ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಉತ್ಪಾದನೆಗೆ ಭರ್ಜರಿ ಆಫರ್ ನೀಡಿದ ನೀತಿ ಆಯೋಗ

Written By:

2030ರ ವೇಳೆಗೆ ಜಗತ್ತಿನಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಯೋಜನೆಗಳು ತ್ವರಿತಗತಿಯಲ್ಲಿ ಸಾಗಿದ್ದು, ಇದೀಗ ಕೇಂದ್ರದ ನೀತಿ ಆಯೋಗವು ಕೂಡಾ ಭವಿಷ್ಯದ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭರ್ಜರಿ ಆಫರ್ ನೀಡಿದ ನೀತಿ ಆಯೋಗ

ನೀತಿ ಆಯೋಗದ ಹೊಸ ಯೋಜನೆ ಪ್ರಕಾರ ಇದುವರೆಗೆ ಇದ್ದ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳು ಮತ್ತು ಬೈಕ್‌ಗಳ ಉತ್ಪಾದನೆ ಮೇಲಿನ ಸಬ್ಸಡಿ ಯೋಜನೆಯನ್ನು ಮುಂದುವರಿಸಲಾಗಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಬೈಕ್‌ಗಳಿಗೆ ರೂ. 29,000 ಮತ್ತು ಕಾರುಗಳಿಗೆ ರೂ. 1.38 ಲಕ್ಷ ಪ್ರೋತ್ಸಾಹ ಧನ ಮುಂದುವರಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭರ್ಜರಿ ಆಫರ್ ನೀಡಿದ ನೀತಿ ಆಯೋಗ

ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಉತ್ಪಾದನೆಯನ್ನು ಹೆಚ್ಚಳಕ್ಕಾಗಿ ರಚಿಸಲಾಗಿರುವ ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್(FAME) ಯೋಜನೆ ಅಡಿಯಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಇದರಿಂದ ಎಲೆಕ್ಟ್ರಿಕ್ ಕಾರುಗಳು ಮತ್ತು ಬೈಕ್‌ಗಳ ಖರೀದಿ ಮತ್ತಷ್ಟು ಅಗ್ಗವಾಗಲಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭರ್ಜರಿ ಆಫರ್ ನೀಡಿದ ನೀತಿ ಆಯೋಗ

ಈ ಹಿಂದೆ 2016ರಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ತಂದಿದ್ದ ಕೇಂದ್ರ ನೀತಿ ಆಯೋಗವು ಇದೀಗ ಮಹತ್ವದ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದು, ಮಾರ್ಚ್ 31, 2018ರ ತನಕ ಪ್ರೋತ್ಸಾಹ ಧನ ನೀಡಲು ಒಪ್ಪಿಗೆ ಸೂಚಿಸಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭರ್ಜರಿ ಆಫರ್ ನೀಡಿದ ನೀತಿ ಆಯೋಗ

ಹೀಗಾಗಿ ಹೊಸ ಯೋಜನೆಯು ಮುಂದಿನ ಆರು ತಿಂಗಳು ಕಾಲ ಮುಂದುವರಿಯಲಿದ್ದು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಪ್ರೇರಿತ ಕಾರುಗಳು, ಬೈಕ್‌ಗಳು ಅಷ್ಟೇ ಅಲ್ಲದೇ ತ್ರಿ ಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆ ಮೇಲೂ ಹೊಸ ಯೋಜನೆ ಅನ್ವಯವಾಗುವಂತೆ ತಿದ್ದುಪಡಿ ತಂದಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭರ್ಜರಿ ಆಫರ್ ನೀಡಿದ ನೀತಿ ಆಯೋಗ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕೇಂದ್ರದ ನೀತಿ ಆಯೋಗವು ಜಾರಿಗೆ ತಂದಿರುವ ಹೊಸ ಯೋಜನೆಯು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಉತ್ಪಾದನೆಯ ಹೆಚ್ಚಳಕ್ಕೆ ಪ್ರೋತ್ಸಾಹ ದೊರೆಯಲಿದ್ದು, ಇದು ಉತ್ಪಾದಕರಿಗೆ ಅಷ್ಟೇ ಅಲ್ಲದೇ ಗ್ರಾಹಕರಿಗೂ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಅನುಕೂಲ ಮಾಡಿಕೊಡುವ ಯೋಜನೆಯಾಗಿದೆ.

English summary
Read in Kannada about Hybrid, Electric Vehicles Will Continue To Benefit From FAME Programme In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark