ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

Written By:

ಭಾರತದಲ್ಲಿ ಷೆವರ್ಲೆ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಪ್ರತಿಷ್ಠಿತ ಜನರಲ್ ಮೋಟಾರ್ಸ್ ದೇಶಿಯವಾಗಿ ಕಾರು ಉತ್ಪಾದನೆಯನ್ನು ಮುಂದುವರಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ನಡುವೆ ನ್ಯೂ ಜನರೇಷನ್ ಕ್ರೂಜಿ ಸೆಡಾನ್ ಕಾರನ್ನು ಮುಂಬೈನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದೆ.

ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

ದೇಶಿಯವಾಗಿ ಷೆವರ್ಲೆ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಜನರಲ್ ಮೋಟಾರ್ಸ್ ಭಾರತದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕಗಳಿಂದಲೇ ವಿದೇಶಿಗಳಿಗೆ ಷೆವರ್ಲೆ ಕಾರುಗಳ ರಫ್ತು ಕೈಗೊಳ್ಳುವ ಬೃಹತ್ ಯೋಜನೆ ರೂಪಿಸಿದೆ.

ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

ಕಳೆದ ಮೇ ಅಂತ್ಯಕ್ಕೆ ಭಾರತದಲ್ಲಿ ಷೆವರ್ಲೆ ಕಾರುಗಳ ಮಾರಾಟ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡ ಹಿನ್ನೆಲೆ ಭಾರತದಲ್ಲಿ ಲಕ್ಷಾಂತರ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಆದ್ರೆ ಮಹತ್ವದ ನಿರ್ಧಾರವನ್ನು ಕೈಗೊಂಡ ಜನರಲ್ ಮೋಟಾರ್ಸ್ ಕಾರು ಉತ್ಪಾದನೆಯನ್ನು ಮುಂದುವರಿಸಿದೆ.

ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

ಕಾರು ಮಾರಾಟ ಸ್ಥಗಿತಗೊಂಡ ನಂತರ ಮೊದಲ ಬಾರಿಗೆ ಅಭಿವೃದ್ಧಿಯಾಗಿರುವ ಷೆವರ್ಲೆ ಕ್ರೂಜಿ ಹಲವು ವಿಶೇಷತೆಗಳಿಂದ ಕೂಡಿದ್ದು, 1.4-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅಭಿವೃದ್ದಿ ಹೊಂದಿದೆ.

ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

ವಿವಿಧ ಸುರಕ್ಷಾ ತಂತ್ರಜ್ಞಾನಗಳು ನ್ಯೂ ಜನರೇಷನ್ ಷೆವರ್ಲೆ ಕ್ರೂಜಿಯಲ್ಲಿದ್ದು, ಮಲ್ಟಿಪಲ್ ಏರ್‌ಬ್ಯಾಗ್, ಎಬಿಎಸ್, ಇಡಿಬಿ, ಇಪಿಎಸ್, ಟ್ರಾನ್‌ಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ಸೌಲಭ್ಯವನ್ನು ಒದಗಿಸಲಾಗಿದೆ.

ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

ಹಳೆಯ ಮಾದರಿಗಿಂತ ಸಂಪೂರ್ಣ ಬದಲಾವಣೆ ಕಂಡಿರುವ ನ್ಯೂ ಜನರೇಷನ್ ಷೆವರ್ಲೆ ಕಾರು ಮಾದರಿಯೂ ಇತರೆ ಸೆಡಾನ್ ಆವೃತ್ತಿಗಳಿಂತ ವಿಭಿನ್ನತೆಯನ್ನು ಹೊಂದಿದೆ. ಆದ್ರೆ ಕಾರಣಾಂತರಗಳಿಂದ ಭಾರತದಲ್ಲಿ ಹೊಸ ಮಾದರಿಯೂ ಮಾರಾಟ ಲಭ್ಯವಿರುವುದಿಲ್ಲ.

ನ್ಯೂ ಜನರೇಷನ್ ಷೆವರ್ಲೆ ಕ್ರೂಜಿ ಕಾರ್ ಟೆಸ್ಟಿಂಗ್ ನಡೆಸಿದ ಜನರಲ್ ಮೋಟಾರ್ಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿ ಕಾರು ಮಾರಾಟವನ್ನು ಜನರಲ್ ಮೋಟಾರ್ಸ್ ಸಂಸ್ಥೆಯು ಸ್ಥಗಿತಗೊಳಿಸಿದ್ದರು ಉತ್ಪಾದನೆಯನ್ನು ಮುಂದುವರೆಸಿರುವುದು ಸಮಾಧಾನಕರ ಸಂಗತಿ. ಯಾಕೇಂದ್ರೆ ಜನರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕವನ್ನು ನಂಬಿರುವ ಲಕ್ಷಾಂತರ ಉದ್ಯೋಗಿಗಳಿಗೆ ಇದು ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು.

English summary
Read in Kannda about New-Generation Chevrolet Cruze Spied Testing In India.
Story first published: Tuesday, July 25, 2017, 11:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark