ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ವಿಶಿಷ್ಟ ಕಾರು ಉತ್ಪನ್ನಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಸೇಕೆಂಡ್ ಜನರೇಷನ್ ಸ್ವಿಫ್ಟ್ ಉತ್ಪಾದನೆಗೆ ಗುಡ್ ಬೈ ಹೇಳಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ವಿಶಿಷ್ಟ ಕಾರು ಉತ್ಪನ್ನಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಸೇಕೆಂಡ್ ಜನರೇಷನ್ ಸ್ವಿಫ್ಟ್ ಉತ್ಪಾದನೆಗೆ ಗುಡ್ ಬೈ ಹೇಳಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾದ ಹೊಸ ಕಾರು ಮಾದರಿಗಳತ್ತ ಗಮನಹರಿಸುತ್ತಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಸದ್ಯ ಹ್ಯಾಚ್‌ಬ್ಯಾಕ್ ಶೈಲಿಯ ಕಾರುಗಳಲ್ಲಿ ಸ್ವಿಫ್ಟ್ ಕಾರುಗಳಿಗೆ ಭಾರೀ ಬೇಡಿಕೆ ಇದ್ದು, ಇದೇ ಸಂದರ್ಭದಲ್ಲಿ ಸೇಕೆಂಡ್ ಜನರೇಷನ್ ಸ್ವಿಫ್ಟ್ ಉತ್ಪಾದನೆಗೆ ಮಾರುತಿ ಸುಜುಕಿ ಗುಡ್ ಬೈ ಹೇಳಿದೆ. ಹಾಗಂತ ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ. ಕಾರಣ 2017ರ ಸ್ವಿಫ್ಟ್ ಉತ್ಪಾದನೆಯನ್ನು ನಿಲ್ಲಿಸಿರುವ ಮಾರುತಿ ಸುಜುಕಿ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಹೀಗಾಗಿ 2018ರ ಫೆಬ್ರುವರಿಯಲ್ಲಿ ನಡೆಲಿರುವ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಪ್ರದರ್ಶನ ಮಾಡಲಿರುವ ಮಾರುತಿ ಸುಜುಕಿ, ಮಾರ್ಚ್ ಮೊದಲ ವಾರ ಇಲ್ಲವೇ ಕೊನೆಯ ವಾರದಲ್ಲಿ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಮಾರುತಿ ಸುಜುಕಿ ಹಿರಿಯ ಅಧಿಕಾರಿಗಳು '13 ಲಕ್ಷ ಕಾರುಗಳು ಮಾರಾಟಗೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದಸೇಕೆಂಡ್ ಜನರೇಷನ್ ಸ್ವಿಫ್ಟ್ ಉತ್ಪಾದನೆಯನ್ನು ಇಂದಿಗೆ ಮುಕ್ತಾಯಗೊಳಿಸುತ್ತಿದ್ದು, ಜನಪ್ರಿಯ ಕಾರಿನ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದಿದ್ದಾರೆ.

Recommended Video

Best Cars Of 2017 In India - DriveSpark
ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಇನ್ನು ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಹೊಸ ತಲೆಮಾರಿನ ಸ್ವಿಫ್ಟ್ ನಿರ್ಮಾಣದ ಬಗ್ಗೆಯು ಹರ್ಷ ವ್ಯಕ್ತಪಡಿಸಿರುವ ಮಾರುತಿ ಸುಜುಕಿ, ಬರಲಿರುವ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ತವಕದಲ್ಲಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಇದರಿಂದಾಗಿ ಹಿಂದಿನ ಮಾದರಿಗಿಂತ ಹೊಸ ಸ್ವಿಫ್ಟ್ ಆವೃತ್ತಿಯಲ್ಲಿ 50 ಕೆ.ಜಿ ತೂಕವನ್ನು ಕಡಿತಗೊಳಿಸಲಾಗಿದ್ದು, ಡಿಜೈರ್ ಕಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಹೊರ ವಿನ್ಯಾಸಗಳನ್ನು ಜೋಡಿಸುವ ಮೂಲಕ ಮಾರುತಿ ಸುಜುಕಿ ಪ್ರಿಯರಿಗೆ ಡಬಲ್ ಧಮಾಕಾ ನೀಡಲಾಗುತ್ತಿದೆ.

ತಪ್ಪದೇ ಓದಿರಿ-ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಜೊತೆಗೆ ಡಿಸೇಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲೂ ಆಟೋಮ್ಯಾಟಿಕ್ ಗೆೇರ್‌ಬಾಕ್ಸ್ ವ್ಯವಸ್ಥೆಯನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಕೂಡಾ ಲಭ್ಯವಿರಲಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಈ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಅತ್ಯುತ್ತಮ ಮಾದರಿಯನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದ್ದು, ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳಾದ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿಸ್ತರಿತ ಬೂಟ್ ಸ್ಪೆಸ್, ಆ್ಯಪಲ್ ಕಾರ್ ಪ್ಲೇ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಕೂಡಾ ನೀಡಲಾಗಿದೆ.

ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರಿನ ಉತ್ಪಾದನೆಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯಾಚ್‌ಬ್ಯಾಕ್ ಕಾರು ಆವೃತ್ತಿಗಳಲ್ಲೇ 2018ರ ಸ್ವಿಫ್ಟ್ ಮಾದರಿಯು ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದು, ನಿಗದಿತ ಅವಧಿಯಲ್ಲೇ ಮಾರುಕಟ್ಟೆ ಪ್ರವೇಶಕ್ಕಾಗಿ ಎದರು ನೋಡುತ್ತಿದೆ. ಹೀಗಾಗಿಯೇ 2005ರಲ್ಲಿ ಬಿಡುಗಡೆಯಾಗಿ ಕಾಲ ತಕ್ಕಂತೆ ಬದಲಾವಣೆ ಹೊಂದಿದ್ದ 2ನೇ ತಲೆಮಾರಿನ ಸ್ವಿಫ್ಟ್ ಉತ್ಪಾದನೆಗೆ ಗುಡ್ ಬೈ ಹೇಳಲಾಗುತ್ತಿದೆ.

ತಪ್ಪದೇ ಓದಿ-ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on maruti suzuki hatchback
English summary
Read in Kannada about Production Of Current-Gen Maruti Swift Ends.
Story first published: Saturday, December 30, 2017, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X