ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರಿನ ಬೆಲೆಗಳಲ್ಲಿ ಇಳಿಕೆ

Written By:

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಸ್ಪೋರ್ಟ್ ಎಸ್‌ಯುವಿಯಲ್ಲಿ ಮುಂಚೂಣಿಯಲ್ಲಿರುವ ಮಿಟ್ಸುಬಿಸಿ ಪಜೆರೊ ಬೆಲೆಗಳಲ್ಲಿ ಭಾರೀ ಇಳಿಕೆಯಾಗಿದ್ದು, ಮಿಟ್ಸುಬಿಸಿ ಘೋಷಣೆ ಮಾಡಿದ ಹೊಸ ದರಗಳ ಮಾಹಿತಿ ಇಲ್ಲಿದೆ.

ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರ್ ಬೆಲೆ ಇಳಿಕೆ

ಐಷಾರಾಮಿ ಹಾಗೂ ಸ್ಪೋರ್ಟ್ ಎಸ್‌ಯುವಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಮಿಟ್ಸುಬಿಸಿ ಸಂಸ್ಥೆಯು ಜಿಎಸ್‌ಟಿ ಜಾರಿ ಹಿನ್ನೆಲೆ ಪಜೆರೊ ಮಾದರಿಗಳ ಮೇಲೆ ಭಾರೀ ಪ್ರಮಾಣದ ಬೆಲೆ ಇಳಿಕೆ ಮಾಡಿದ್ದು, ಪ್ರತಿ ಮಾದರಿ ಮೇಲೂ ಸರಾಸರಿಯಾಗಿ 1.04 ಲಕ್ಷ ಬೆಲೆ ಕಡಿಮೆಗೊಳಿಸಲಾಗಿದೆ.

ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರ್ ಬೆಲೆ ಇಳಿಕೆ

ಹೀಗಾಗಿ ಪ್ರಸುತ್ತ ಬೆಲೆಗಳ ಪ್ರಕಾರ ಮಿಟ್ಸುಬಿಸಿ ಪಜೆರೊ ಆರಂಭಿಕ ಕಾರು ಮಾದರಿಗಳ ಬೆಲೆ ರೂ.26.64 ಲಕ್ಷಕ್ಕೆ ಲಭ್ಯವಿದ್ದು, ಉನ್ನತ ಕಾರು ಮಾದರಿಯ ಬೆಲೆ ರೂ.28.59 ಲಕ್ಷಕ್ಕೆ ಲಭ್ಯವಿರಲಿವೆ.

ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರ್ ಬೆಲೆ ಇಳಿಕೆ

ಪಜೆರೊ 2.5-ಲೀಟರ್ ಎಟಿ 4x4 ಆವೃತ್ತಿ ಹಾಗೂ 2.5-ಲೀಟರ್ ಎಟಿ 4x4 ಲಿಮಿಟ್ ಎಡಿಷನ್ ಮೇಲೆ ರೂ.1.04 ಲಕ್ಷ ಕಡಿತಗೊಳಿಸಲಾಗಿದ್ದು, ಸದ್ಯದ ಬೆಲೆ ಕ್ರಮವಾಗಿ ರೂ.26.64 ಲಕ್ಷ ಮತ್ತು ರೂ.27.13 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರ್ ಬೆಲೆ ಇಳಿಕೆ

ಅದೇ ರೀತಿಯಾಗಿ 2.5-ಲೀಟರ್ ಎಂಟಿ 4x4 ಆವೃತ್ತಿ ಮತ್ತು 2.5-ಲೀಟರ್ ಎಂಟಿ 4x4 ಲಿಮಿಟ್ ಎಡಿಷನ್ ಆವೃತ್ತಿ ಮೇಲೂ 1.04 ಲಕ್ಷ ಕಡಿತಗೊಳಿಸಲಾಗಿದ್ದು, ಸದ್ಯದ ಬೆಲೆಗಳ ಪ್ರಕಾರ ಕ್ರಮಾವಾಗಿ ರೂ.28.09 ಲಕ್ಷ ಹಾಗೂ ರೂ. 28.59 ಲಕ್ಷಕ್ಕೆ ಲಭ್ಯವಿರಲಿವೆ.

ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರ್ ಬೆಲೆ ಇಳಿಕೆ

ಇನ್ನು ಕಳೆದ ಮೇ ತಿಂಗಳಲ್ಲಿ ಬಿಡುಗಡೆಯಾದ ಮಿಟ್ಸುಬಿಸಿ ಸೆಲೆಕ್ಟ್ ಪ್ಲಸ್ ಆವೃತ್ತಿ ಮೇಲೂ ಆಕರ್ಷಕ ದರ ಕಡಿತಗೊಳಿಸಲಾಗಿದ್ದು, ಐಷಾರಾಮಿ ಸ್ಪೋಟ್ ಆವೃತ್ತಿಗಳನ್ನು ಇಷ್ಟಪಡುವ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು.

ಜಿಎಸ್‌ಟಿ ಜಾರಿ ನಂತರ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರ್ ಬೆಲೆ ಇಳಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಮಿಟ್ಸುಬಿಸಿ ಪಜೆರೊ ಆವೃತ್ತಿಗಳಿಗೆ ಅತಿಹೆಚ್ಚು ಬೇಡಿಕೆಯಿದ್ದು, ಬೆಲೆ ಕಡಿತವು ಕಾರು ಮಾರಾಟ ಪ್ರಕ್ರಿಯೆಗೆ ಮತ್ತಷ್ಟು ಸಹಕಾರಿಯಾಗುವ ನೀರಿಕ್ಷೆಯಿದೆ. ಹೀಗಾಗಿ ಪ್ರತಿಸ್ಪರ್ಧಿಗಳಾದ ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್ ಮತ್ತು ಇಸುಝು ಎಂಯುಎಕ್ಸ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡಲಿದೆ.

English summary
Read in Kannada about Mitsubishi Pajero Sport Prices Drop After GST.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark