ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

Written By:

F4 ಸರಣಿಯಲ್ಲಿನ ಸಾಧನೆಯನ್ನು ಪರಿಗಣಿಸಿರುವ ಅಮೆರಿಕ ಫಾರ್ಮುಲಾ 1 ತಂಡವು ಅರ್ಜುನ್ ಮೈನಿ ಆಯ್ಕೆ ಮಾಡಿದ್ದು, F1 ತಂಡದ 2ನೇ ಸ್ಪರ್ಧಿಯಾಗಿ ತಂಡ ಮುನ್ನಡೆಸಲಿದ್ದಾರೆ.

To Follow DriveSpark On Facebook, Click The Like Button
ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಸದ್ಯ 2017ರ ಜಿಪಿ3 ಚಾಂಪಿಯನ್‌ಶಿಷ್‌ನಲ್ಲಿ ಪಾಲ್ಗೊಂಡಿರುವ ಅರ್ಜುನ್ ಮೈನಿ ಹೊಸ ಸಾಧನೆಯ ತವಕದಲ್ಲಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಕೇವಲ 19 ವರ್ಷದ ಅರ್ಜುನ್ ಮೈನಿ ಅತಿ ಚಿಕ್ಕವಯಸ್ಸಿನಲ್ಲೇ ಫಾರ್ಮುಲಾ ರೇಸ್‌ಗಳಲ್ಲಿ ಭಾಗಿಯಾದ ಖ್ಯಾತಿ ಹೊಂದಿದ್ದು, ಇದೀಗ ಫಾರ್ಮುಲಾ 1 ತಂಡದಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಫಾರ್ಮುಲಾ 1 ರೇಸ್‌ಗಳಲ್ಲಿ ಪ್ರತಿ ತಂಡದಲ್ಲೂ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದ್ದು, ಮೊದಲ ಸ್ಥಾನದಲ್ಲಿ ಅಮೆರಿಕ ಸ್ಯಾಂಟಿನೋ ಫೆರುಸ್ಸಿ ಜೊತೆ ಅರ್ಜುನ್ ಮೈನಿ ತಂಡ ಮುನ್ನಡೆಸಲಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಈ ಹಿಂದೆಯೂ ಹತ್ತಾರು ಚಾಂಪಿಯನ್ ಲೀಗ್‌ಗಳಲ್ಲಿ ಭಾಗಿಯಾಗಿರುವ ಅರ್ಜುನ್ ಮೈನಿ, ಬಾಲ್ಯದಿಂದಲೇ ಮೋಟಾರ್ ರೇಸ್ ವಿಭಾಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಸದ್ಯ ವ್ಯಾನ್ ಆರ್ಮೆಸ್ಪೊರ್ಟ್ಸ್ ರೇಸಿಂಗ್ ತಂಡದಲ್ಲಿ ತರಬೇತಿ ಪಡೆಯುತ್ತಿರುವ ಅರ್ಜುನ್, ಅಮೆರಿಕದಲ್ಲಿ ಬೆಂಗಳೂರಿನ ಕೀರ್ತಿ ಪತಾಕೆ ಹಾರಿಸಲು ಸಜ್ಜುಗೊಳ್ಳುತ್ತಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಬೆಂಗಳೂರಿನ ಇಂಡಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಅರ್ಜುನ್, ಕಳೆದ ಮೂರು ವರ್ಷಗಳಿಂದ ಇಂಗ್ಲೆಂಡಿನ ಮಿಲಾಟನ್ ಕಿನೆಸ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಇನ್ನು ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಅರ್ಜುನ್ ಮೈನಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

F1 ತಂಡದಲ್ಲಿ ಸ್ಥಾನ ನೀಡಿರುವ ಬಗ್ಗೆ ಮೆಂಟರ್‌ಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿರುವ ಅರ್ಜುನ್, ಫಾರ್ಮುಲಾ 1 ತಂಡ ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಈ ನಿಟ್ಟಿನಲ್ಲಿ ಸಾಕಷ್ಟು ತರಬೇತಿ ಅವಶ್ಯಕತೆಯಿದ್ದು, ತಂಡದ ಹಿರಿಯರ ಮಾರ್ಗದರ್ಶನದಂತೆ ತಂಡ ಮುನ್ನಡೆಸಲು ಶ್ರಮವಹಿಸುವೆ ನಾನು ಸಿದ್ಧನಿರುವೆ ಎಂದಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಇದದಲ್ಲದೇ ಅರ್ಜುನ್ ಮೈನಿ ಆಯ್ಕೆ ಕುರಿತಂತೆ ಮಾತಾನಾಡಿರುವ ಅಮೆರಿಕ ಫಾರ್ಮುಲಾ 1 ತಂಡ ಪ್ರಿನ್ಸಿಪಾಲ್ ಸ್ಟೈನರ್, ಯುವಪ್ರತಿಭೆ ಅರ್ಜುನ್ ಆಯ್ಕೆ ಬಗ್ಗೆ ನಮಗೆ ಹೆಮ್ಮೆಯಿದೆ ಎಂದಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಜೊತೆಗೆ ಫಾರ್ಮುಲಾ 1 ತಂಡ ಮುನ್ನಡೆಸುವ ವಿಚಾರದಲ್ಲಿ ಅರ್ಜುನ್ ಮೈನಿ ಅರ್ಹ ಸ್ಪರ್ಧಿಯಾಗಿದ್ದು, ಮುಂಬರುವ ಚಾಂಪಿಯನ್ ಟ್ರೋಫಿಯಲ್ಲೂ ಅವರು ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

ಅಮೆರಿಕದ ಫಾರ್ಮುಲಾ 1 ತಂಡಕ್ಕೆ ಆಯ್ಕೆಯಾದ ಬೆಂಗಳೂರಿನ ಅರ್ಜುನ್ ಮೈನಿ..!!

ಒಟ್ಟಿನಲ್ಲಿ ಮೋಟಾರ್ ರೇಸ್‌ ಜಗತ್ತಿನಲ್ಲಿ ಪುಟ್ಟ ಹೆಜ್ಜೆಯಿಡುತ್ತಿರುವ ಅರ್ಜುನ್ ಮೈನಿ, ಮುಂಬರುವ ದಿನಗಳಲ್ಲಿ ಹೊಸ ಹೊಸ ದಾಖಲೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆಲ್ ದಿ ಬೆಸ್ಟ್ ಅರ್ಜುನ್ ಮೈನಿ

English summary
Indian Racer Arjun Maini Joins Formula One Team.
Story first published: Friday, May 12, 2017, 16:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark