ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಟ್ರೈಲರ್ ಬಿಡುಗಡೆ

Written By:

ಹಾಲಿವುಡ್‌ನ ಅತ್ಯಂತ ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಆವೃತಿಯು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಹಳಷ್ಟು ಕುತೂಹಲ ಹುಟ್ಟಿಸಿದೆ.

ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಟ್ರೈಲರ್ ಬಿಡುಗಡೆ

ಸಿನಿಮಾ ಡಬ್ಬಿಂಗ್ ವಿಚಾರವಾಗಿ ದಶಕಗಳಿಂದಲೂ ಸಹ ಕನ್ನಡ ಚಿತ್ರರಂಗದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದು, ಸದ್ಯ ವೇಗದಿಂದಲೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಕನ್ನಡ ಆವೃತಿಯ ಟ್ರೈಲರ್ ಬಿಡುಗಡೆಗೊಂಡಿದೆ.

ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಟ್ರೈಲರ್ ಬಿಡುಗಡೆ

ಕನ್ನಡಕ್ಕೆ ಈ ಸಿನಿಮಾ ಡಬ್ ಮಾಡಲಾಗಿದ್ದು, ಈ ಕಾರಣದಿಂದಾಗಿ ಚಿತ್ರದ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' ಶೀರ್ಷಿಕೆಯನ್ನು ಸಾರಾಸಗಟಾಗಿ ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ವೇಗ ಮತ್ತು ಉದ್ವೇಗ ಎಂಬ ಟೈಟಲ್ ನೀಡಲಾಗಿದೆ.

ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಟ್ರೈಲರ್ ಬಿಡುಗಡೆ

ಡಬ್ಬಿಂಗ್ ಕಾರ್ಯಗಳನ್ನು ಮುಂಬೈನಲ್ಲಿ ನೆಡೆಸಲಾಗಿದ್ದು, ಖ್ಯಾತ ಬರಹಗಾರರು ಮತ್ತು ಕಂಠದಾನ ಕಲಾವಿದರು ಆದ ಜಯಶೀಲ ಸುವರ್ಣ ಮತ್ತು ಅರುಷಾ ಎನ್.ಶೆಟ್ಟಿ ಎಂಬುವವರ ನೇತೃತ್ವದಲ್ಲಿ ಡಬ್ಬಿಂಗ್ ಪೂರ್ಣಗೊಳಿಸಲಾಗಿದೆ.

ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಟ್ರೈಲರ್ ಬಿಡುಗಡೆ

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಚಿತ್ರದ ಕನ್ನಡದ ಟೈಟಲ್ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಟ್ರೊಲ್‌ಗಳು ನಗೆ ತರಿಸುವುದಂತೂ ಖಂಡಿತ.

ಜನಪ್ರಿಯ ಆಕ್ಷನ್ ಚಿತ್ರ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡ ಟ್ರೈಲರ್ ಬಿಡುಗಡೆ

ಟ್ರೈಲರ್ ನಲ್ಲಿ ತಿಳಿಸಿರುವಂತೆ ಈ 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' 8ನೇ ಸರಣಿಯ ಕನ್ನಡದ ಡಬ್ಬಿಂಗ್ ಚಿತ್ರವೂ ಸೆಪ್ಟಂಬರ್ 1 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ತಮಿಳು ನಟ ಅಜಿತ್ ಕುಮಾರ್ ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ತಮಿಳಿನ ಸಿನಿಮಾ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಆಗಿ ರಿಲೀಸ್ ಆಗಿದ್ದನ್ನು ನಾವು ಸ್ಮರಿಸಬಹುದಾಗಿದೆ.

English summary
Read in kannada abiut Hollywood film Fast And Furious-8 Kannada dubbing movie Release on September 1st. Know more about this movie and more
Story first published: Tuesday, August 29, 2017, 19:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark