ಇ-ಸ್ಪೋರ್ಟ್ಸ್ ವಲ್ಡ್ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿದ ಫಾರ್ಮುಲಾ 1
ಇ-ಸ್ಪೋರ್ಟ್ಸ್ ವಿಶ್ವ ಚಾಂಪಿಯನ್‌ಶಿಪ್ ಸರಣಿಗೆ ಚಾಲನೆ ನೀಡಿರುವ ಪ್ರತಿಷ್ಠಿತ ಫಾರ್ಮುಲಾ 1 ತಂಡವು ಮುಂದಿನ ತಿಂಗಳು ಸೆಪ್ಟೆಂಬರ್‌ನಿಂದ ನವೆಂಬರ್ ತನಕ ವಿವಿಧ ಹಂತದಲ್ಲಿ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲಿದೆ.
ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಇ-ಸ್ಪೋರ್ಟ್ಸ್ ವಿಶ್ವ ಚಾಂಪಿಯನ್‌ಶಿಪ್ ಸರಣಿಗೆ ಚಾಲನೆ ನೀಡಿರುವ ಪ್ರತಿಷ್ಠಿತ ಫಾರ್ಮುಲಾ 1 ತಂಡವು ಮುಂದಿನ ತಿಂಗಳು ಸೆಪ್ಟೆಂಬರ್‌ನಿಂದ ನವೆಂಬರ್ ತನಕ ವಿವಿಧ ಹಂತದಲ್ಲಿ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲಿದೆ.

ಹೊಸ ಮಾದರಿ ಫಾರ್ಮುಲಾ ಒನ್ ಇ-ಸ್ಪೋರ್ಟ್ಸ್ ಸರಣಿಯನ್ನು ಎಫ್ 1 ಗೇಮ್ ಡೆವಲಪರ್ ಕೋಡೆಮಾಸ್ಟರ್ಸ್ ಮತ್ತು ಗ್ಫಿನಿಟಿ ಸಹಯೋಗದೊಂದಿಗೆ ನಡೆಸಲಾಗುತ್ತಿದ್ದು, ಪ್ರಮುಖ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.

ಪ್ಲೇ ಸ್ಟೇಷನ್ 4, ಎಕ್ಸ್ ಬಾಕ್ಸ್ ಒನ್ ಮತ್ತು ವಿಂಡೋಸ್ ಪಿಸಿ ಹಂತಗಳಲ್ಲಿ ಇ-ಸ್ಪೋರ್ಟ್ಸ್ ವಲ್ಡ್ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದ್ದು, ಇದಕ್ಕೂ ಮೊದಲು ವರ್ಚುವಲ್ ಚಾಂಪಿಯನ್‌ಶಿಪ್ ಮೂಲಕ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
Recommended Video


ಅಕ್ಟೋಬರ್ 10 ರಿಂದ 11 ರವರೆಗೆ ಲಂಡನ್‌ನ ಗ್ಫಿನಿಟಿ ಅರೆನಾದಲ್ಲಿ ಲೈವ್ ಸೆಮಿಫೈನಲ್ ನಡೆಯಲಿದ್ದು, ನವೆಂಬರ್ 20 ರಿಂದ 25 ರವರೆಗೆ ಅಬುಧಾಬಿಯಲ್ಲಿರುವ ಯಾಸ್ ಮರಿನಾ ರೇಸಿಂಗ್ ಟ್ರ್ಯಾಕ್‌ನಲ್ಲಿ ಟಾಪ್ 20 ಚಾಲಕರ ಮಧ್ಯೆ ಮೂರು ಸುತ್ತಿನ ಫೈನಲ್ ಪಂದ್ಯಗಳು ನಡೆಯಲಿವೆ.

ಫಾರ್ಮಾಲಾ ಒನ್ ಇ-ಸ್ಪೋರ್ಟ್ಸ್ ವಲ್ಡ್ ಚಾಂಪಿಯನ್‌ಶಿಪ್‌ನ ವೆಚ್ಚ ನಿರ್ವಹಣೆ ವಹಿಸಿಕೊಂಡಿರುವ ಯುಎಸ್‌ಎ ಮೂಲದ ಲಿರ್ಬಟಿ ಮೀಡಿಯಾ ಸಂಸ್ಥೆಯು ಬೃಹತ್ ಆದಾಯದ ನೀರಿಕ್ಷೆಯೊಂದಿಗೆ ಯುವಪ್ರತಿಭೆಯನ್ನು ಹುಟ್ಟುಹಾಕುವ ಗುರಿ ಹೊಂದಿದೆ.

ಇದೇ ಮಾರ್ಗ ಹೊಸ ಯೋಜನೆ ರೂಪಿಸಿರುವ ಮೆಕ್ಲಾರೆನ್ ಫಾರ್ಮುಲಾ ಒನ್ ತಂಡ ಕೂಡಾ ಸಿಮ್ಯುಲೇಟರ್ ಡ್ರೈವರ್ ಅನ್ನು ನೇಮಕ ಮಾಡಲು ಇದೇ ರೀತಿಯ ವಾಸ್ತವ ಸರಣಿಯನ್ನು ಶುರು ಮಾಡಿದ್ದು, 'ವರ್ಲ್ಡ್ಸ್ ಫಾಸ್ಟೆಸ್ಟ್ ಗೇಮರ್' ಮೂಲಕ ತಂಡ ರಚನೆಗೆ ಮುಂದಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಇ-ಸ್ಪೋರ್ಟ್ಸ್ ವಲ್ಡ್ ಚಾಂಪಿಯನ್‌ಶಿಪ್ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಜೊತೆ ಫಾರ್ಮುಲಾ 1 ಅಭಿಮಾನಿಗಳನ್ನು ವಾಸ್ತಾವಿಕವಾಗಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದ್ದು, ಈ ಮೂಲಕ ಭವಿಷ್ಯದ ಇ-ಸ್ಪೋರ್ಟ್ಸ್‌ಗಳನ್ನು ಉತ್ತೇಜಿಸುವ ಗುರಿಹೊಂದಲಾಗಿದೆ.


Click it and Unblock the Notifications








