ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ಬೈಕ್ ನಡುವೆ ಡಿಕ್ಕಿ- ಜಖಂಗೊಂಡ ಹೊಸ ಕಾರು..!

Written By:

ಅತಿ ವೇಗವಾಗಿ ಕಾರು ಚಾಲನೆ ಮಾಡುತ್ತಿರುವ ಫೋರ್ಡ್ ಮಸ್ಟಾಂಗ್ ಕಾರೊಂದು ಕೆಟಿಎಂ ಬೈಕ್‌ಗೆ ಡಿಕ್ಕಿ ಹೊಡಿದಿದ್ದು, ಅಪಘಾತದಲ್ಲಿ ಫೋರ್ಡ್ ಮಸ್ಟಾಂಗ್ ಹೊಸ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

To Follow DriveSpark On Facebook, Click The Like Button
ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ಬೈಕ್ ನಡುವೆ ಡಿಕ್ಕಿ- ಜಖಂಗೊಂಡ ಹೊಸ ಕಾರು..!

ಆ ಯುವಕ ಮೊನ್ನೇಯಷ್ಟೇ 75 ಲಕ್ಷ ರೂಪಾಯಿ ದುಬಾರಿ ಬೆಲೆಯ ಫೋರ್ಡ್ ಮಸ್ಟಾಂಗ್ ಜಿಟಿ ಕಾರು ಖರೀದಿ ಮಾಡಿದ್ದಾ. ಆದ್ರೆ ಹೊಸ ಕಾರು ಖರೀದಿಸಿ ಹುಮ್ಮಸಿನಲ್ಲಿದ್ದ ಆ ಯುವಕ ಅತಿವೇಗವಾಗಿ ಕಾರು ಚಾಲನೆ ಮಾಡಿ ಅವಾಂತರ ಸೃಷ್ಠಿಸಿದ್ದಾನೆ.

ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ಬೈಕ್ ನಡುವೆ ಡಿಕ್ಕಿ- ಜಖಂಗೊಂಡ ಹೊಸ ಕಾರು..!

ವೇಗವಾಗಿ ಚಲಿಸುತ್ತಿದ್ದ ಫೋರ್ಡ್ ಮಸ್ಟಾಂಗ್ ಜಿಟಿ ಕಾರು ಸಿಗ್ನಲ್ ದಾಟುತ್ತಿರುವ ವೇಳೆ ಕೆಟಿಎಂ ಡ್ಯೂಕ್ 390 ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಡಟ್ಸನ್ ಟ್ಯಾಕ್ಸಿಗೂ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ಬೈಕ್ ನಡುವೆ ಡಿಕ್ಕಿ- ಜಖಂಗೊಂಡ ಹೊಸ ಕಾರು..!

ಘಟನೆಗೆ ಫೋರ್ಡ್ ಮಸ್ಟಾಂಗ್ ಜಿಟಿ ಕಾರು ಮಾಲೀಕ ಮಾಡಿದ ತಪ್ಪು ನಿರ್ಧಾರವೇ ಕಾರಣವಾಗಿದ್ದು, ಕೊನೆಯ ಕ್ಷಣದಲ್ಲಿ ಸಿಗ್ನಲ್ ಜಂಪ್ ಮಾಡುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ.

ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ಬೈಕ್ ನಡುವೆ ಡಿಕ್ಕಿ- ಜಖಂಗೊಂಡ ಹೊಸ ಕಾರು..!

ಒಂದು ವಾರದ ಹಿಂದಷ್ಟೇ ಫೋರ್ಡ್ ಮಸ್ಟಾಂಗ್ ಜಿಟಿ ಖರೀದಿ ಮಾಡಲಾಗಿತ್ತು ಎಂಬ ಮಾಹಿತಿ ದೊರೆತಿದ್ದು, ಯಶವಂತಪುರ ಆರ್‌ಟಿಓ ನೋಂದಣಿ ಹೊಂದಿದೆ.

ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ನಡುವೆ ನಡೆದ ಅಪಘಾತದ ವಿಡಿಯೋ ವೀಕ್ಷಿಸಿ.

ಫೋರ್ಡ್ ಮಸ್ಟಾಂಗ್ ಜಿಟಿ ಮತ್ತು ಕೆಟಿಎಂ ಬೈಕ್ ನಡುವೆ ಡಿಕ್ಕಿ- ಜಖಂಗೊಂಡ ಹೊಸ ಕಾರು..!

ಇನ್ನು ಘಟನೆ ಕುರಿತಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಮಾಲೀಕನ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ.

English summary
Read in kannada about Brand New Ford Mustang GT Crashes In Bangalore.
Please Wait while comments are loading...

Latest Photos