ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ..!!

ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಾರುಗಳ ಖರೀದಿಗೆ ತಿಂಗಳುಗಟ್ಟಲೇ ಕಾಯಬೇಕಿಲ್ಲ. ಯಾಕೇಂದ್ರೆ ಮಾರುತಿ ಸುಜುಕಿ ಸಿದ್ಧಗೊಳಿಸಿರುವ ಹೊಸ ಯೋಜನೆಯಿಂದ ಗ್ರಾಹಕರು ತಮಗೆ ಬೇಕೆಂದ ಕಾರು ಕಾರುಗಳನ್ನು ನಿಗದಿತ ಅವಧಿಯಲ್ಲಿ ಕಾರು ಖರೀದಿಸಬಹುದಾಗಿದೆ.

By Praveen

ಇನ್ಮುಂದೆ ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಾರುಗಳ ಖರೀದಿಗೆ ತಿಂಗಳುಗಟ್ಟಲೇ ಕಾಯಬೇಕಿಲ್ಲ. ಯಾಕೇಂದ್ರೆ ಮಾರುತಿ ಸುಜುಕಿ ಸಿದ್ಧಗೊಳಿಸಿರುವ ಹೊಸ ಯೋಜನೆಯಿಂದ ಗ್ರಾಹಕರು ತಮಗೆ ಬೇಕೆಂದ ಕಾರು ಕಾರುಗಳನ್ನು ನಿಗದಿತ ಅವಧಿಯಲ್ಲಿ ಕಾರು ಖರೀದಿಸಬಹುದಾಗಿದೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಪ್ರಸ್ತುತ ದಿನಗಳಲ್ಲಿ ಹೊಸ ಕಾರು ಖರೀದಿಗೂ ಮುನ್ನ ಬುಕ್ಕಿಂಗ್ ನಂತರ ತಿಂಗಳುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಗ್ರಾಹಕರು ತಮ್ಮ ಆಯ್ಕೆಯಲ್ಲಿ ಬದಲಾವಣೆ ಮಾಡಿ ಮಗದೊಂದು ಕಾರು ಆಯ್ಕೆ ಎದುರು ನೋಡುವ ಅನಿವಾರ್ಯತೆಯಿದ್ದು, ಇದನ್ನು ತಡೆಯಲು ಮಾರುತಿ ಸುಜುಕಿ ಹೊಸ ಯೋಜನೆಯೊಂದನ್ನು ರೂಪಿಸಿದೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ನಿರ್ಮಾಣದ ಬಲೆನೊ ಮತ್ತು ವಿಟಾರಾ ಬ್ರಿಝಾ ಖರೀದಿ ಮಾಡಬೇಕಾದ್ರೆ 20 ವಾರ ಕಾಲ ಕಾಯಬೇಕಾದ ಪರಿಸ್ಥಿತಿಯಿದ್ದು, ಇನ್ಮುಂದೆ ಇದು 6 ರಿಂದ 10 ವಾರಗಳಿಗೆ ಇಳಿಕೆಯಾಗುವ ಸಾಧ್ಯತೆಗಳಿವೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಇದಕ್ಕೆ ಕಾರಣ ಮಾರುತಿ ಸುಜುಕಿ ಸಂಸ್ಥೆಯು ಗುಜರಾತಿನಲ್ಲಿ ಮತ್ತೊಂದು ಹೊಸ ಕಾರು ಉತ್ಪಾದನಾ ಘಟಕವನ್ನು ತೆರೆದಿದ್ದು, ಮುಂದಿನ ತಿಂಗಳಿನಿಂದ ಕಾರು ಉತ್ಪಾದನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಒಂದು ವೇಳೆ ಹೊಸ ಉತ್ಪಾದನಾ ಘಟಕದಲ್ಲಿ ಕಾರು ಉತ್ಪಾದನೆಗೆ ಸದ್ಯದಲ್ಲೇ ಚಾಲನೆ ಸಿಕ್ಕಿದಲ್ಲಿ ಕಾರು ಉತ್ಪಾದನಾ ಪ್ರಕ್ರಿಯೆ ದ್ವಿಗುಣಗೊಳ್ಳಲಿದ್ದು, ಗ್ರಾಹಕರ ಆಯ್ಕೆಗೆ ಸುಲಭವಾಗುವ ಮೂಲಕ ಮಾರಾಟ ಪ್ರಕ್ರಿಯೆಯೂ ಹೆಚ್ಚಳವಾಗುವ ನೀರಿಕ್ಷೆಯಿದೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಇದರಲ್ಲದೇ ಕಳೆದ ಏಪ್ರಿಲ್- ಆಗಸ್ಟ್ ವೇಳೆ ಒಟ್ಟು 91 ಸಾವಿರ ಹ್ಯಾಚ್‌ಬ್ಯಾಕ್ ಮಾದರಿಗಳನ್ನು ಉತ್ಪಾದನೆ ಮಾಡಿರುವ ಮಾರುತಿ ಸುಜುಕಿ, ಈ ವರ್ಷದ ಹಣಕಾಸಿನ ಅವಧಿಗೆ ಒಟ್ಟು 1.50 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುವ ಗುರಿಹೊಂದಿದೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಇದೇ ಉದ್ದೇಶದಿಂದಲೇ ಸದ್ಯಕ್ಕೆ ಲಭ್ಯವಿರುವ ಕಾರು ಉತ್ಪಾದನಾ ಘಟಕಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಜೊತೆ ಜೊತೆಗೆ ಹೊಸದೊಂದು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಾಗುತ್ತಿದ್ದು, ಬಲೆನೊ ಮತ್ತು ವಿಟಾರಾ ಬ್ರಿಝಾ ನಿಗದಿತ ಅವಧಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರು ಪೂರೈಕೆ ಮಾಡುವಲ್ಲಿ ಸಾಧ್ಯವಾಗಲಿದೆ.

ಹೊಸ ಕಾರುಗಳ ಖರೀದಿ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ ಮಾರುತಿ ಸುಜುಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ತಮ ಕಾರ್ಯಕ್ಷಮತೆ ಹೊಂದಿರುವ ಮಾರುತಿ ಸುಜುಕಿ ಉತ್ಪನ್ನಗಳ ಖರೀದಿಗೆ ಗ್ರಾಹಕರು ಮುಂದಾಗುವುದು ಕಾಮನ್. ಆದ್ರೆ ಒಂದು ಕಾರು ಖರೀದಿ ಮಾಡಬೇಕಾದ್ರೆ ಸದ್ಯದ ಪರಿಸ್ಥಿತಿಯಲ್ಲಿ 20 ವಾರಗಳ ಕಾಲ ಕಾಯಬೇಕಿದ್ದು, ಹೊಸ ಕಾರು ಉತ್ಪಾದನಾ ಘಟಕವು ಈ ಸಮಸ್ಯೆಯನ್ನು ತಡೆಯುವಲ್ಲಿ ಸಹಕಾರಿಯಾಗಲಿದೆ.

Most Read Articles

Kannada
English summary
Read in Kannada about Maruti Vitara Brezza And Baleno Waiting Period To Go Down.
Story first published: Tuesday, October 3, 2017, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X