ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಹೀರೊ ಮೊಟೊಕಾರ್ಪ್ 2018ರಲ್ಲಿ ತನ್ನ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧವಾಗಿದೆ ಮತ್ತು ಆಕ್ರಮಣಕಾರಿ ಉತ್ಪನ್ನಗಳ ಮೂಲಕ ದೇಶದಲ್ಲಿ ತನ್ನ ಬಲವರ್ಧನೆಗೆ ಮುಂದಾಗಿದೆ.

By Girish

ಹೀರೊ ಮೊಟೊಕಾರ್ಪ್ 2018ರಲ್ಲಿ ತನ್ನ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧವಾಗಿದೆ ಮತ್ತು ಆಕ್ರಮಣಕಾರಿ ಉತ್ಪನ್ನಗಳ ಮೂಲಕ ದೇಶದಲ್ಲಿ ತನ್ನ ಬಲವರ್ಧನೆಗೆ ಮುಂದಾಗಿದೆ

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಕಳೆದ 2016ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹೀರೊ ಮೊಟೊಕಾರ್ಪ್, ತನ್ನ ಎಕ್ಸ್‌ಟ್ರಿಮ್ 200 ಎಸ್ ಪ್ರದರ್ಶನಗೊಳಿಸಿತ್ತು ಹಾಗು ಮುಂದಿನ ವರ್ಷದ ಆರಂಭದಲ್ಲಿ ತನ್ನ ಮೊದಲನೆಯ ಉತ್ಪನ್ನವಾಗಿ ಈ ಎಕ್ಸ್‌ಟ್ರಿಮ್ 200 ಎಸ್ ಮೋಟಾರ್‌‌ಸೈಕಲ್ ಪ್ರಾರಂಭಿಸಲು ಹೀರೊ ಮೊಟೊಕಾರ್ಪ್ ಸಿದ್ಧವಾಗಿದೆ.

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಇನ್ನು, ಹೀರೊ ಎಕ್ಸ್‌ಟ್ರಿಮ್ 200 ಎಸ್ ಬೈಕ್ ಸ್ನಾಯುವಿನ ರೀತಿಯ ಇಂಧನ ಟ್ಯಾಂಕ್, ನಯವಾದ ಹಿಂಬದಿಯ ವಿನ್ಯಾಸ ಮತ್ತು ದಪ್ಪನಾದ ಟೈರ್‌ಗಳೊಂದಿಗೆ ತೀಕ್ಷ್ಣ ಮತ್ತು ಹರಿತವಾದ ವಿನ್ಯಾಸವನ್ನು ಒಳಗೊಂಡಿದೆ.

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಹೀರೊ ಎಕ್ಸ್‌ಟ್ರಿಮ್ 200 ಬೈಕ್, 200 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಇಂಜಿನ್ ಆಯ್ಕೆ ಹೊಂದಿದೆ. ಈ ಎಂಜಿನ್, 18.2 ಬಿಎಚ್‌ಪಿ ಮತ್ತು 17.2 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 5-ಸ್ಪೀಡ್ ಗೇರ್‌ಬಾಕ್ಸ್ ಸಂಯೋಜನೆಯನ್ನು ಪಡೆದಿರುವ ಬೈಕ್, ಡೈಮಂಡ್ ಮಾದರಿಯ ಫ್ಲಾಟ್‌ಫಾರಂ ಆಧರಿಸಿದೆ.

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಭಾರತದಲ್ಲಿ ಎಕ್ಸ್‌ಟ್ರಿಮ್ 200 ಎಸ್ ದ್ವಿಚಕ್ರವನ್ನು ಮುಂದಿನ ವರ್ಷದ ಆಟೋ ಎಕ್ಸ್‌ಪೋದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಮುಂದಿನ ಎರಡು ವರ್ಷಗಳ ಕಾಲ ಕಂಪನಿಯು ಅತ್ಯಾಕರ್ಷಕವಾದ ಉತ್ಪನ್ನಗಳ ಬಿಡುಗಡೆಗೊಳಿಸುವ ಕಡೆ ಹೆಚ್ಚು ಗಮನ ಹರಿಸಲಿದೆ.

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಹೀರೋ ಇಂಪಲ್ಸ್ ಆಫ್ ರೋಡ್ ವಾಹನದ ಬಗ್ಗೆಯೂ ಸಹ ಕಂಪನಿ ಹೆಚ್ಚು ಗಮನಹರಿಸಿದೆ ಎನ್ನಲಾಗಿದ್ದು, ಗ್ರಾಹಕರೂ ಸಹ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಿರುವುದು ಕಂಪನಿಗೆ ಹೆಚ್ಚು ಬಲ ನೀಡಿದೆ.

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಎಕ್ಸ್‌ಟ್ರಿಮ್ 200 ಎಸ್ ಬೈಕಿನ ಹೊರತಾಗಿ, ಮುಂದಿನ ಎರಡು ವರ್ಷಗಳಲ್ಲಿ 110 ಸಿಸಿ ಮತ್ತು 150 ಸಿಸಿ ನಡುವಿನ ಎಂಜಿನ್ ಆಯ್ಕೆಯ ವಾಹನವನ್ನು ಪರಿಚಯಿಸುವ ಯೋಜನೆಯನ್ನು ಹಾಕಿಕೊಂಡಿದೆ ಹಾಗು HX250R ದ್ವಿಚಕ್ರ ವಾಹನದ ಬದಲಿಗೆ ಉತ್ತಮ ಮೋಟಾರ್ ಸೈಕಲ್ ಅಭಿವೃದ್ಧಿಪಡಿಸುತ್ತದೆ ಎಂಬ ಮಾಹಿತಿ ಇದೆ.

ಎಕ್ಸ್‌ಟ್ರಿಮ್ 200 ಎಸ್ ವಾಹನದ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ ಹೀರೊ

ಎಕ್ಸ್‌ಟ್ರಿಮ್ 200 ಎಸ್ ದ್ವಿಚಕ್ರ ವಾಹನವು ಸದ್ಯ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ದವಾಗಿದೆ. ಈ ಮೋಟಾರ್ ಸೈಕಲ್‌ನೊಂದಿಗೆ ಕಂಪನಿಯು ಹೊಸ ಉತ್ಪನ್ನ ಶ್ರೇಣಿಯನ್ನು ಪ್ರಾರಂಭಿಸಲು ಮುಂದಾಗಿದ್ದು, ಈ ವಾಹನಗಳಿಂದ ಮತ್ತಷ್ಟು ಜನರನ್ನು ತಲುಪುವ ಇರಾದೆ ಹೊಂದಿದೆ.

Most Read Articles

Kannada
English summary
Hero MotoCorp Will Finally Launch The Xtreme 200S In India.
Story first published: Saturday, December 16, 2017, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X