ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

Written By:

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈ ತನ್ನ ಕ್ರೆಟಾ ಎಸ್‌ಯುವಿ ಕಾರಿನ ಸ್ಪೋರ್ಟ್ ರೂಪಾಂತರವನ್ನು ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

ಹೊಸ ಹ್ಯುಂಡೈ ಕ್ರೆಟಾ ಸ್ಪೋರ್ಟ್ ಎಸ್‌ಯುವಿ ಕಾರು ಆಕ್ರಮಣಕಾರಿ ನೋಟವನ್ನು ಹೊಂದಿದ್ದು, ಕಾರಿನ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಕ್ರೆಟಾ ಸ್ಪೋರ್ಟ್ ಕಾರಿನ ಮುಂಭಾಗದ ತಂತುಕೋಶವು ಕಪ್ಪು ಗ್ರಿಲ್ ಬಾರ್ಡರ್, ಹೊಸದಾಗಿ ವಿನ್ಯಾಸಗೊಳಿಸಲ್ಪಟ್ಟ ಏರ್ ಡ್ಯಾಮ್ ಗ್ರಿಲ್ ಹೊಂದಿದೆ.

ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

ವಿಶೇಷವಾಗಿ ಸ್ಪೋರ್ಟ್ಸ್ ಅಂಶಗಳನ್ನು ಪಡೆದ ಕಾಂಪ್ಯಾಕ್ಟ್ ಎಸ್‌ಯುವಿ ರೂಪಾಂತರವು ಪುನರ್ ವಿನ್ಯಾಸಗೊಳಿಸಲಾದ ಕಪ್ಪು ಬಣ್ಣದ ಓಆರ್‌ವಿಎಂಗಳನ್ನು ಮತ್ತು 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಿದೆ.

ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

ಹಿಂಭಾಗದಲ್ಲಿ, ಕ್ರೆಟಾ ಸ್ಪೋರ್ಟ್ ರೂಪಾಂತರದಲ್ಲಿ ಕಪ್ಪು ಬಣ್ಣ ಪಡೆದ ಗ್ಲಾಸ್ ಬ್ಲಾಕ್ ಸ್ಕೀಡ್ ಪ್ಲೇಟ್, ಹೊಸ ಹಿಂಭಾಗದ ಸ್ಪಾಯ್ಲರ್ ಅಳವಡಿಸಲಾಗಿದೆ. ಅದಲ್ಲದೇ, ಸ್ಪೋರ್ಟ್ ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಹಳಿಗಳನ್ನು ಹೊಂದಿದ್ದು, ಇವೂ ಸಹ ಕಪ್ಪು ಬಣ್ಣದ ಆಯ್ಕೆಯಲ್ಲಿ ನೋಡಬಹುದಾಗಿದೆ.

ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕಪ್ಪು ಬಣ್ಣದ ಚರ್ಮದ ಫ್ಯಾಬ್ರಿಕ್ ಸೀಟುಗಳು ಮತ್ತು ಕಪ್ಪು ಹೆಡ್‌ಲೈನರ್‌ಗಳೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಯ್ಕೆಯನ್ನು ಹೊಂದಿದ್ದು, ಒಳಭಾಗವು ಕಪ್ಪು ಬಣ್ಣದ ಕ್ಯಾಬಿನ್ ಒಳಗೊಂಡಿದೆ.

ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

ಬ್ರೆಜಿಲಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಕ್ರೆಟಾ ಸ್ಪೋರ್ಟ್ ಕಾರು 2-ಲೀಟರ್ ಫ್ಲೆಕ್ಸ್-ಇಂಧನ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿದ್ದು, ಪೆಟ್ರೋಲ್ ಕಾರು 156 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದ್ದು, ಡೀಸೆಲ್ ಕಾರು 166 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದೆ.ಈ ಎಂಜಿನ್ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ.

ಕ್ರೆಟಾ ಸ್ಪೋರ್ಟ್ ರೂಪಾಂತರವನ್ನು ಬಹಿರಂಗಪಡಿಸಿದ ಹ್ಯುಂಡೈ

ಡ್ಯೂಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಹಾಗು ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ.

English summary
South Korean automaker Hyundai has revealed a new variant of its Creta SUV named as Creta Sport in the Brazilian market.
Story first published: Tuesday, September 26, 2017, 19:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark