ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಭಾರತ ದೇಶದ ಪ್ರಮುಖ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯ ಹೊಸ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ರಿಟರ್ನ್ ತೆಗೆದುಕೊಳ್ಳಲು ನಿರ್ಧರಿಸಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.

By Girish

ಹೌದು, ಪ್ರಖ್ಯಾತ ಕಾರು ತಯಾರಕ ಕಂಪೆನಿಯಾದ ಮಾರುತಿ ಸುಜುಕಿ, ಇತ್ತೀಚಿಗೆ ತನ್ನ ಮೂರನೇ ಪೀಳಿಗೆಯ ಡಿಜೈರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಮೂರನೇ ಪೀಳಿಗೆಯ ಕಾರಿಗೆ ಗ್ರಾಹಕರಿಂದಲೂ ಸಹ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಕೆಳೆದ ಸೆಪ್ಟಂಬರ್‌ನಲ್ಲಿ 34,000 ಡಿಜೈರ್ ಕಾರುಗಳು ಮಾರಾಟಗೊಳ್ಳುವ ಮೂಲಕ ಯಶಸ್ವಿ ಕಾರು ಎನ್ನಿಸಿಕೊಂಡಿತ್ತು ಕೂಡ. ಆದರೆ, ತಾನು ಮಾರಾಟ ಮಾಡಿರುವ ಕಾರುಗಳನ್ನು ಮರುಪಡೆಯಲು ಕಂಪನಿ ನಿರ್ಧರಿಸಿದೆ.

Recommended Video

TVS Apache RR 310 Launched In India | FirstLook |Top-speed | Price
ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

2017ರ ಫೆಬ್ರುವರಿ 23ರಿಂದ ಜುಲೈ 10 ರವರೆಗೆ ತಯಾರಿಸಲಾದ ಸುಮಾರು 21,494 ಮಾರುತಿ ಡಿಜೈರ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ ಎಂಬ ಖಚಿತ ಮಾಹಿತಿ ಹೊರ ಬಂದಿದೆ.

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಈ ಬಗ್ಗೆ ಮಾರುತಿ ಸುಜುಕಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಡಿಜೈರ್ ಕಾರನ್ನು ಮರುಪಡೆಯುವ ಬಗ್ಗೆ ಅಧಿಸೂಚನೆಯನ್ನು ಪ್ರಕಟಿಸಿದ್ದು, ದೋಷ ಹೊಂದಿರುವ ಹಿಂಭಾಗದ ವೀಲ್ ಹಬ್ ಬದಲಾವಣೆಯ ಸಲುವಾಗಿ ಕಾರನ್ನು ಹಿಂಪಡೆಯಾಲಾಗುತ್ತಿದೆ ಎನ್ನಲಾಗಿದೆ.

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಮಾಲೀಕರು ಹತ್ತಿರದ ಮಾರುತಿ ಸುಜುಕಿ ಸೇವಾ ಕೇಂದ್ರಕ್ಕೆ ಕಾರಿನೊಂದಿಗೆ ಭೇಟಿ ನೀಡುವ ಮೂಲಕ ಕಾರಿನ ತಪಾಸಣೆ ಮಾಡಿಸಿಕೊಳ್ಳಬಹುದು ಹಾಗು ದೋಷಪೂರಿತ ಭಾಗವನ್ನು ಉಚಿತವಾಗಿ ಪಡೆಯಬಹುದು.

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ತಮ್ಮ ಕಾರುಗಳು ದೋಷಪೂರಿತ ಹಿಂಭಾಗದ ವೀಲ್ ಹಬ್ ಹೊಂದಿವೆಯೇ ? ಎಂದು ತಿಳಿದುಕೊಳ್ಳಲು ವಾಹನದ ಗುರುತಿನ ಸಂಖ್ಯೆ(MA3 ನಂತರ 14 ಅಂಕೆ) ವೆಬ್ ಸೈಟ್‌ನಲ್ಲಿ ನಮೂದಿಸುವುದರ ಮೂಲಕ ಪರಿಶೀಲಿಸಬಹುದು.

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಹೊಸ ಮಾರುತಿ ಡಿಜೈರ್ ಕಾರು ಮಾರುತಿ ಸುಜುಕಿ ಕಂಪನಿಯ ಯಶಸ್ವಿ ಉತ್ಪನ್ನವಾಗಿದೆ. ಕೇವಲ ಐದು ತಿಂಗಳ ಹಿಂದೆ ಈ ಕಾರು ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಸರಿ ಸುಮಾರು 1 ಲಕ್ಷ ಕಾರುಗಳು ಮಾರಾಟವಾಗಿವೆ.

ತನ್ನ ಯಶಸ್ವಿ ಡಿಜೈರ್ ಕಾರಿನಲ್ಲಿ ದೋಷ ಇದೆ ಎಂದ ಮಾರುತಿ ಸುಜುಕಿ

ಡಿಜೈರ್ ಕಾರಿನ ಹಿಂಪಡೆಯುವಿಕೆ ಇದೇ ಮೊದಲೇನಲ್ಲ !! ಹೌದು, ಈ ಮೊದಲ ಸ್ಟೇರಿಂಗ್ ದೋಷ ಇರುವ ಕಾರಣ ಕಾರನ್ನು ಹಿಂಪಡೆದಿತ್ತು. ಆದರೆ ಈ ರೀತಿಯ ನಿರ್ದಾರ ಉತ್ತಮ ಕ್ರಮವಾಗಿದ್ದು, ಗ್ರಾಹಕರ ಬಗ್ಗೆ ಕಂಪನಿಯ ಕಾಳಜಿಯನ್ನು ತೋರಿಸುತ್ತದೆ.

Most Read Articles

Kannada
English summary
Maruti Dzire Recalled In India.
Story first published: Saturday, December 9, 2017, 9:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X