ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

Written By:

ಭಾರತದಲ್ಲಿ ಹ್ಯುಂಡೈ ಸಂಸ್ಥೆಯು ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದು, ಸಂಸ್ಥೆಯು ಸಣ್ಣ ಕಾರಿನ ಬಗ್ಗೆ ಹೊಸ ವಿಚಾರದೊಂದಿಗೆ ಮತ್ತೆ ಸುದ್ದಿಗೆ ಬಂದಿದೆ.

To Follow DriveSpark On Facebook, Click The Like Button
ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತಿರುವ ಹೊಸ ಸಣ್ಣ ಕಾರುಗಳನ್ನು ಬಿಡುಗಡೆಗೊಳಿಸಲು ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈ ನಿರ್ಧರಿಸಿದ್ದು, ಹೊಸ ಕಾರುಗಾಗಿ ಸ್ಯಾಂಟ್ರೊ ಮೋನಿಕರ್ ಕಾರನ್ನು ಬಳಸುವುದಿಲ್ಲ ಎಂದು ವರದಿ ಮಾಡಿದೆ.

ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

ಮುಂಬರುವ ಸಣ್ಣ ಕಾರುಗಳಿಲ್ಲಿ ಸ್ಯಾಂಟ್ರೊ ಬ್ರಾಂಡನ್ನು ಕಂಪೆನಿ ಬಳಸುವುದಿಲ್ಲ ಎಂದು ಹ್ಯುಂಡೈ ಇಂಡಿಯಾ ಕಂಪನಿಯ ಜನರಲ್ ಮ್ಯಾನೇಜರ್ ಮತ್ತು ಮಾರ್ಕೆಟಿಂಗ್ ಗ್ರೂಪ್ ಹೆಡ್ ಆದಂತಹ ಪುನೀತ್ ಆನಂದ್ ತಿಳಿಸಿದ್ದಾರೆ.

ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

ಹೊಸ ವೆರ್ನ ಕಾರಿನ ಬಿಡುಗಡೆಯ ಸಮಯದಲ್ಲಿ, ಹೊಸ ಕಾಂಪ್ಯಾಕ್ಟ್ ಕಾರು ಅಭಿವೃದ್ಧಿಯಲ್ಲಿದೆ ಮತ್ತು 2018ರ ದ್ವಿತೀಯಾರ್ಧದಲ್ಲಿ ಹೊಸ ಕಾರನ್ನು ಪರಿಚಯಿಸಲಾಗುವುದು ಎಂದು ಹ್ಯುಂಡೈ ತಿಳಿಸಿತ್ತು.

ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

ಹಿಂದೆ ಹಲವಾರು ವರದಿಗಳ ಪ್ರಕಾರ, ಹ್ಯುಂಡೈ ಸ್ಯಾಂಟ್ರೊ ಬ್ರಾಂಡನ್ನು ತನ್ನ ಹೊಸ ಜನರೇಷನ್ ಸಣ್ಣ ಕಾರಿನಲ್ಲಿ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು, ಆದರೆ ಈ ವಿಚಾರವನ್ನು ಕಂಪನಿ ತಳ್ಳಿಹಾಕಿದೆ.

ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

"ಹೊಸ ಕಾರಿಗೆ ಸ್ಯಾಂಟ್ರೊ ಎಂದು ಹೆಸರಿಸಬೇಕಾಗಿತ್ತು, ಆದರೆ ಪ್ರಸ್ತುತ ಮಾರುಕಟ್ಟೆಯ ಸನ್ನಿವೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಹೊಸ ಕಾರಿಗೆ ಹೊಸ ಹೆಸರನ್ನು ಇಡಲಿದ್ದೇವೆ" ಎಂದು ಆನಂದ್ ತಿಳಿಸಿದ್ದಾರೆ. ಹೊಸ ಪೀಳಿಗೆಯ ಹ್ಯಾಚ್‌ಬ್ಯಾಕ್ 1.2-ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆ ಪಡೆದುಕೊಳ್ಳಬಹುದು ಎನ್ನಲಾಗಿದೆ.

ಹೊಸ ಸಣ್ಣ ಕಾರಿನ ವಿವರಗಳನ್ನು ಬಹಿರಂಗಪಡಿಸಿದ ಹ್ಯುಂಡೈ

ಹೊಸ ಕಾರಿನ ಮುಂಭಾಗವು ಹೆಚ್ಚು ವಿಶಾಲವಾಗಿ ಮತ್ತು ದೊಡ್ಡದಾಗಿ ಇರಲಿದೆ, ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಕಾರಿನ ಕ್ಯಾಬಿನ್ ಮತ್ತು ಬೂಟ್ ಜಾಗವು ಸ್ಯಾಂಟ್ರೊಗಿಂತ ಹೊಸ ವಿನ್ಯಾಸ ಹೊಂದಿರಲಿದೆ ಎಂಬ ಮಾಹಿತಿ ತಿಳಿದುಬಂದಿದೆ.

English summary
South Korean automaker Hyundai is developing an all-new small car for the Indian market. Now, the company will not use the Santro moniker for the new car.
Story first published: Wednesday, September 20, 2017, 11:20 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark