ಹಾಗಾದ್ರೆ ಭಾರತದಲ್ಲಿ 'ಫಿಯೆಟ್' ತನ್ನ ಕಾರು ಮಾರಾಟ ಸ್ಥಗಿತಗೊಳಿಸುತ್ತಾ..?

Written By:

ಇಟಲಿಯ ಕಾರು ತಯಾರಕ ಸಂಸ್ಥೆ ಫಿಯೆಟ್, ಭಾರತದಲ್ಲಿ ತನ್ನ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ಚಿಂತನೆ ನೆಡೆಸಿದೆ.

ವರದಿಗಳ ಪ್ರಕಾರ ಫಿಯೆಟ್ ಇಂಡಿಯಾ ಭಾರತದಲ್ಲಿ ತನ್ನ ಮತ್ತೊಂದು ಬ್ರಾಂಡ್ 'ಜೀಪ್' ಕಡೆ ಹೆಚ್ಚು ಗಮನಹರಿಸುವ ಸಲುವಾಗಿ ತನ್ನ ಮತ್ತೊಂದು ಬ್ರಾಂಡ್ ಆದ 'ಫಿಯೆಟ್'ನ ಕಾರುಗಳನ್ನು ಭಾರತೀಯ ರಸ್ತೆಗೆ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಪ್ರಸ್ತುತ, ಫಿಯಟ್ ಇಂಡಿಯಾ ಸಂಸ್ಥೆಯ ಪುಂಟೊ, ಲೀನಿಯಾ ಮತ್ತು ಅವೆಂಚುರಾ ಮಾದರಿಗಳು ಮಾತ್ರ ಭಾರತದಲ್ಲಿ ಲಭ್ಯವಿದ್ದು, ಇವುಗಳ ಮಾರಾಟ ಸದ್ಯದರಲ್ಲಿಯೇ ಸ್ಥಗಿತವಾಗಲಿದೆ ಎನ್ನಲಾಗಿದೆ.

ಬಲ್ಲ ಮೂಲಗಳ ಪ್ರಕಾರ ಇತ್ತೀಚಿಗೆ ಈ ಮೂರು ಕಾರುಗಳ ಮಾರಾಟ ತೀರಾ ಕಡಿಮೆಯಾಗಿರುವುದೇ ಈ ನಿರ್ಧಾರಕ್ಕೆ ಬರಲು ಮುಖ್ಯ ಕಾರಣ ಎನ್ನಲಾಗಿದೆ.

ಫಿಯೆಟ್ ಸಂಸ್ಥೆ ದೀರ್ಘಕಾಲದ ಯೋಜನೆಯ ಬಗ್ಗೆ ಈಗಲೇ ಕಾರ್ಯಪ್ರವೃತವಾಗಿದ್ದು, ಜೀಪ್ ಬ್ರಾಂಡ್ ಅನ್ನು ಸಂಪೂರ್ಣ ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಇರಾದೆ ಹೊಂದಿದೆ. ಫಿಯೆಟ್ ಬ್ರಾಂಡ್ ಗಿಂತ ಹೆಚ್ಚಿನ ಮಟ್ಟದ ಯಶಸ್ಸು ಸಾಧಿಸುವ ವಿಶ್ವಾಸ ಹೊಂದಿದೆ.

ಭಾರತದಲ್ಲಿ ಫಿಯೆಟ್ ಕಳಪೆ ಮಾರಾಟದಿಂದ ಬಳಲುತ್ತಿದೆ ನಿಮಗೆ ಗೊತ್ತೇ ? ತಿಂಗಳಿಗೆ ಎಲ್ಲಾ ಮಾದರಿಗಳಿಂದ ಸೇರಿ ಕೇವಲ 500 ಕಾರುಗಳನ್ನು ಮಾರಾಟ ಮಾಡಲು ಮಾತ್ರ ಶಕ್ತವಾಗಿದೆ.

ಭಾರತೀಯ ಮಾರುಕಟ್ಟೆಗೆ ತನ್ನ ಯಾವುದೇ ಪುಂಟೊ ಸೇರಿ ಯಾವುದೇ ಕಾರಿನ ಮಾದರಿಯ ಅಪ್ಡೇಟ್ ಬಿಡುಗಡೆಗೊಳಿಸದೆ ಇರುವುದು ಇಷ್ಟೆಲ್ಲಾ ಅನುಮಾನಗಳಿಗೆ ಕಾರಣ ಎನ್ನಬಹುದು.

Read more on ಫಿಯೆಟ್
English summary
Italian car manufacturer Fiat might pull the plugs of its cars in the Indian market. As per emerging reports Fiat India might stop the domestic sales to focus on Jeep brand.
Story first published: Thursday, June 15, 2017, 11:50 [IST]
Please Wait while comments are loading...

Latest Photos