಡಬ್ಲ್ಯು ಗುಡ್ ಬೈ

ಈ ಹಿಂದೆ 2013ರಲ್ಲಿ ಭಾರತೀಯ ಮಾರುಕಟ್ಟೆಗೆ 1 ಸೀರಿಸ್ ಪರಿಚಯಿಸಿದ್ದ ಬಿಎಂಡಬ್ಲ್ಯು ಸಂಸ್ಥೆಯು, ಪ್ರಿಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದ್ರೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ 1 ಸಿರೀಸ್ ಉತ್ಪಾದನೆಯಿಂದ ಹಿಂದೆ ಸರಿದಿದೆ.

1 ಸಿರೀಸ್ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಬಿಎಂಡಬ್ಲ್ಯು ಗುಡ್ ಬೈ

ಬಿಎಂಡಬ್ಲ್ಯು ಅಧಿಕೃತ ವೆಬ್‌ಸೈಟ್‌ನಲ್ಲಿ 1 ಸೀರಿಸ್ ತೆಗೆದು ಹಾಕಿದ ನಂತರ ಎಕ್ಸ್ 1 ಎಸ್‌ಯುವಿ ಮಾದರಿಯು ಆರಂಭಿಕ ಕಾರು ಮಾದರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಸುಳಿವು ನೀಡಿದೆ.

1 ಸಿರೀಸ್ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಬಿಎಂಡಬ್ಲ್ಯು ಗುಡ್ ಬೈ

ಇದಲ್ಲದೇ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಸಾಕಷ್ಟು ಗಮನಸೆಳೆದಿದ್ದ 1 ಸೀರಿಸ್, 2015ರಲ್ಲಿ ಫೇಸ್‌ಲಿಫ್ಟ್ ಆವೃತ್ತಿ ಮೂಲಕವೂ ಸಾಕಷ್ಟು ಮಾರಾಟ ದಾಖಲೆ ಕಂಡಿತ್ತು. ಆದ್ರೆ 1 ಸೀರಿಸ್ ಮಾದರಿಗಳನ್ನು ಕೇವಲ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದ ಕಾರಣ ಮಾರುಕಟ್ಟೆಯಲ್ಲಿ ಹಿನ್ನಡೆ ಕೂಡಾ ಅನುಭವಿಸಿದ್ದು ಸುಳ್ಳಲ್ಲ.

1 ಸಿರೀಸ್ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಬಿಎಂಡಬ್ಲ್ಯು ಗುಡ್ ಬೈ

ಹೀಗಾಗಿ 1 ಸಿರೀಸ್ ಉತ್ಪಾದನೆ ಮತ್ತು ಮಾರಾಟವನ್ನು ಕೈಬಿಡಲು ಮಹತ್ವದ ನಿರ್ಧಾರ ಕೈಗೊಂಡ ಬಿಎಂಡಬ್ಲ್ಯು, ಇದೀಗ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕುವ ಮೂಲಕ ಪ್ರಿಮಿಯಂ ಹ್ಯಾಚ್‌‌ಬ್ಯಾಕ್ ಪ್ರಿಯರಿಗೆ ನಿರಾಸೆ ಉಂಟು ಮಾಡಿದೆ.

1 ಸಿರೀಸ್ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಬಿಎಂಡಬ್ಲ್ಯು ಗುಡ್ ಬೈ

ಇನ್ನು 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದ 1 ಸೀರಿಸ್ ಮಾದರಿಯೂ, 148 ಬಿಎಚ್‌ಪಿ, 320ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿತ್ತು. ಜೊತೆಗೆ ಕೊನೆಯ ಬಾರಿಗೆ ಮಾರಾಟಗೊಂಡಿದ್ದ 1 ಸೀರಿಸ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.31 ಲಕ್ಷಕ್ಕೆ ಲಭ್ಯವಿತ್ತು.

1 ಸಿರೀಸ್ ಹ್ಯಾಚ್‌ಬ್ಯಾಕ್ ಉತ್ಪಾದನೆಗೆ ಬಿಎಂಡಬ್ಲ್ಯು ಗುಡ್ ಬೈ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆಟೋ ಉದ್ಯಮ ಮಾರುಕಟ್ಟೆಯಲ್ಲಿ ದಿನಕ್ಕೊಂದು ರೀತಿಯ ಕಾರು ಮಾದರಿಗಳು ಪರಿಚಯವಾಗುತ್ತಿದ್ದು, ಈ ಹಿನ್ನೆಲೆ ತನ್ನ ಯೋಜನೆಗಳಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಬಿಎಂಡಬ್ಲ್ಯು ಸಂಸ್ಥೆಯು 1 ಸಿರೀಸ್ ಉತ್ಪಾದನೆ ಮೊಟಕುಗೊಳಿಸುವ ಮೂಲಕ ಹೊಸ ಮಾದರಿಗಳನ್ನು ಪರಿಚಯಿಸುವತ್ತ ಗಮನಹರಿಸಿದೆ.

Most Read Articles

Kannada
English summary
Read in Kannada about BMW Discontinues 1 Series Premium Hatchback In India.
Story first published: Monday, September 18, 2017, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X