ಹ್ಯುಂಡೈ ಟಕ್ಸನ್ 4ಡಬ್ಲ್ಯೂಡಿ ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ : ಬೆಲೆ ರೂ 25.19 ಲಕ್ಷ
ಹ್ಯುಂಡೈ ಟಕ್ಸನ್ 4 ಡಬ್ಲ್ಯೂಡಿ(ಫೋರ್ ವೀಲ್ ಡ್ರೈವ್)ಕಾರು ಭಾರತದಲ್ಲಿ ಬಿಡುಗಡೆಯಾಯಿತು. ಹ್ಯುಂಡೈ ಟಕ್ಸನ್ ಎಸ್‌ಯುವಿ ಕಾರು ಫೋರ್ ವೀಲ್ ಆವೃತ್ತಿಯು ರೂ. 25.19 ಲಕ್ಷ ಎಕ್ಸ್ ಶೋರೂಂ(ದೆಹಲಿ)ದರದಲ್ಲಿ ಲಭ್ಯವಿದೆ.
ಹ್ಯುಂಡೈ ಟಕ್ಸನ್ 4 ಡಬ್ಲ್ಯೂಡಿ(ಫೋರ್ ವೀಲ್ ಡ್ರೈವ್)ಕಾರು ಭಾರತದಲ್ಲಿ ಬಿಡುಗಡೆಯಾಯಿತು. ಹ್ಯುಂಡೈ ಟಕ್ಸನ್ ಎಸ್‌ಯುವಿ ಕಾರು ಫೋರ್ ವೀಲ್ ಆವೃತ್ತಿಯು ರೂ. 25.19 ಲಕ್ಷ ಎಕ್ಸ್ ಶೋರೂಂ(ದೆಹಲಿ)ದರದಲ್ಲಿ ಲಭ್ಯವಿದೆ.

ಹ್ಯುಂಡೈ ಟಕ್ಸನ್ 4ಡಬ್ಲ್ಯೂಡಿ ಕಾರು 2.0 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಶಕ್ತಿಯನ್ನು ಹೊಂದಿದೆ, ಈ ಕಾರು 400 ಎನ್ಎಂ ಟಾರ್ಕ್‌ನೊಂದಿಗೆ 1,750 ರಿಂದ 2,750 ಆರ್‌ಪಿಎಂ ಮತ್ತು 182 ಬಿಎಚ್‌ಪಿಯಲ್ಲಿ 4,000 ಆರ್‌ಪಿಎಂ ಶಕ್ತಿ ಉತ್ಪಾದನೆ ಮಾಡಲಿದೆ.

ಈ ಕಾರಿನ ಎಂಜಿನ್ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, ಈ ಟ್ರಾನ್ಸ್‌ಮಿಷನ್ ನಾಲ್ಕು-ಚಕ್ರಗಳಿಗೂ ಚಾಲನೆಯ ಸಿಸ್ಟಮ್ ಮೂಲಕ ವಿದ್ಯುತ್ ಪ್ರಸರಣೆ ಮಾಡಲಿದೆ.

ಈ ಕಾರು ತನ್ನ ಸುಧಾರಿತ ಟ್ರಾಕ್ಷನ್ ಕಾರ್ನರಿಂಗ್ ಕಂಟ್ರೋಲ್ ಸಿಸ್ಟಮ್‌ನೊಂದಿಗೆ ಹ್ಯುಂಡೈ ನಿರ್ಮಾಣ ಮಾಡಿದ್ದು, ಇದು ಹೆಚ್ಚಿನ ಪ್ರಮಾಣದ ಹಿಡಿತವನ್ನು ಹೊಂದಿದೆ ಹಾಗು ಗರಿಷ್ಠ ಪ್ರಮಾಣದ ಟಾರ್ಕ್ ಉತ್ಪಾದನೆಯನ್ನು ವರ್ಗಾಯಿಸುತ್ತದೆ.

ಹ್ಯುಂಡೈ ತನ್ನ ಜಿಎಲ್ ರೂಪಾಂತರವನ್ನು ಸಹ ನವೀಕರಿಸಿದೆ, ಈ ವಾಹನವು ಪೆಟ್ರೋಲ್ ಮತ್ತು ಡೀಸಲ್ ಎರಡೂ ಆಯ್ಕೆಗಳಲ್ಲಿ ಬಿಡುಗಡೆಗೊಂಡಿದೆ.

ಈ ಜಿಎಲ್ ಕಾರುಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್(ವಿಎಸ್ಎಮ್), ಹಿಲ್ ಅಸಿಸ್ಟ್ ಕಂಟ್ರೋಲ್ (ಹೆಚ್ಎಸಿ), ಡೌನ್ ಹಿಲ್ ಬ್ರೇಕ್ ಕಂಟ್ರೋಲ್(ಡಿಬಿಸಿ) ಮತ್ತು ಬ್ರೇಕ್ ಸೇರಿದಂತೆ ಹಾಲವಾರು ಸುರಕ್ಷತೆ ಆಯ್ಕೆಗಳು ಕಾರಿನ ಚಾಲನಾ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಟಕ್ಸನ್ 4 ಡಬ್ಲ್ಯೂಡಿ ಕಾರನ್ನು ಬಿಡುಗಡೆಗೊಳಿಸುವ ಮೂಲಕ ಭಾರತದಲ್ಲಿ ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ಒಡ್ಡಲು ಹ್ಯುಂಡೈ ಮುಂದಾಗಿದ್ದು, ಭಾರತದ ಕಾರಿಗೆ ಹೋಲಿಕೆ ಮಾಡಿದರೆ ಅಮೇರಿಕನ್ ಎಸ್‌ಯುವಿ ಕಾರು ದರದಲ್ಲಿ ದುಬಾರಿ ಆಯ್ಕೆಯಾಗಿದೆ.


Click it and Unblock the Notifications








