ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಮುಂದಿನ ವರ್ಷದ ಜನವರಿ 1ರಿಂದ ದೇಶದಲ್ಲಿ ಜೀಪ್ ಸಂಸ್ಥೆಯು ಈ ವರ್ಷ ಬಿಡುಗಡೆಗೊಳಿಸಿದ್ದ ತನ್ನ ಜೀಪ್ ಕಂಪಾಸ್ ಎಸ್‌ಯುವಿ ಕಾರಿನ ಬೆಲೆಯನ್ನು ಹೆಚ್ಚಿಸಲಿದ್ದೇವೆ ಎಂದು ಫಿಯೆಟ್ ಕ್ರಿಸ್ಲರ್ ಆಟೋಮೊಬೈಲ್ ಇಂಡಿಯಾ ಘೋಷಿಸಿದೆ.

By Girish

ಜೀಪ್ ಕಂಪಾಸ್ ಕಾರಿನ ಬೆಲೆ ಜನವರಿ 2018ರಿಂದ ಶೇಕಡಾ ಎರಡರಿಂದ ನಾಲ್ಕು ಪ್ರತಿಶತದಷ್ಟು ಏರಿಕೆಯಾಗಲಿದೆ. ಆದರೆ, ಈ ಬೆಲೆ ಏರಿಕೆಯು ಕೇವಲ ಉನ್ನತ ಹಂತದ ಮಾದರಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಪ್ರವೇಶ ಮಟ್ಟದ ಮಾದರಿಯು ಪ್ರಸ್ತುತ ಬೆಲೆಯನ್ನು ಉಳಿಸಿಕೊಳ್ಳುತ್ತದೆ.

ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಪ್ರಸ್ತುತ, ಪ್ರವೇಶ ಮಟ್ಟದ ಮಾದರಿಯ ಸ್ಪೋರ್ಟ್ ಪೆಟ್ರೋಲ್ ಕಾರು ರೂ.15.16 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಪ್ರಸ್ತುತ ಲಭ್ಯವಿದೆ ಮತ್ತು 2018 ರಲ್ಲಿಯೂ ಸಹ ಇದೇ ಬೆಲೆ ಉಳಿಸಿಕೊಳ್ಳುತ್ತದೆ.

ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಆದರೆ, ಲಾಂಗಿಟ್ಯೂಡ್ ಮತ್ತು ಲಿಮಿಟೆಡ್ ಟ್ರಿಮ್ ಮಾದರಿಯ ಕಾರುಗಳು ಶೇಕಡಾ ಎರಡು ರಿಂದ ನಾಲ್ಕು ಪ್ರತಿಶತದಷ್ಟು ದರ ಹೆಚ್ಚಾಗೆಯಾಗುತ್ತದೆ. ಇದರಿಂದಾಗಿ, ಬೆಲೆಯು ರೂ.80,000ರಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಕಂಪಾಸ್ ಕಾರು ಬೆಲೆ ಹೆಚ್ಚಳಕ್ಕೆ ಸಾಕ್ಷಿಯಾಗಿರುವುದು ಇದು ಎರಡನೆಯ ಬಾರಿ ಎನ್ನಬಹುದು. ಜಿಎಸ್‌ಟಿ ಜಾರಿಗೆ ಬಂದಾಗ ಈ ಕಾರಿನ ಬೆಳೆಯನ್ನು ರೂ.72,000ವರೆಗೆ ಹೆಚ್ಚಿಸಲಾಗಿತ್ತು. ದೇಶದಲ್ಲಿ ಬಿಡುಗಡೆಗೊಂಡ ನಂತರ ಕೇವಲ ನಾಲ್ಕು ತಿಂಗಳಿನಲ್ಲಿ ಸುಮಾರು 10,000 ಜೀಪ್ ಕಂಪಾಸ್ ಕಾರುಗಳನ್ನು ಕಂಪನಿ ಮಾರಾಟ ಮಾಡಿದೆ.

ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಪ್ರಸ್ತುತ, ಜೀಪ್ ಕಂಪಾಸ್ ಕಾರು 1.4-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಮತ್ತು 2-ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಪೆಟ್ರೋಲ್ ಎಂಜಿನ್ ಕಾರು 6 ಸ್ಪೀಡ್ ಮ್ಯಾನ್ಯುವಲ್ ಅಥವಾ 7 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮತ್ತು ಡೀಸೆಲ್ ಎಂಜಿನ್ ಕಾರು 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಸೌಕರ್ಯ ಪಡೆದುಕೊಂಡಿದೆ.

ಜನವರಿಯಿಂದ ಕಂಪಾಸ್ ಕಾರಿನ ಬೆಲೆ ಏರಿಕೆ ಮಾಡಲು ಜೀಪ್ ಸಂಸ್ಥೆ ನಿರ್ಧಾರ

ಬಿಡುಗಡೆಯಾದಾಗಿಲಿನಿಂದಲೂ ಸಹ ಜೀಪ್ ಕಂಪಾಸ್ ಕಾರು ಉತ್ತಮ ಮಾರಾಟವಾಗುತ್ತಿರುವ ಎಸ್‌ಯುವಿಯಾಗಿದೆ. ಆದರೆ, ಜನವರಿಯಲ್ಲಿ ಬೆಲೆ ಏರಿಕೆಯ ನಂತರ ಕಾರನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Jeep Compass To Cost More From 2018
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X