ಮುಂದಿನ ವಾರ ಬಿಡುಗಡೆಗೊಳ್ಳಲಿರುವ ಡಿಜೈರ್ ಕಾರಿನ ರಹಸ್ಯ ಚಿತ್ರಗಳ ಸೋರಿಕೆ
ಮಾರುತಿ ಸುಜುಕಿ ತನ್ನ ಡಿಜೈರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗಿದ್ದು, ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.
ಭಾರತದ ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಭಾರತದಲ್ಲಿ ಹೊಸ ಪೀಳಿಗೆಯ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಮೇ 16, 2017ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಬಿಡುಗಡೆಗೂ ಮುನ್ನವೇ ಕಾರಿನ ಚಿತ್ರಗಳು ಸೋರಿಕೆಯಾಗಿದೆ.

ಈಗಾಗಲೇ ಕಂಪನಿಯು ಮಾರಾಟಗಾರರಿಗೆ ಮೊದಲ ಹಂತದ ಕಾರಿನ ಸರಕನ್ನು ತಲುಪಿಸಿದ್ದು, ಕಾರು ಮಾರಾಟಗಾರರ ಕೈ ಸೇರಿದ ಮೇಲೆ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ ಎನ್ನಲಾಗಿದೆ.

ಮೂರನೇ ಪೀಳಿಗೆಯ ಈ ಮಾರುತಿ ಸುಜುಕಿ ಡಿಜೈರ್ ವಿ ಟ್ರಿಮ್ ಆವೃತಿಯಾಗಿದ್ದು, ವಿ ವಿಭಿನ್ನತೆಯ ಕಾಂಪ್ಯಾಕ್ಟ್ ಸೆಡಾನ್ ಕಾರು ವಿಡಿಐ ಮತ್ತು ವಿಎಕ್ಸ್ಐ ಆಯ್ಕೆಗಳಲ್ಲಿ ನಿಮ್ಮ ಮುಂದೆ ಮುಂದಿನ ವಾರ ಬರಲಿದೆ.

ವಿ ವಿಭಿನ್ನತೆ ಹೊಂದಿರುವ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರು ಕ್ರೋಮ್ ವಿಶೇಷತೆಯ ಹೊಂದಿದ್ದು, ಮುಂಭಾಗದ ಗ್ರಿಲ್ ಮತ್ತು ಫಾಗ್ ಲ್ಯಾಂಪ್ ಹೌಸ್ ಇರಿಸಲಾಗಿದೆ.

ಈ ಹೊಚ್ಚ ಹೊಸ ಮೂರನೇ ಮಾದರಿಯ ವಾಹನದ ಮೈಬಣ್ಣ ಸರಿ ಹೊಂದುವಂತಹ ORVMಗಳು ಮತ್ತು ಹಿಂಬದಿಯಲ್ಲಿ ಎಲ್ಇಡಿ ಪೈಲಟ್ ದೀಪಗಳನ್ನು ಅಳವಡಿಸಲಾಗಿದೆ.

ವಿ ದರ್ಜೆಯ ಡಿಜೈರ್ ಕಾರಿಗೆ ಹಿಂಭಾಗದ ಪಾರ್ಕಿಂಗ್ ಸಂವೇದಕವನ್ನು ನೀಡಲಾಗಿಲ್ಲ, ಮತ್ತು ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು, ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪಗಳನ್ನು ಕಾರಿನ ಉನ್ನತ ದರ್ಜೆಯ ವಾಹನದಲ್ಲಿ ಮಾತ್ರ ನೀಡಲಾಗಿದೆ.

1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು ಹೆಚ್ಚು ಜನರ ಮನಸ್ಸನ್ನು ಕದಿಯಲಿರುವುದಂತೂ ಖಂಡಿತ.

5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು ವಿ ಟ್ರಿಮ್ ಹಾಗು ಅದಕ್ಕೂ ಮೇಲಿನ ಮಾದರಿಯಲ್ಲಿ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದೆ.


Click it and Unblock the Notifications








