ಹಳೆಯ ಸ್ಮಾರ್ಟ್‌ಪ್ಲೇ ಇನ್ಫೋಟೈನ್ಮೆಂಟ್ ವ್ಯವಸ್ಥೆ ಅಪ್ಡೇಟ್ ಮಾಡಿದ ಮಾರುತಿ

Written By:

ಭಾರತದ ಪ್ರಮುಖ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ತನ್ನ ಕಾರುಗಳಲ್ಲಿ ಇರುವಂತಹ ಹಳೆಯ ಸ್ಮಾರ್ಟ್‌ಪ್ಲೇ ಇನ್ಫೋಟೈನ್ಮೆಂಟ್ ವ್ಯವಸ್ಥೆಗಳನ್ನು ನವೀಕರಣ ಮಾಡಿದೆ.

ಆಧುನಿಕ ಯುಗದಲ್ಲಿ ಹೊಸ ತಂತ್ರಜ್ಞಾನವನ್ನು ಹೆಚ್ಚಿನ ಮಟ್ಟದಲ್ಲಿ ಅಳವಡಿಸಿಕೊಳ್ಳುವವರು ಮಾತ್ರ ಹೆಚ್ಚು ಯಶಸ್ಸು ಸಾಧಿಸಲು ಸದ್ಯ ಎಂಬುದನ್ನು ಮಾರುತಿ ಸಹ ನಂಬಿದ್ದು, ಈ ಕಾರಣಕ್ಕೆ ಸಂಸ್ಥೆಯು ತನ್ನ ವಾಹನಗಳಲ್ಲಿ ಸ್ಮಾರ್ಟ್‌ಪ್ಲೇ ಇನ್ಫೋಟೈನ್ಮೆಂಟ್ ವ್ಯವಸ್ಥೆ ಬದಲಿಸಿದೆ.

ಸ್ಮಾರ್ಟ್‌ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್‌ನೊಂದಿಗೆ ಬರುವ ಹಳೆಯ ವಾಹನಗಳಿಗೆ ಈ ಅಪ್ಡೇಟ್ ಈಗ ಲಭ್ಯವಿದೆ.

ಆಂಡ್ರಾಯ್ಡ್ ಆಟೊ ಎಂಬ ಹೊಸ ಅಪ್ಡೇಟ್ ಹೊಂದಿರುವ ಈ ಸ್ಮಾರ್ಟ್‌ಪ್ಲೇ ಇನ್ಫೋಟೈನ್ಮೆಂಟ್ ವ್ಯವಸ್ಥೆಯಿಂದಾಗಿ ಹೆಚ್ಚು ಸಂವಹನ ನೆಡೆಸಲು ಸಾಧ್ಯವಾಗಲಿದೆ.

ಈ ಅಪ್ಡೇಟ್‌ನಿಂದಾಗಿ ಹತ್ತಿರದ ಮಾರುತಿ ಸುಜುಕಿ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದ್ದು, ನ್ಯಾವಿಗೇಷನ್ ಸಿಸ್ಟಮ್ ಆಯ್ಕೆಯಲ್ಲಿ ಹೊಸ ನಕ್ಷೆಗಳನ್ನು ಪಡೆದುಕೊಂಡಿದೆ. ಸಂಪೂರ್ಣ ಅಪ್ಡೇಟ್ 2.5 ಜಿಬಿ ಹೊಂದಿದೆ ಮತ್ತು 2020ರವರೆಗೆ ಮಾನ್ಯವಾಗಿರುತ್ತದೆ.

ಇತ್ತೀಚಿಗೆ ಹೊರ ಬರುತ್ತಿರುವ ಆಧುನಿಕ ಕಾರುಗಳು ಆಂಡ್ರಾಯ್ಡ್ ಆಟೊ ಮತ್ತು ನ್ಯಾವಿಗೇಷನ್ ಸಿಸ್ಟಮ್ ಕಡ್ಡಾಯವೆಂಬಂತೆ ಹೊರಬರುತ್ತಿರುವುದನ್ನು ನಾವು ಗಮನಿಸಬಹುದು.

ತನ್ನ ಗ್ರಾಹಕರಿಗೆ ಸುಧಾರಿತ ತಂತ್ರಜ್ಞಾನವನ್ನು ಒದಗಿಸುವಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದೆ ಇರುವ ಮಾರುತಿ ಸುಜುಕಿ ಸಂಸ್ಥೆ ಸದ್ಯ ಈ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿದ್ದು, ಮಾರುತಿ ಬಗ್ಗೆ ವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

Read more on ಮಾರುತಿ maruti
English summary
Read in Kannada about India's leading car maker Maruti Suzuki has rolled an update for the older SmartPlay infotainment systems.
Story first published: Wednesday, July 5, 2017, 11:51 [IST]
Please Wait while comments are loading...

Latest Photos