ಮಾಲಿನ್ಯ ತಡೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಮಾಲಿನ್ಯ ತಡೆಯುವಲ್ಲಿ ಬಹುದೊಡ್ಡ ಪಾತ್ರವಹಿಸುತ್ತಿದ್ದು, ಈ ಮಧ್ಯೆ ಹೊಸದೊಂದು ಮೈಲಿಗಲ್ಲು ಸಾಧಿಸಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಪರಿಸರ ಮಾಲಿನ್ಯ ತಡೆಯುವಲ್ಲಿ ಬಹುದೊಡ್ಡ ಪಾತ್ರವಹಿಸುತ್ತಿದ್ದು, ಈ ಮಧ್ಯೆ ಹೊಸದೊಂದು ಮೈಲಿಗಲ್ಲು ಸಾಧಿಸಿದೆ.

ಮಾಲಿನ್ಯ ತಡೆಗೆ ಸಹಕಾರಿಯಾಗುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ಸದ್ಯ ಭಾರತೀಯ ಆಟೋ ಉದ್ಯಮ ವಲಯದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಏಕೈಕ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮಾತ್ರ. ಹೀಗಾಗಿ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಹೊಸ ಸಾಧನೆ ಮಾಡಿರುವ ಮಹೀಂದ್ರಾ, ಭಾರತೀಯ ರಸ್ತೆಗಳಲ್ಲಿ ತನ್ನ ಎಲೆಕ್ಟ್ರಿಕ್ ಉತ್ಪನ್ನಗಳ ಮೂಲಕ 50 ಮಿಲಿಯನ್ ಕಿಲೋ ಮೀಟರ್ ಸವಾರಿ ಮಾಡುವ ಮೂಲಕ ಹೊಸ ಹೆಜ್ಜೆ ಇರಿಸಿವೆ.

ಮಾಲಿನ್ಯ ತಡೆಗೆ ಸಹಕಾರಿಯಾಗುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ಅಂದರೆ ಮಹೀಂದ್ರಾ ನಿರ್ಮಾಣ ಮಾಡಿರುವ ಎಲ್ಲಾ ಎಲೆಕ್ಟ್ರಿಕ್ ಕಾರುಗಳು ಇದುವರೆಗೆ 50 ಮಿಲಿಯನ್ ಕಿ.ಮಿ ದೂರ ಕ್ರಮಿಸಿದ್ದು, ಇದರಿಂದ 25,00,000 ಕೆ.ಜಿ ಅಷ್ಟು ಕಾರ್ಬನ್ ಹೊರಸೂಸುವಿಕೆಯನ್ನು ತಡೆಯುವಲ್ಲಿ ಸಹಕಾರಿಯಾಗಿವೆ ಎನ್ನಬಹುದು.

ಮಾಲಿನ್ಯ ತಡೆಗೆ ಸಹಕಾರಿಯಾಗುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಬಳಕೆಯಿಂದ ಪರೋಕ್ಷವಾಗಿ 2,50,000 ಗಿಡಗಳನ್ನು ನೆಟ್ಟಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಹೀಂದ್ರಾ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಪರಿಚಯಿಸಲು ಮುಂದಾಗಿದೆ.

Recommended Video

Tata Tiago XTA AMT Launched In India | In Kannada - DriveSpark ಕನ್ನಡ
ಮಾಲಿನ್ಯ ತಡೆಗೆ ಸಹಕಾರಿಯಾಗುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ಸದ್ಯ ಮಾರುಕಟ್ಟೆಯಲ್ಲಿ ಮಹೀಂದ್ರಾ ನಿರ್ಮಾಣದ ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯಿದ್ದು, ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಸಣ್ಣ ಕಾರು ಮಾದರಿಗಳಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸುತ್ತಿರುವುದು ಮಹೀಂದ್ರಾ ಮಹತ್ವದ ಯೋಜನೆಗೆ ಮತ್ತಷ್ಟು ಬಲ ಬಂದಿದೆ ಎನ್ನಬಹುದು.

ಮಾಲಿನ್ಯ ತಡೆಗೆ ಸಹಕಾರಿಯಾಗುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ಇನ್ನು ಎಲೆಕ್ಟ್ರಿಕ್ ಮಾದರಿಗಳ ಹೊಸ ಮೈಲಿಗಲ್ಲು ಬಗ್ಗೆ ಮಾತನಾಡಿರುವ ಮಹೀಂದ್ರಾ ಎಲೆಕ್ಟ್ರಿಕ್ ಕಾರು ನಿರ್ಮಾಣ ವಿಭಾಗದ ಅಧ್ಯಕ್ಷ ಮಹೇಶ್ ಬಾಬು, "ಭವಿಷ್ಯದ ಕಾರು ಮಾದರಿಗಳಾದ ಎಲೆಕ್ಟ್ರಿಕ್ ಕಾರು ಮಾದರಿಗಳ ಮೂಲಕ ನಾವು ಈಗಾಗಲೇ 50 ಮಿಲಿಯನ್ ದೂರ ಕ್ರಮಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಲಿದೆ" ಎಂದಿದ್ದಾರೆ.

ಮಾಲಿನ್ಯ ತಡೆಗೆ ಸಹಕಾರಿಯಾಗುತ್ತಿವೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಮಹೀಂದ್ರಾ ಕೈಗೊಂಡ ಭವಿಷ್ಯದ ಯೋಜನೆಗಳು ಯಶಸ್ವಿಗೆ ಕಾರಣವಾಗುತ್ತಿವೆ. ಜೊತೆಗೆ ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಜನಪ್ರಿಯಗೊಳ್ಳುವ ಅವಶ್ಯಕತೆಯಿದೆ.

Most Read Articles

Kannada
English summary
Read in Kannada about Mahindra Electric Crosses 50 Million Kilometres On Indian Roads.
Story first published: Friday, September 15, 2017, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X